ನವದೆಹಲಿ[ನ.08]: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ, ಬಿಸಿಸಿಐಗೆ ಪತ್ರ ಬರೆದಿದ್ದು 2020ರ ಆವೃತ್ತಿಯಿಂದ ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರ ಗೀತೆಯನ್ನು ಹಾಡುವಂತೆ ಕೋರಿದ್ದಾರೆ. 

ಐಪಿಎಲ್ ಹರಾಜು: ಕೋಲ್ಕ​ತಾದಲ್ಲಿ ಆಟಗಾರರ ಖರೀದಿಗೆ ಡೇಟ್ ಫೈನಲ್

‘ಅಂತಾರಾಷ್ಟ್ರೀಯ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲಾಗುತ್ತದೆ. ವಿಶ್ವ ದ ನಂ.1 ಕ್ರಿಕೆಟ್ ಲೀಗ್’ನಲ್ಲೂ ಈ ಪದ್ಧತಿ ಆರಂಭಿಸಬೇಕು, ಎನ್ ಬಿಎ (ಅಮೆರಿಕದ  ಬಾಸ್ಕೆಟ್ ಬಾಲ್ ಲೀಗ್)ನಲ್ಲೂ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಇರಲಿದೆ’ ಎಂದು ವಾಡಿಯಾ ಮನವಿ ಸಲ್ಲಿಸಿದಾರೆ.

ತಂಡದಲ್ಲಿ ಮಹತ್ತರ ಬದಲಾವಣೆ ಇದೆ ಎಂದ CSK !

ಐಪಿಎಲ್’ನಲ್ಲಿ ಸಾಮಾನ್ಯವಾಗಿ ಉದ್ಘಾಟನಾ ಪಂದ್ಯದಲ್ಲಿ ಮಾತ್ರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಆದರೆ ಈ ಬಾರಿಯಿಂದ ಪ್ರತಿ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವಂತೆ ಮನವಿ ಮಾಡಿದ್ದಾರೆ. ಬಹುನಿರೀಕ್ಷಿತ 2020ನೇ ಸಾಲಿನ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ನಡೆಯಲಿದ್ದು, ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲು ಚಿತ್ತ ನೆಟ್ಟಿವೆ.