ಈ ಕ್ರಿಕೆಟಿಗನಿಗೆ ತಿಂಗಳಿಗೆ 5.5 ಕೋಟಿ ರುಪಾಯಿ ಸಂಬಳ..! ಆದ್ರೆ ಅದು ಧೋನಿ, ರೋಹಿತ್, ಸಚಿನ್ ಅಲ್ಲ..!
* ಜಗತ್ತಿನಲ್ಲಿ ಅತ್ಯಂತ ಹೆಚ್ಚು ತಿಂಗಳಿಗೆ ಸಂಬಳ ಪಡೆಯುವ ಆಟಗಾರ ಭಾರತೀಯ
* ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಿಂಗಳಿಗೆ ಐದೂವರೆ ಕೋಟಿ ಸಂಬಳ
* ಎರಡನೇ ಸ್ಥಾನದಲ್ಲಿರುವ ಆಟಗಾರ ದಕ್ಷಿಣ ಆಫ್ರಿಕಾ ಕ್ರಿಕೆಟಿಗ
ನವದೆಹಲಿ(ಜೂ.24): ಕ್ರಿಕೆಟ್ ಭಾರತದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಕ್ರೀಡೆ ಎನಿಸಿಕೊಂಡಿದೆ. ಯಾಕೆಂದರೆ ಕ್ರಿಕೆಟ್ ವೀಕ್ಷಿಸುವ ಹಾಗೂ ಫಾಲೋ ಮಾಡುವ ಸಂಖ್ಯೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಈ ಕ್ರಿಕೆಟ್ ಮೂಲಕವೇ ಎಂ ಎಸ್ ಧೋನಿ, ರೋಹಿತ್ ಶರ್ಮಾ, ಸಚಿನ್ ತೆಂಡುಲ್ಕರ್ ಹಾಗೂ ಇನ್ನಿತರ ಕ್ರಿಕೆಟಿಗರು ಆಗರ್ಭ ಶ್ರೀಮಂತರಾಗಿದ್ದಾರೆ. ಭಾರತದಲ್ಲಿರುವಷ್ಟು ಕ್ರಿಕೆಟ್ ಕ್ರೇಜ್ ಜಗತ್ತಿನ ಬೇರೆ ಯಾವ ಮೂಲೆಯಲ್ಲೂ ಇಲ್ಲ. ಇನ್ನು ಬಿಸಿಸಿಐ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿದೆ. ಇನ್ನು ಟೀಂ ಇಂಡಿಯಾದ ಓರ್ವ ಕ್ರಿಕೆಟಿಗ ಪ್ರತಿ ತಿಂಗಳು ಸುಮಾರು 5.5 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.
ಹೌದು, ತಿಂಗಳಿಗೆ ಅತಿಹೆಚ್ಚು ಸಂಭಾವನೆ ಗಳಿಸುವ ಕ್ರಿಕೆಟಿಗ ಬೇರೆ ಯಾರು ಅಲ್ಲ, ಅದು ಮೂರು ಮಾದರಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸುವ ವಿರಾಟ್ ಕೊಹ್ಲಿ. ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರತಿ ತಿಂಗಳು ಸುಮಾರು 6,90,000 ಅಮೆರಿಕನ್ ಡಾಲರ್ ಅಂದರೆ ತಿಂಗಳಿಗೆ ಬರೋಬ್ಬರಿ 5.5 ಕೋಟಿ ರುಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಮೌಲ್ಯ 1,050 ಕೋಟಿ ರುಪಾಯಿ ಗಡಿ ದಾಟಿತ್ತು.
ವಿರಾಟ್ ಕೊಹ್ಲಿ ಬಿಸಿಸಿಐನಿಂದ ಹಾಗೂ ಏಕದಿನ, ಟೆಸ್ಟ್ ಹಾಗೂ ಟಿ20 ಪಂದ್ಯಗಳನ್ನಾಡುವ ಮೂಲಕ ತಿಂಗಳಿಗೆ ಒಂದು ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾರೆ. ಇದಷ್ಟೇ ಅಲ್ಲದೇ ಎಂಡೋರ್ಸ್‌ಮೆಂಟ್ ಡೀಲ್ ಹಾಗೂ ಇತರೆ ಮೂಲದ ಆದಾಯವೂ ಸೇರಿದಂತೆ ವಿರಾಟ್ ಕೊಹ್ಲಿ ಪ್ರತಿ ತಿಂಗಳು 5.5 ಕೋಟಿ ರುಪಾಯಿ ಆದಾಯ ಗಳಿಸುತ್ತಾರೆ.
1,000 ಕೋಟಿ ರುಪಾಯಿ ಗಡಿದಾಟಿದ ಕಿಂಗ್ ಕೊಹ್ಲಿ ಆಸ್ತಿ ಮೌಲ್ಯ..! ವಿರಾಟನ ಮತ್ತೊಂದು ಅವತಾರ ಅನಾವರಣ
GQ Australia ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಆಡುವ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಬರುವ ಸಂಪಾದನೆಯನ್ನು ಲೆಕ್ಕ ಹಾಕಿದರೆ ತಿಂಗಳಿಗೆ ಹತ್ತಿರ ಹತ್ತಿರ 6 ಕೋಟಿ ರುಪಾಯಿಗಳನ್ನು ಪಡೆಯುತ್ತಾರೆ. ಇದಷ್ಟೇ ಅಲ್ಲದೇ ಕೆಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನಕ್ಕೆ ನೀಡಲಾಗುವ ಚೆಕ್‌ಗಳು ಒಂದು ರೀತಿ ಬೋನಸ್ ಎಂದು ಪರಿಗಣಿಸಬಹುದಾಗಿದೆ.
ಸ್ಟಾಕ್ ಗ್ರೋ ವರದಿಯ ಪ್ರಕಾರ, ಈ ವಿರಾಟ್ ಕೊಹ್ಲಿಯ ಒಟ್ಟು ನಿವ್ವಳ ಮೌಲ್ಯ 1,050 ಕೋಟಿ ರುಪಾಯಿಗಳಾಗಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ಬಿಸಿಸಿಐ ಗುತ್ತಿಗೆಯಿಂದ 7 ಕೋಟಿ ರುಪಾಯಿ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಬ್ರ್ಯಾಂಡ್‌ಗಳ ಮಾಲೀಕತ್ವ ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಗಳಿಸುವ ಆದಾಯವೂ ಸೇರಿದೆ.
ಇನ್ನು ವಿರಾಟ್ ಕೊಹ್ಲಿ ಬಳಿಕ ತಿಂಗಳಿಗೆ ಅತಿಹೆಚ್ಚು ಆದಾಯಗಳಿಸುವ ಎರಡನೇ ಕ್ರಿಕೆಟಿಗ ಎಂದರೆ ಅದು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೀನ್ ಎಲ್ಗಾರ್. ದಕ್ಷಿಣ ಆಫ್ರಿಕಾದ ಅಗ್ರಕ್ರಮಾಂಕದ ಬ್ಯಾಟರ್ ಡೀನ್ ಎಲ್ಗಾರ್ ತಿಂಗಳಿಗೆ 4,40,000 ಅಮೆರಿಕನ್ ಡಾಲರ್ ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 3.60 ಕೋಟಿ ರುಪಾಯಿ ಆದಾಯ ಗಳಿಸುತ್ತಾ ಬಂದಿದ್ದಾರೆ.
ಇನ್ನುಳಿದಂತೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾಗ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕೇವಲ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.