ನಿವೃತ್ತಿ ಹೇಳಿದ್ದ ನೀಲ್ ವ್ಯಾಗ್ನರ್ ಮತ್ತೆ ಕಿವೀಸ್ ತಂಡಕ್ಕೆ?
ಇತ್ತೀಚೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್, ನ್ಯೂಜಿಲೆಂಡ್ ಪರ ವ್ಯಾಗ್ನರ್ ಆಡಿದ ಕೊನೆಯ ಪಂದ್ಯ ಎನಿಸಿಕೊಂಡಿತ್ತು. ಕೇವಲ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ವ್ಯಾಗ್ನರ್, 64 ಪಂದ್ಯಗಳಲ್ಲಿ 260 ವಿಕೆಟ್ ಕಬಳಿಸಿದ್ದಾರೆ.
ಕ್ರೈಸ್ಟ್‌ಚರ್ಚ್: ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ನ್ಯೂಜಿಲೆಂಡ್‌ನ ವೇಗಿ ನೀಲ್ ವ್ಯಾಗ್ನರ್ ಅವರಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೊದಲ ಟೆಸ್ಟ್‌ನಲ್ಲಿ ವೇಗಿ ವಿಲ್ ಒರೌರ್ಕೆ ಗಾಯಗೊಂಡಿದ್ದು, 2ನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಅವರ ಬದಲು ವ್ಯಾಗ್ನರ್‌ಗೆ ಕರೆ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್, ನ್ಯೂಜಿಲೆಂಡ್ ಪರ ವ್ಯಾಗ್ನರ್ ಆಡಿದ ಕೊನೆಯ ಪಂದ್ಯ ಎನಿಸಿಕೊಂಡಿತ್ತು. ಕೇವಲ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ವ್ಯಾಗ್ನರ್, 64 ಪಂದ್ಯಗಳಲ್ಲಿ 260 ವಿಕೆಟ್ ಕಬಳಿಸಿದ್ದಾರೆ. ಕಿವೀಸ್ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವ್ಯಾಗ್ನರ್ 5ನೇ ಸ್ಥಾನದಲ್ಲಿದ್ದಾರೆ.
IPL 2024 ಗುಜರಾತ್ ಟೈಟಾನ್ಸ್ ಕ್ರಿಕೆಟಿಗನಿಗೆ ಅಪಘಾತ..! ಸೂಪರ್ ಬೈಕ್ ಅಪ್ಪಚ್ಚಿ..!
ಟೆಸ್ಟ್: ಕಿವೀಸ್ ವಿರುದ್ಧ ಆಸೀಸ್‌ಗೆ 172 ರನ್ ಜಯ
ವೆಲ್ಲಿಂಗ್ಟನ್: ನೇಥನ್ ಲಯನ್ ಪಡೆದ 10 ವಿಕೆಟ್‌ಗಳ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 172 ರನ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಗೆಲುವಿಗೆ 369 ರನ್ ಗುರಿ ಪಡೆದಿದ್ದ ಕಿವೀಸ್ 196 ರನ್‌ಗೆ ಸರ್ವಪತನ ಕಂಡಿತು.
3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 111 ರನ್ ಗಳಿಸಿದ್ದ ಕಿವೀಸ್‌ಗೆ ಭಾನುವಾರ ನೇಥನ್ ದುಸ್ವಪ್ನವಾಗಿ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಅವರು 2ನೇ ಇನ್ನಿಂಗ್ಸ್‌ನಲ್ಲಿ 64 ರನ್ ನೀಡಿ 6 ವಿಕೆಟ್ ಕಿತ್ತು ಆಸೀಸ್ ಗೆಲುವಿನ ರೂವಾರಿ ಎನಿಸಿಕೊಂಡರು. ರಚಿನ್ ರವೀಂದ್ರ(59) ಏಕಾಂಗಿ ಹೋರಾಟ ವ್ಯರ್ಥವಾಯಿತು.
ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ಮಿಂಚು..! ಮಹಿ ನೋಡಿ ದಂಗಾದ ಫ್ಯಾನ್ಸ್
9 ದೇಶಗಳಲ್ಲಿ 5+ ವಿಕೆಟ್: ಆಸೀಸ್‌ನ ಲಯನ್ ದಾಖಲೆ
ವೆಲ್ಲಿಂಗ್ಟನ್: ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್ ನೇಥನ್ ಲಯನ್ ಟೆಸ್ಟ್ ಕ್ರಿಕೆಟ್‌ನಲ್ಲಿ 9 ದೇಶಗಳಲ್ಲಿ 5 ವಿಕೆಟ್ ಗೊಂಚಲು ಪಡೆದ ವಿಶ್ವದ 3ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಲಯನ್ 6 ವಿಕೆಟ್ ಕಿತ್ತರು.
ಈ ಮೂಲಕ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ ಬಳಿಕ ಕಿವೀಸ್ ನೆಲದಲ್ಲೂ 5 ವಿಕೆಟ್ ಕಿತ್ತ ಸಾಧನೆ ಮಾಡಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಕೂಡಾ 9 ದೇಶಗಳಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದರು. ಪಾಕಿಸ್ತಾನದ ವಾಸಿಂ ಅಕ್ರಂ ಹಾಗೂ ವಖಾರ್ ಯೂನಿಸ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ 8 ದೇಶಗಳಲ್ಲಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದಾರೆ.