ಒಂದೆಡೆ ಪತ್ನಿ ನತಾಶಾ ಸ್ಟಾಂಕೋವಿಕ್‌ ಜೊತೆಗಿನ ವಿಚ್ಛೇದನದ ಕಾರಣಕ್ಕಾಗಿ ಹಾರ್ದಿಕ್‌ ಪಾಂಡ್ಯ ಶೇ. 70ರಷ್ಟು ಆಸ್ತಿ ಕಳೆದುಕೊಳ್ತಾರೆ ಅನ್ನೋ ಸುದ್ದಿ ಆಗಿದೆ. ಇದರ ನಡುವೆ ಮದುವೆಗೂ ಮೂರು ವರ್ಷದ ಹಿಂದೆ ಹಾರ್ದಿಕ್‌ ಪಾಂಡ್ಯ ಅವರೇ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. 

ಮುಂಬೈ (ಮೇ.25): ನತಾಶಾ ಸ್ಟಾಂಕೋವಿಕ್‌ ಜೊತೆಗೆ ವಿಚ್ಛೇದನದ ಊಹಾಪೋಹಗಳ ನಡುವೆ, ಹಾರ್ದಿಕ್ ಪಾಂಡ್ಯ ಅವರ ಹಳೆಯ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕ್ರಿಕೆಟಿಗ ತನ್ನ ಮನೆ ಮತ್ತು ಕಾರು ಸೇರಿದಂತೆ ಹೆಚ್ಚಿನ ಆಸ್ತಿಗಳೆಲ್ಲವೂ ತಾಯಿಯ ಹೆಸರಲ್ಲಿಯೇ ಇದೆ ಎಂದು ಹೇಳಿದ್ದಾರೆ. 2020ರಲ್ಲಿ ಸೆರ್ಬಿಯಾ ಮೂಲದ ಮಾಡೆಲ್‌ ಹಾಗೂ ನಟಿ ನತಾಶಾ ಸ್ಟಾಂಕೋವಿಕ್‌ರನ್ನು ಹಾರ್ದಿಕ್‌ ಪಾಂಡ್ಯ ವಿವಾಹವಾಗಿದ್ದರು. ಮದುವೆಗೂ ಮುನ್ನ ಸ್ಟಾಂಕೋವಿಕ್‌ ಗರ್ಭಿಣಿಯೂ ಆಗಿದ್ದರು. ಈ ಜೋಡಿಗೆ ಅಗಸ್ತ್ರ್ಯ ಹೆಸರಿನ ಪುತ್ರನೂ ಇದ್ದಾನೆ. 2017ರಲ್ಲಿ ಗೌರವ್‌ ಕಪೂರ್‌ ಅವರೊಂದಿಗಿನ ಸಂದರ್ಶನದ ವೇಳೆ ಹಾರ್ದಿಕ್‌ ಪಾಂಡ್ಯ ಆಡಿರುವ ಮಾತುಗಳು ವೈರಲ್‌ ಆಗಿವೆ. ನತಾಶಾ ಸ್ಟಾಂಕೋವಿಕ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ, ಶೀಘ್ರದಲ್ಲಿ ಯಾರೋ ಒಬ್ಬರು ಬೀದಿಗೆ ಬೀಳುತ್ತಾರೆ ಎಂದು ಪೋಸ್ಟ್‌ ಮಾಡಿದ ಬೆನ್ನಲ್ಲಿಯೇ ಡಿವೋರ್ಸ್‌ನ ರೂಮರ್‌ಗಳು ಹಬ್ಬಿವೆ. ಹಾಗೇನಾದರೂ ನತಾಶಾ ವಿಚ್ಛೇದನ ಪಡೆದುಕೊಂಡಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಆಸ್ತಿಯ ಶೇ. 70ರಷ್ಟನ್ನು ಆಕೆಗೆ ನೀಡಬೇಕಾಗುತ್ತದೆ ಎಂದೂ ವರದಿಯಾಗಿತ್ತು.

ಸಣ್ಣ ಕ್ಲಿಪ್‌ನಲ್ಲಿ ಹಾರ್ದಿಕ್‌ ಪಾಂಡ್ಯ, 'ನನ್ನ ಅಪ್ಪನ ಅಕೌಂಟ್‌ನಲ್ಲಿ ಅಮ್ಮನ ಹೆಸರಿದೆ. ಅಣ್ಣ ಹಾಗೂ ನನ್ನ ಅಕೌಂಟ್‌ನಲ್ಲಿ ಕೂಡ ಅಮ್ಮನ ಹೆಸರೇ ಇದೆ. ಎಲ್ಲವೂ ಆಕೆಯ ಹೆಸರಲ್ಲಿಯೇ ಇದೆ' ಎಂದು ಹೇಳಿದ್ದಾರೆ. ಬಳಿಕ ಇದನ್ನು ವಿವರಿಸುವ ಹಾರ್ದಿಕ್‌ ಪಾಂಡ್ಯ, ನಮ್ಮ ಮನೆಯಲ್ಲಿರುವ ಕಾರು, ಆಸ್ತಿ ಕೊನೆಗೆ ಮನೆ ಕೂಡ ಅಮ್ಮನ ಹೆಸರಿನಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.
2017 ರಲ್ಲಿ ಓಕ್ಟ್ರೀ ಸ್ಪೋರ್ಟ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಮೂಲ ವೀಡಿಯೊದಲ್ಲಿ, ಹಾರ್ದಿಕ್ ತಮ್ಮ ಕುಟುಂಬದ ಆರ್ಥಿಕ ಡೈನಾಮಿಕ್ಸ್ ಬಗ್ಗೆ ಚರ್ಚೆ ಮಾಡಿದ್ದರು.

ಐಪಿಎಲ್‌ನ ಮೊದಲ ಋತುವಿನಲ್ಲಿ ತಮಗೆ 50 ಲಕ್ಷ ರೂಪಾಯಿ ವೇತನ ಸಿಕ್ಕಿತ್ತು ಎಂದು ಹೇಳಿದ್ದಲ್ಲದೆ, ಇದು ನಮ್ಮ ಕುಟುಂಬದ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಿತು ಎಂದು ಹೇಳಿದ್ದಾರೆ. ಇದಲ್ಲಿ ಕ್ರಿಕೆಟಿಗ ಹಣಕಾಸು ಹಾಗೂ ಅದರಲ್ಲಿ ತಮ್ಮ ತಾಯಿಯ ಪಾತ್ರದ ಕುರಿತು ಮಾತನಾಡಿದ ಭಾಗದ ಚಿಕ್ಕ ಭಾಗವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರ ಬೆನ್ನಲ್ಲಿಯೇ ಹೆಚ್ಚಿನವರು, “ಹಾರ್ದಿಕ್ ಪಾಂಡ್ಯ ಅವರ ಹೆಚ್ಚಿನ ಆಸ್ತಿ ಅವರ ತಾಯಿಯ ಹೆಸರಿನಲ್ಲಿದೆ. ಗುಜರಾತಿ ಬ್ರೈನ್ ಫಾರ್ ಎ ರೀಸನ್" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡ ಬಳಕೆದಾರರು ಊಹಾಪೋಹದ ವಿಚ್ಛೇದನ ಇತ್ಯರ್ಥದ ವದಂತಿಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಪೋಸ್ಟ್‌ ಮಾಡಿದ್ದಾರೆ.

ನತಾಶಾ ಸ್ಟಾಂಕೋವಿಕ್‌ರನ್ನು ಮದುವೆಯಾಗಿ ಆಕೆಯಿಂದ ಅಗಸ್ತ್ಯ ಹೆಸರಿನ ಪುತ್ರನನನ್ನು ಪಡೆಯುವ ಮೂರು ವರ್ಷಗಳ ಮುನ್ನನಡೆದ ಸಂದರ್ಶನದಲ್ಲಿ ಇದನ್ನು ಹೇಳಿದ್ದಾರೆ. ಆದರೆ, ವಿಚ್ಛೇದನದ ಬಗ್ಗೆ ಹಾರ್ದಿಕ್‌ ಪಾಂಡ್ಯ ಆಗಲಿ ನತಾಶಾ ಸ್ಟಾಂಕೋವಿಕ್‌ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾರ್ದಿಕ್ ಮತ್ತು ಅವರ ಪತ್ನಿ ಬೇರ್ಪಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಹಿಂದಿದ್ದ ಹಾರ್ದಿಕ್‌ ಪಾಂಡ್ಯ ಹೆಸರನ್ನು ನತಾಶಾ ತೆಗೆದು ಹಾಕಿದ ಬಳಿಕ ಈ ವದಂತಿ ಹುಟ್ಟಿಕೊಂಡಿದೆ.

ಹಾರ್ದಿಕ್‌ ಪಾಂಡ್ಯಗೆ ಡಿವೋರ್ಸ್‌ ಬೆನ್ನಲ್ಲೇ, ದಿಶಾ ಪಟಾನಿ ಮಾಜಿ ಬಾಯ್‌ಫ್ರೆಂಡ್‌ ಜೊತೆ ಕಾಣಿಸ್ಕೊಂಡ Natasa!

ದಂಪತಿಗಳು ಪರಸ್ಪರರ ಇತ್ತೀಚಿನ ಫೋಟೋಗಳನ್ನು ಪೋಸ್ಟ್ ಮಾಡಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದಾರೆ. ಮಾರ್ಚ್ 4 ರಂದು ಪಾಂಡ್ಯ ತಮ್ಮ ಪತ್ನಿಯ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಂಚಿಕೊಂಡಿಲ್ಲ. ಅಲ್ಲದೆ, ಐಪಿಎಲ್ 2024 ರ ಋತುವಿನಲ್ಲಿ ಸ್ಟಾಂಕೋವಿಕ್ ಗೈರುಹಾಜರಾಗಿದ್ದಾರೆ ಮತ್ತು ಪಾಂಡ್ಯ ಮತ್ತು ಅವರ ತಂಡವನ್ನು ಬೆಂಬಲಿಸುತ್ತಿಲ್ಲ ಎಂಬ ವದಂತಿಗಳು ಹರಡಿವೆ.

ಡಿವೋರ್ಸ್‌ ಸುದ್ದಿ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೆಂಡ್ತಿ ನತಾಶಾ ಬಿಕಿನಿ ಪಿಕ್ಸ್ ವೈರಲ್..!

Scroll to load tweet…