World Cup 2023: 'ಜಯ್ ಶಾ' ಹೆಸರಿನ ವ್ಯಕ್ತಿಯಿಂದ ಟಿಕೆಟ್ ವಂಚನೆ..! ಮೋಸಗಾರ ಆರೆಸ್ಟ್..!
ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ) ಏಜೆಂಟ್ ಎಂದು ಸುಳ್ಳು ಹೇಳಿ ವ್ಯಕ್ತಿಯೊಬ್ಬನಿಗೆ 41 ಟಿಕೆಟ್ ಕೊಡಿಸುವುದಾಗಿ 2.68 ಲಕ್ಷ ರು. ವಂಚಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜಯ್ ಶಾ ಎಂಬಾತ ಫೇಸ್ಬುಕ್ ಪೇಜ್ ಮೂಲಕ ತನ್ನನ್ನು ಜಿಸಿಎ ಏಜೆಂಟ್ ಎಂದು ಹೇಳಿಕೊಂಡು, ಮಾಸ್ರಿ ಕಂಡೋರಿಯಾ ಎಂಬವರಿಗೆ ವಂಚನೆ ಮಾಡಿದ್ದಾನೆ.
ಅಹಮದಾಬಾದ್(ಅ.15): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿತ್ತು. ಪಂದ್ಯದ ಕ್ರೇಜ್ ಹೇಗಿತ್ತು ಅಂದ್ರೆ ಕೆಲವು ಟಿಕೆಟ್‌ಗಳು ಬ್ಲಾಕ್‌ನಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಸೇಲಾಗಿದ್ದಾಗಿ ವರದಿಯಾಗಿವೆ. ಜಗತ್ತಿನ ಅತಿದೊಡ್ಡ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ 41 ಟಿಕೆಟ್ ಕೊಡಿಸುವುದಾಗಿ ಹೇಳಿ ಜಯ್ ಶಾ ಹೆಸರಿನ ವ್ಯಕ್ತಿಯೊಬ್ಬ ವಂಚನೆ ಮಾಡಿದ ಆರೋಪದಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ) ಏಜೆಂಟ್ ಎಂದು ಸುಳ್ಳು ಹೇಳಿ ವ್ಯಕ್ತಿಯೊಬ್ಬನಿಗೆ 41 ಟಿಕೆಟ್ ಕೊಡಿಸುವುದಾಗಿ 2.68 ಲಕ್ಷ ರು. ವಂಚಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜಯ್ ಶಾ ಎಂಬಾತ ಫೇಸ್ಬುಕ್ ಪೇಜ್ ಮೂಲಕ ತನ್ನನ್ನು ಜಿಸಿಎ ಏಜೆಂಟ್ ಎಂದು ಹೇಳಿಕೊಂಡು, ಮಾಸ್ರಿ ಕಂಡೋರಿಯಾ ಎಂಬವರಿಗೆ ವಂಚನೆ ಮಾಡಿದ್ದಾನೆ. ತನ್ನ ಸ್ನೇಹಿತರಿಗೆ ಬೇಕಿದ್ದ 41 ಟಿಕೆಟ್‌ಗಳನ್ನು ಪಡೆಯಲು ಮಾಸ್ರಿ 2.68 ಲಕ್ಷ ರು.ಗಳನ್ನು ಶಾಗೆ ನೀಡಿದ್ದಾರೆ. ಆದರೆ ಟಿಕೆಟ್ ಸಿಗದಿದ್ದಾಗ ವಂಚನೆಗೊಳಗಾಗಿದ್ದು ಅರಿವಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ರಿಜ್ವಾನ್‌ಗೆ ತಿರುಗೇಟು, ಪಾಕ್ ವಿರುದ್ಧದ ಗೆಲುವು ಇಸ್ರೇಲ್‌ಗೆ ಅರ್ಪಿಸಿದ ಸೋನು ನಿಗಮ್!
ಮಾಸ್ರಿ ಕಂಡೋರಿಯಾ ಎನ್ನುವವರು ಸೆಪ್ಟೆಂಬರ್ 22-23ರ ಸಂದರ್ಭದಲ್ಲಿ ಜಯ್ ಶಾ ಹೆಸರಿನ ವ್ಯಕ್ತಿಯೊಬ್ಬ ಫೇಸ್‌ಬುಕ್ ಪೇಜ್‌ನಲ್ಲಿ ತಾವು ಗುಜರಾತ್ ಕ್ರಿಕೆಟ್ ಸಂಸ್ಥೆ ಏಜೆಂಟ್ ಎಂದು ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಮಾತುಕತೆ ನಡೆದು 41 ಟಿಕೆಟ್‌ಗಳು ಬೇಕೆಂದು 2.68 ಲಕ್ಷ ರುಪಾಯಿಗಳನ್ನು ಪಡೆದು ವಂಚಿಸಿದ್ದಾರೆ ಎಂದು ಆನಂದನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಇನ್‌ಸ್ಪೆಕ್ಟರ್ ವಿಎಂ ದೇಸಾಯಿ ತಿಳಿಸಿದ್ದಾರೆ.
ದೂರುದಾರರು ಹಾಗೂ ಅವರು ಸ್ನೇಹಿತರು ಸೇರಿ ಮೊದಲ ಹಂತದ 15 ಟಿಕೆಟ್‌ಗಳಿಗಾಗಿ 90 ಸಾವಿರ ರುಪಾಯಿ ಪಾವತಿಸಿದ್ದಾರೆ. ಇದಾದ ಬಳಿಕ ಇನ್ನ 5 ಟಿಕೆಟ್‌ಗಳಿಗಾಗಿ 30 ಸಾವಿರ ರುಪಾಯಿ ನೀಡಿದ್ದಾರೆ. ಇದೇ ರೀತಿ ಜಯ್ ಶಾ ಎನ್ನುವ ಹೆಸರಿನ ವ್ಯಕ್ತಿ ಪದೇ ಪದೇ ಹಣವನ್ನು ಪಡೆದುಕೊಂಡು ಒಂದೇ ಒಂದು ಟಿಕೆಟ್ ನೀಡದೇ ವಂಚಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆನಂದನಗರ ಪೊಲೀಸರು ಮೋಸಗಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸತತ 8ನೇ ಜಯ । ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೆ ಜಿಗಿತ
ಅಹಮದಾಬಾದ್: ಟೀಂ ಇಂಡಿಯಾದ ‘ಮಿಷನ್ ಪಾಕಿಸ್ತಾನ 2023’ ಯಶಸ್ವಿಯಾಗಿದೆ. ಬದ್ಧವೈರಿಯನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದ ಭಾರತ, ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸತತ 8ನೇ ಜಯ ಸಾಧಿಸಿ ಅಜೇಯ ಓಟ ಮುಂದುವರಿಸಿದೆ. ಈ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ರೋಹಿತ್ ಶರ್ಮಾ ಪಡೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದ್ದು, ನಿರಾಯಾಸವಾಗಿ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ.
ದೇವ್ರನ್ನ ಬೇಡಿಕೊಂಡು ಬಾಲ್ ಎಸೆದ ಹಾರ್ದಿಕ್, ಬಿತ್ತು ಇಮಾಮ್ ವಿಕೆಟ್! ವಿಡಿಯೋ ವೈರಲ್
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಲಕ್ಷ ಪ್ರೇಕ್ಷಕರ ಎದುರು ನಡೆದ ಹೈವೋಲ್ಟೇಜ್ ಸಮರದಲ್ಲಿ ಭಾರತ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಒತ್ತಡದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ನಿರೀಕ್ಷೆಯಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ತನ್ನ ಮಾರಕ ಬೌಲಿಂಗ್ ದಾಳಿಯಿಂದ ಪಾಕಿಸ್ತಾನವು 42.5 ಓವರಲ್ಲಿ 191 ರನ್‌ಗೆ ಗಂಟೂಮೂಟೆ ಕಟ್ಟುವಂತೆ ಮಾಡಿತು.
ಆ ನಂತರ ರೋಹಿತ್ ಶರ್ಮಾ ಅವರ ಪ್ರಚಂಡ ಬ್ಯಾಟಿಂಗ್, ಭಾರತ ಇನ್ನೂ 117 ಎಸೆತ ಬಾಕಿ ಇರುವಂತೆ ಗೆಲ್ಲಲು ಸಹಕಾರಿಯಾಯಿತು. ಶ್ರೇಯಸ್ ಅಯ್ಯರ್‌ರ ಅಜೇಯ ಅರ್ಧಶತಕವೂ ಗೆಲುವಿಗೆ ನೆರವಾಯಿತು.