* ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿಯಿಂದ ಮಹತ್ವದ ತೀರ್ಮಾನ* ಪುರುಷ ಹಾಗೂ ಮಹಿಳಾ ತಂಡದ ಆಟಗಾರ್ತಿಯರಿಗೆ ಸಮಾನ ವೇತನ ನೀಡಲು ತೀರ್ಮಾನ* ಆಗಸ್ಟ್ 01ರಿಂದಲೇ ಈ ಮಹತ್ವದ ಯೋಜನೆ ಜಾರಿ

ಕ್ರೈಸ್ಟ್‌ಚರ್ಚ್‌(ಜು.06)‍: ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುವ ಮಹತ್ವದ ನಿರ್ಧಾರವನ್ನು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಕೈಗೊಂಡಿದೆ. ಈ ಮೂಲಕ ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿಯು ಲಿಂಗ ಸಮಾನತೆ ಸಾರುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಇನ್ನು ಮುಂದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಹಿಳಾ ಹಾಗೂ ಪುರುಷ ಆಟಗಾರರು ಸಮಾನ ವೇತನವನ್ನು ಪಡೆಯಲಿದ್ದಾರೆ.

ಈ ಸಂಬಂಧ ನ್ಯೂಜಿಲೆಂಡ್‌ ಕ್ರಿಕೆಟ್‌ (New Zealand Cricket) ಹಾಗೂ ಆಟಗಾರರನ್ನು ಪ್ರತಿನಿಧಿಸುವ ಪ್ರಮುಖ ಆರು ಸಂಸ್ಥೆಗಳ ಜೊತೆ ಮಂಡಳಿಯು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ರಾಷ್ಟ್ರೀಯ ತಂಡ ಮತ್ತು ದೇಸಿ ಕ್ರಿಕೆಟ್‌ನಲ್ಲಿ ಆಡುವ ಮಹಿಳಾ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪುರುಷರು ಪಡೆಯುವಷ್ಟೇ ವೇತನ ಪಡೆಯಲಿದ್ದಾರೆ. ಇದು ಕ್ರಿಕೆಟ್‌ನ ಎಲ್ಲ ಮೂರು ಮಾದರಿಗಳಿಗೂ ಅನ್ವಯವಾಗಲಿದೆ.

ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು (New Zealand Cricket Board) ತೆಗೆದುಕೊಂಡು ಈ ತೀರ್ಮಾನವು ಮಹಿಳಾ ಕ್ರಿಕೆಟ್‌ (Women's Cricket) ಪಾಲಿಗೆ ಗೇಮ್‌ ಚೇಂಜರ್ ಆಗಲಿದೆ ಎಂದು ಕಿವೀಸ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿಯಾ ಡಿವೈನ್‌ ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ ಆಡುವ ಮಹಿಳಾ ಆಟಗಾರ್ತಿಯರು ಸಮಾನವೆಂದು ಪರಿಗಣಿಸಿ ಸಮಾನ ವೇತನ ನೀಡಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಈ ನಿರ್ಧಾರದಿಂದ ಸಾಕಷ್ಟು ಯುವ ಮಹಿಳಾ ಹಾಗೂ ಹುಡುಗಿಯರು ಕ್ರಿಕೆಟ್‌ನತ್ತ ಇನ್ನಷ್ಟು ಒಲವು ತೋರಲಿದ್ದಾರೆ ಎಂದು ಡಿವೈನ್ ಹೇಳಿದ್ದಾರೆ.

Scroll to load tweet…

ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿಯ ಈ ದಿಟ್ಟ ಹೆಜ್ಜೆಯನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್‌ ವಿಲಿಯಮ್ಸನ್ (Kane Williamson) ಸ್ವಾಗತಿಸಿದ್ದಾರೆ. ಈಗಿನ ಆಟಗಾರರಿಗೆ ಈ ತೀರ್ಮಾನದಿಂದ ಸಾಕಷ್ಟು ಪ್ರಯೋಜನವಾಗಲಿದೆ. ಈಗಿನಿಂದಲೇ ಪುರುಷ-ಮಹಿಳೆ ಎನ್ನದೇ ಬೆಂಬಲ ಸೂಚಿಸುವುದು ದೀರ್ಘಾವಧಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಈ ಒಪ್ಪಂದದಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ರಮೀಜ್‌ ರಾಜಾಗೆ ಜೀವ ಭಯ: ಬುಲೆಟ್‌ಪ್ರೂಫ್‌ ವಾಹನದಲ್ಲಿ ಓಡಾಟ..!

ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುವ ಒಪ್ಪಂದವು ಮುಂಬರುವ ಆಗಸ್ಟ್‌ 01ರಿಂದಲೇ ಜಾರಿಗೆ ಬರಲಿದೆ. ಇದು ಪುರುಷರು ಪಡೆಯುವ ಎಲ್ಲಾ ಸೌಕರ್ಯಗಳನ್ನು ಮಹಿಳೆಯರೂ ಪಡೆಯವ ವ್ಯವಸ್ಥೆಯನ್ನು ಒಳಗೊಂಡಿರಲಿದೆ.

ಏಕದಿನ ರ‍್ಯಾಂಕಿಂಗ್‌‌: ಸ್ಮೃತಿ, ಶಫಾಲಿ ಪ್ರಗತಿ

ದುಬೈ: ಮಂಗಳವಾರ ಬಿಡುಗಡೆಯಾದ ಐಸಿಸಿ ನೂತನ ಮಹಿಳಾ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಸ್ಮತಿ ಮಂಧನಾ 8ನೇ ಸ್ಥಾನಕ್ಕೇರಿದ್ದಾರೆ. ಅವರು ಅಗ್ರ-10ರಲ್ಲಿರುವ ಏಕೈಕ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಶಫಾಲಿ ವರ್ಮಾ 12 ಸ್ಥಾನ ಮೇಲಕ್ಕೇರಿ 36ನೇ ಸ್ಥಾನ ಪಡೆದಿದ್ದು, ದೀಪ್ತಿ ಶರ್ಮಾ 29ನೇ ಸ್ಥಾನದಲ್ಲಿದ್ದಾರೆ. ಅವರು ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿ 16ನೇ ಸ್ಥಾನ ಪಡೆದಿದ್ದು, ಆಲ್ರೌಂಡರ್‌ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ.