Asianet Suvarna News Asianet Suvarna News

ICC World Cup 2023 ಅಹಮದಾಬಾದ್‌ನಲ್ಲಿ 1 ದಿನ ಮೊದಲೇ ನವರಾತ್ರಿ ಸಂಭ್ರಮ!

ಪಂದ್ಯಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಲಿವುಡ್‌ನ ಖ್ಯಾತ ಗಾಯಕರು ಸಂಗೀತ ಸುಧೆ ಹರಿಸಿದರು. ಆದರೆ ಈ ಕಾರ್ಯಕ್ರಮವನ್ನು ಟೀವಿಯಲ್ಲಿ ನೇರ ಪ್ರಸಾರ ಮಾಡದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಸಿಟ್ಟಾದರು.

India vs Pakistan World Cup Ahmedabad heavy celebration before Navratri kvn
Author
First Published Oct 15, 2023, 11:55 AM IST

ಅಹಮದಾಬಾದ್‌(ಅ.15) ಭಾರತ-ಪಾಕಿಸ್ತಾನ ಪಂದ್ಯದಿಂದಾಗಿ ಅಹಮದಾಬಾದ್‌ನಲ್ಲಿ ಒಂದು ದಿನ ಮೊದಲೇ ನವರಾತ್ರಿ ಸಂಭ್ರಮ ಶುರುವಾಗುವಂತೆ ಮಾಡಿತ್ತು. ಮಧ್ಯಾಹ್ನ 2ರ ಪಂದ್ಯಕ್ಕೆ ಬೆಳಗ್ಗೆ 10ರಿಂದಲೇ ಮೋದಿ ಸ್ಟೇಡಿಯಂನತ್ತ ಜನಸಾಗರ ಹರಿದುಬಂತು. ಪಂದ್ಯಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಲಿವುಡ್‌ನ ಖ್ಯಾತ ಗಾಯಕರು ಸಂಗೀತ ಸುಧೆ ಹರಿಸಿದರು. ಆದರೆ ಈ ಕಾರ್ಯಕ್ರಮವನ್ನು ಟೀವಿಯಲ್ಲಿ ನೇರ ಪ್ರಸಾರ ಮಾಡದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಸಿಟ್ಟಾದರು.

ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಹಲವು ಗಣ್ಯರೂ ಉಪಸ್ಥಿತರಿದ್ದರು. ನೀಲಿ ಜೆರ್ಸಿಗಳು, ತ್ರಿವರ್ಣ ಧ್ವಜಗಳಿಂದ ಕ್ರೀಡಾಂಗಣ ಕಂಗೊಳಿಸಿತು.

ನ್ಯೂಜಿಲೆಂಡ್, ದುಬೈ, ಅಮೆರಿಕದಿಂದ ಪಂದ್ಯ ವೀಕ್ಷಣೆಗಾಗಿ ಬಂದ್ರು..!

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಿದ್ದರು. ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನವರೇ ಇದ್ದರು ಎನ್ನಲಾಗಿದೆ. ಅಮೆರಿಕ, ನ್ಯೂಜಿಲೆಂಡ್, ದುಬೈ, ಬ್ರಿಟನ್ ಸೇರಿ ಇನ್ನೂ ಹಲವು ದೇಶಗಳಿಂದ ಅಭಿಮಾನಿಗಳು ಆಗಮಿಸಿದ್ದರು. 

World Cup 2023: 'ಜಯ್ ಶಾ' ಹೆಸರಿನ ವ್ಯಕ್ತಿಯಿಂದ ಟಿಕೆಟ್ ವಂಚನೆ..! ಮೋಸಗಾರ ಆರೆಸ್ಟ್..!

ವಿಮಾನ ಟಿಕೆಟ್ ಬೆಲೆ ಗಗನಕ್ಕೇರಿದ್ದರೂ ದೇಶದ ಮೂಲೆ ಮೂಲೆಯಿಂದಲೂ ಜನ ಬಂದಿದ್ದರು. ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಸಹ ನಡೆಯಿತು ಎನ್ನಲಾಗಿದೆ. 2000 ರುಪಾಯಿ ಟಿಕೆಟ್ 25000 ರುಪಾಯಿಗೆ ಖರೀದಿಸಿದ್ದಾಗಿ ಬೆಂಗಳೂರಿನ ಸರ್ಜನ್‌ ಒಬ್ಬರು ಹೇಳಿಕೊಂಡಿದ್ದಾರೆ.

ಗುಟ್ಕಾ ಪ್ಯಾಕೇಟ್‌ ಚೆಕ್‌ ಮಾಡುವಷ್ಟರಲ್ಲಿ ಪೊಲೀಸರು ಹೈರಾಣ!

ಭಾರತ-ಪಾಕ್‌ ಪಂದ್ಯ ವೀಕ್ಷಣೆಗೆ ಬಂದಿದ್ದ 1.3 ಲಕ್ಷ ಮಂದಿಯನ್ನು ಕ್ರೀಡಾಂಗಣದ ಒಳಕ್ಕೆ ಬಿಡುವಷ್ಟರಲ್ಲಿ ಪೊಲೀಸರು ಹೈರಾಣಾದರು. ಕಾರಣ, ಪ್ರತಿಯೊಬ್ಬರ ಜೀಬಲ್ಲೂ ಗುಟ್ಕಾ ಪ್ಯಾಕೇಟ್‌ಗಳಿದೆಯೇ ಎಂದು ಪರಿಶೀಲಿಸುವ ಹೊಣೆ ಪೊಲೀಸರ ಮೇಲಿತ್ತು. ಈ ಹಿಂದೆಯೂ ಗುಟ್ಕಾ ಪೊಟ್ಟಣಗಳನ್ನು ತರದಂತೆ ಗುಜರಾತ್‌ ಕ್ರಿಕೆಟ್‌ ಸಂಸ್ಥೆ(ಜಿಸಿಎ) ನಿಷೇಧ ಹೇರಿತ್ತಾದರೂ, ಪ್ರೇಕ್ಷಕರು ಅದಕ್ಕೆ ಸೊಪ್ಪು ಹಾಕಿರಲಿಲ್ಲ. 

ಆಫ್ಘಾನ್ ಸವಾಲಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ರೆಡಿ..!

ಕ್ರೀಡಾಂಗಣದ ಶೌಚಾಲಯದಲ್ಲಿ ಗುಟ್ಕಾ ಉಗಿದ ಪರಿಣಾಮ, ಒಳಚರಂಡಿ ಕಟ್ಟಿಕೊಂಡು ಭಾರಿ ಸಮಸ್ಯೆ ಎದುರಾಗಿತ್ತು. ಅಲ್ಲದೇ ಹಲವು ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದ ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು ಜಿಸಿಎ ಭಾರಿ ಹಣ ಖರ್ಚು ಮಾಡಿತ್ತು. ಇದರಿಂದಾಗಿ ಈ ಬಾರಿ ಪೊಲೀಸರಿಗೆ ಜಿಸಿಎ ಅಧಿಕಾರಿಗಳು ಪ್ರೇಕ್ಷಕರ ಜೇಬುಗಳನ್ನು ಪರಿಶೀಲಿಸಿ ಒಳಬಿಡುವಂತೆ ಕೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

ಏಕದಿನದಲ್ಲಿ ರೋಹಿತ್‌ 300 ಸಿಕ್ಸರ್‌: 3ನೇ ಬ್ಯಾಟರ್‌

ಪಾಕ್‌ ವಿರುದ್ಧ 6 ಸಿಕ್ಸರ್‌ ಚಚ್ಚಿದ ರೋಹಿತ್‌, ಏಕದಿನ ಕ್ರಿಕೆಟ್‌ನಲ್ಲಿ 300 ಸಿಕ್ಸರ್‌ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಿದ ಭಾರತದ ಮೊದಲ, ವಿಶ್ವದ 3ನೇ ಬ್ಯಾಟರ್‌ ಎನಿಸಿದರು. ಪಾಕಿಸ್ತಾನದ ಶಾಹಿದ್‌ ಅಫ್ರಿದಿ 351 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ವಿಂಡೀಸ್‌ನ ಕ್ರಿಸ್‌ ಗೇಲ್‌ 331 ಸಿಕ್ಸರ್‌ನೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಸದ್ಯ 303 ಸಿಕ್ಸರ್‌ಗಳೊಂದಿಗೆ ರೋಹಿತ್‌ 3ನೇ ಸ್ಥಾನದಲ್ಲಿದ್ದಾರೆ.
 

Follow Us:
Download App:
  • android
  • ios