ಹಾರ್ದಿಕ್ ಪಾಂಡ್ಯ ಪ್ರೇಯಸಿ ನತಾಶಾ ಪ್ರಗ್ನೆಂಟ್ ಆಗಿರುವ ವಿಚಾರವ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ನತಾಶಾ ಮಾಜಿ ಬಾಯ್‌ಫ್ರೆಂಡ್ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಆ ಬಾಯ್‌ಫ್ರೆಂಡ್? ನತಾಶಾ ಬಗ್ಗೆ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

ನವದೆಹಲಿ(ಜೂ.01): ಹಾರ್ದಿಕ್ ಪಾಂಡ್ಯ ತನ್ನ ಪ್ರೇಯಸಿ ನತಾಶಾ ಸ್ಟಾಂಕೋವಿಚ್ ಗರ್ಭಿಣಿಯಾಗಿರುವ ವಿಚಾರವನ್ನು ಭಾನುವಾರ(ಮೇ.31)ವಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಜಗಜ್ಜಾಹೀರುಗೊಳಿಸಿದ್ದರು. 2020ರ ಮೊದಲ ದಿನವೇ ಸರ್ಬಿಯನ್ ನಟಿ ನತಾಶಾ ಸ್ಟಾಂಕೋವಿಚ್‌ಗೆ ಪಾಂಡ್ಯ ಉಂಗುರ ಹಾಕಿ ಎಂಗೇಜ್ ಆಗಿದ್ದರು.

ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಪಾಂಡ್ಯ ಹಾಗೂ ನತಾಶ ಜೋಡಿ ಒಟ್ಟಿಗೆ ವಾಸವಾಗಿದ್ದರು. ಎಂಗೇಜ್‌ಮೆಂಟ್ ಮಾಡಿಕೊಂಡು ಸರಿಯಾಗಿ 5 ತಿಂಗಳಿಗೆ ಟೀಂ ಇಂಡಿಯಾ ಆಲ್ರೌಂಡರ್ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಯುಜುವೇಂದ್ರ ಚಹಲ್ ಸೇರಿದಂತೆ ಸಹ ಕ್ರಿಕೆಟಿಗರು ಶುಭಹಾರೈಸಿದ್ದಾರೆ.

ನತಾಶಾ ಮಾಜಿ ಗೆಳೆಯನ ಪ್ರತಿಕ್ರಿಯೆ:

ನತಾಶಾ ಆಲ್ರೌಂಡರ್ ಪಾಂಡ್ಯ ತೆಕ್ಕೆಗೆ ಬೀಳುವ ಮುನ್ನ ಹಿಂದಿ ಟೆಲಿವಿಷನ್ ಕ್ಷೇತ್ರದ ಖ್ಯಾತ ನಟ ಅಲೈ ಗೋನಿ ಜತೆ ಡೇಟಿಂಗ್ ನಡೆಸಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಸಿಕ್ಕ ಬಳಿಕ ನತಾಶಾ ಹಿಂದಿ ನಟನ ನಂಟನ್ನು ಕಳಚಿಕೊಂಡಿದ್ದರು. ನಾನು ಮತ್ತು ಹಾರ್ದಿಕ್ ಜತೆಯಾಗಿ ಇಲ್ಲಿಯವರೆಗೆ ಅವಿಸ್ಮರಣೀಯ ಕ್ಷಣಗಳನ್ನು ಕಳೆದಿದ್ದೇವೆ. ನಮ್ಮ ಖುಷಿಗೆ ಮತ್ತಷ್ಟು ಮೆರಗು ತರಲು ಹೊಸ ಜೀವವನ್ನು ವೆಲ್‌ಕಮ್ ಮಾಡಲು ನಾವು ತುದಿಗಾಲಿನಲ್ಲಿ ನಿಂತಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಹಾರೈಕೆ ಹೀಗೆ ಇರಲಿ ಎಂದು ನತಾಶ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದರು.

ಹಾರ್ದಿಕ್ ಪಾಂಡ್ಯ ಮದ್ವೆಗೂ ಮೊದಲೇ ಅಪ್ಪ; ಇದು 6G ಸ್ಪೀಡ್ ಎಂದ ಫ್ಯಾನ್ಸ್!

View post on Instagram

ಆಶ್ಚರ್ಯ ಎನ್ನುವಂತೆ ನತಾಶಾ ಸ್ಟಾಂಕೋವಿಚ್‌ ಪ್ರಗ್ನೆಂಟ್ ಆಗಿರುವ ವಿಚಾರ ತಿಳಿದ ಅಲೈ ಗೋನಿ ಕೂಡಾ ಶುಭ ಕೋರಿದ್ದಾರೆ. ಹಾರ್ಟ್ಸ್ ಎಮೋಜಿಯೊಂದಿಗೆ ದೇವರು ಒಳ್ಳೆಯದು ಮಾಡಲಿ(God blessss u guys) ಎಂದು ಅಲೈ ಗೋನಿ ಶುಭ ಹಾರೈಸಿದ್ದಾರೆ.