ಐಪಿಎಲ್ ಹರಾಜು: ಕೋಲ್ಕತಾದಲ್ಲಿ ಆಟಗಾರರ ಖರೀದಿಗೆ ಡೇಟ್ ಫೈನಲ್
2020ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿ ದಿನಾಂಕ ಖಚಿತವಾಗಿದ್ದು, ಇದೇ ಮೊದಲ ಬಾರಿಗೆ ಐಪಿಎಲ್ ಆಟಗಾರರ ಹರಾಜಿ ಕೋಲ್ಕತಾ ಆತಿಥ್ಯ ವಹಿಸಲಿದೆ. ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...
ಮುಂಬೈ[ನ.06]: ಐಪಿಎಲ್ 13ನೇ ಆವೃತ್ತಿಯ ಆಟಗಾರರ ಹರಾಜು ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿದೆ ಎಂದು ಆಡಳಿತ ಸಮಿತಿ ಸ್ಪಷ್ಟಪಡಿಸಿದೆ.
ಐಪಿಎಲ್ನಲ್ಲಿ ಇನ್ಮುಂದೆ ನೋಬಾಲ್ ಅಂಪೈರ್!
ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಲು ಈ ವರ್ಷ 3 ಕೋಟಿ ರುಪಾಯಿ ಹೆಚ್ಚುವರಿಯಾಗಿ ಖರ್ಚು ಮಾಡಬಹುದಾಗಿದೆ. 2019ರ ಆವೃತ್ತಿಗೆ 82 ಕೋಟಿ ರುಪಾಯಿ ಇದ್ದ ಮಿತಿಯನ್ನು 2020ರ ಆವೃತ್ತಿಗೆ 85 ಕೋಟಿಗೆ ಏರಿಕೆ ಮಾಡಲಾಗಿದೆ. ಕಳೆದ ಆವೃತ್ತಿಯ ಹರಾಜಿನಲ್ಲಿ ಉಳಿಸಿಕೊಂಡಿರುವುದರ ಜತೆಗೆ 3 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲು ಅವಕಾಶವಿರಲಿದೆ.
ಐಪಿಎಲ್ನಲ್ಲಿ ಇನ್ಮುಂದೆ ನೋಬಾಲ್ ಅಂಪೈರ್!
ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾತೆಯಲ್ಲಿ 1.80 ಕೋಟಿ ರುಪಾಯಿ ಉಳಿಸಿಕೊಂಡಿದೆ. ಇದರ ಜತೆಗೆ 3 ಕೋಟಿ ಅಂದರೆ ಒಟ್ಟು 4.80 ಕೋಟಿ ರುಪಾಯಿ ಮೊತ್ತದಲ್ಲಿ ತಮಗೆ ಬೇಕಾಗಿರುವ ಆಟಗಾರರನ್ನು ಖರೀದಿಸಬಹುದಾಗಿದೆ. ಇನ್ನು ಗರಿಷ್ಠ ಮೊತ್ತವನ್ನು ತನ್ನ ಪಾಕೆಟ್’ನಲ್ಲಿ ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ[8.2 ಕೋಟಿ] 11.2 ಕೋಟಿ ರುಪಾಯಿ ನೀಡಿ ಆಟಗಾರರನ್ನು ಖರೀದಿಸಬಹುದಾಗಿದೆ. ಇದೇ ಅಂತಿಮವಲ್ಲ, ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಫ್ರಾಂಚೈಸಿ ತಂಡದಿಂದ ಕೈಬಿಡಲಿದ್ದು, ಆ ಮೊತ್ತವೂ ತಂಡದ ಖಾತೆಗೆ ಜಮೆಯಾಗಲಿದೆ.
IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!
ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತಿಹೆಚ್ಚು ಹಣ ಉಳಿಸಿಕೊಂಡಿತ್ತು. ತಂಡದ ಬಳಿ 8.2 ಕೋಟಿ ಬಾಕಿ ಇದೆ. ರಾಜಸ್ಥಾನ ರಾಯಲ್ಸ್ 7.15 ಕೋಟಿ, ಕೋಲ್ಕತಾ ನೈಟ್ ರೈಡರ್ಸ್ 6.05 ಕೋಟಿ, ಸನ್‌ರೈಸರ್ಸ್ ಹೈದರಾಬಾದ್ 5.30 ಕೋಟಿ, ಕಿಂಗ್ಸ್ ಇಲೆವೆನ್ ಪಂಜಾಬ್ 3.7 ಕೋಟಿ, ಮುಂಬೈ ಇಂಡಿಯನ್ಸ್ 3.55 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 3.2 ಕೋಟಿ, ಆರ್‌ಸಿಬಿ 1.80 ಕೋಟಿ ರುಪಾಯಿ ಉಳಿಸಿಕೊಂಡಿವೆ.