Asianet Suvarna News Asianet Suvarna News

ಕೇನ್ ವಿಲಿಯಮ್ಸನ್‌ ಹೆಬ್ಬೆರಳು ಮುರಿತ: ಮತ್ತೆ 3 ಪಂದ್ಯಕ್ಕೆ ಅಲಭ್ಯ

ಬಾಂಗ್ಲಾದೇಶ ವಿರುದ್ದ ರನ್‌ಗಾಗಿ ಓಡುವ ವೇಳೆ ಫೀಲ್ಡರ್ ಎಸೆದ ಚೆಂಡು ಕೇನ್ ಕೈಬೆರಳಿಗೆ ಬಡಿಯಿತು. ಸ್ಕ್ಯಾನ್‌ ವೇಳೆ ಅವರ ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿರುವುದು ಕಂಡುಬಂದಿದ್ದು, ಹೀಗಾಗಿ ಕನಿಷ್ಠ 2 ವಾರ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.

New Zealand suffer Williamson blow with fractured thumb confirmed likely to miss 3 matches kvn
Author
First Published Oct 15, 2023, 2:44 PM IST

ಚೆನ್ನೈ(ಅ.15): ಐಪಿಎಲ್ ವೇಳೆ ಆಗಿದ್ದ ಮಂಡಿ ಗಾಯದಿಂದ ಚೇತರಿಸಿಕೊಂಡು, ಶುಕ್ರವಾರವಷ್ಟೇ ವಿಶ್ವಕಪ್‌ನ ಬಾಂಗ್ಲಾದೇಶ ವಿರುದ್ದದ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಮತ್ತೆ ಗಾಯಗೊಂಡಿದ್ದಾರೆ. 

ಬಾಂಗ್ಲಾದೇಶ ವಿರುದ್ದ ರನ್‌ಗಾಗಿ ಓಡುವ ವೇಳೆ ಫೀಲ್ಡರ್ ಎಸೆದ ಚೆಂಡು ಕೇನ್ ಕೈಬೆರಳಿಗೆ ಬಡಿಯಿತು. ಸ್ಕ್ಯಾನ್‌ ವೇಳೆ ಅವರ ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿರುವುದು ಕಂಡುಬಂದಿದ್ದು, ಹೀಗಾಗಿ ಕನಿಷ್ಠ 2 ವಾರ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಭಾರತ ವಿರುದ್ದ ಅ.22ರ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ. ಹೀಗಾಗಿ ಟಾಮ್ ಬ್ಲಂಡೆಲ್‌ಗೆ ತಂಡ ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ಕೇನ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಿದ್ದರು.

ICC World Cup 2023 ಅಹಮದಾಬಾದ್‌ನಲ್ಲಿ 1 ದಿನ ಮೊದಲೇ ನವರಾತ್ರಿ ಸಂಭ್ರಮ!

ಕಳೆದೆರಡು ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ನ್ಯೂಜಿಲೆಂಡ್ ತಂಡವು ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕಾದ ಛಲದಿಂದ ಕಣಕ್ಕಿಳಿದಿದೆ. ಸದ್ಯ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನಾಡಿರುವ ಕಿವೀಸ್ ತಂಡವು ಮೂರು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

ವಿಶ್ವಕಪ್‌ನಿಂದ ಲಂಕಾದ ದಸುನ್ ಶಾನಕ ಹೊರಕ್ಕೆ

ನವದೆಹಲಿ: ಗಾಯದಿಂದಾಗಿ ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಶ್ರೀಲಂಕಾ ತಂಡಕ್ಕೆ ವಿಶ್ವಕಪ್‌ನಲ್ಲಿ ಮತ್ತೊಂದು ಆಘಾತ ಎದುರಾಗಿದ್ದು, ಬಲ ತೊಡೆಯ ಗಾಯಕ್ಕೆ ತುತ್ತಾಗಿರುವ ನಾಯಕ ದಸುನ್ ಶಾನಕ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರು ಪಾಕಿಸ್ತಾನ ವಿರುದ್ದದ ಪಂದ್ಯದ ವೇಳೆ ಗಾಯಗೊಂಡಿದ್ದು, ಚೇತರಿಕೆಗೆ ಮೂರು ವಾರಗಳ ಅಗತ್ಯವಿದೆ. 

World Cup 2023: 'ಜಯ್ ಶಾ' ಹೆಸರಿನ ವ್ಯಕ್ತಿಯಿಂದ ಟಿಕೆಟ್ ವಂಚನೆ..! ಮೋಸಗಾರ ಆರೆಸ್ಟ್..!

ಹೀಗಾಗಿ ಮೀಸಲು ಆಟಗಾರ ಚಾಮಿಕ ಕರುಣಾರತ್ನೆ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕುಸಾಲ್ ಮೆಂಡಿಸ್ ಮುಂದಿನ ಪಂದ್ಯಗಳಿಗೆ ತಂಡದ ನಾಯಕತ್ವ ವಹಿಸುವ ಸಾಧ್ಯತೆಯಿದೆ.  

ಎಲ್ಲಾ ಮಾದರಿ ಕ್ರಿಕೆಟ್‌ಗೆ ಇಂಗ್ಲೆಂಡ್‌ನ ಕುಕ್‌ ನಿವೃತ್ತಿ

ಲಂಡನ್‌: ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್‌ ಕುಕ್‌ ತಮ್ಮ 2 ದಶಕಗಳ ಕ್ರಿಕೆಟ್‌ ಬದುಕಿಗೆ ತೆರೆ ಎಳೆದಿದ್ದಾರೆ. 38 ವರ್ಷದ ಕುಕ್‌ ಶುಕ್ರವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 2003ರಲ್ಲಿ ಕೌಂಟಿ ಕ್ರಿಕೆಟ್‌ ಆಡಲು ಆರಂಭಿಸಿದ್ದ ಕುಕ್‌, 2006ರಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2018ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ ಎಸೆಕ್ಸ್‌ ಕೌಂಟಿ ತಂಡದ ಪರ ಆಟ ಮುಂದುವರಿಸಿದ್ದರು. ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಕುಕ್‌ 562 ಪಂದ್ಯಗಳನ್ನಾಡಿದ್ದು, 88 ಶತಕ, 168 ಅರ್ಧಶತಕಗಳೊಂದಿಗೆ 34045 ರನ್‌ ಗಳಿಸಿದ್ದಾರೆ.

Follow Us:
Download App:
  • android
  • ios