ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಿಢೀರ್ ಆಗಿ ಪೋಷಕರಾಗುತ್ತಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಪಾಂಡ್ಯ ದಂಪತಿಗೆ ಶುಭಹಾರೈಸಿದ್ದರು. ಆದರೆ ಅಭಿಮಾನಿಗಳು ಸೂಪರ್ ಫಾಸ್ಟ್ ಪಾಂಡ್ಯ 6G ಸ್ಪೀಡ್‌ನಲ್ಲಿದ್ದಾರೆ. ಮದ್ವೆಗೂ ಮೊದಲೇ ಅಪ್ಪನಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅದ್ಭುತ ಪ್ರತಿಕ್ರಿಯೆ ಇಲ್ಲಿದೆ.

ಮುಂಬೈ(ಜೂ.01): ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಅತ್ಯಂತ ಬೋಲ್ಡ್ ಹಾಗೂ ಊಹೆಗೂ ನಿಲುಕದ ಸ್ಟೈಲೀಶ್ ಕ್ರಿಕೆಟಿಗನಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗುರುತಿಸಿಕೊಂಡಿದ್ದಾರೆ. ತನ್ನ ಬೋಲ್ಡ್ ಹೇಳಿಕೆಗಳಿಂದ ವಿವಾದಕ್ಕೂ ಗುರಿಯಾಗಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ ಮತ್ತೆ ಸದ್ದು ಮಾಡುತ್ತಿದ್ದಾರೆ. ಜನವರಿಯಲ್ಲಿ ನಟಿ ನತಾಶ ಸ್ಟಾಂಕೋವಿಚ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಹಾರ್ದಿಕ್ ಪಾಂಡ್ಯ, ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಕಸರತ್ತು ಆರಂಭಿಸಿದ್ದರು.

ತಂದೆಯಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ, ಸಂತಸ ಹಂಚಿಕೊಂಡ ಆಲ್ರೌಂಡರ್!...

ಆದರೆ ಲಾಕ್‌ಡೌನ್ ಕಾರಣ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ವಿಳಂಬವಾಗಿದೆ. ಆದರೆ ಪಾಂಡ್ಯ ಮಾತ್ರ ಸೂಪರ್ ಸ್ಪೀಡ್‌ನಲ್ಲಿದ್ದಾರೆ. ಎಂಗೇಜ್ಮೆಂಟ್ ಮುಗಿಸಿದ ಪಾಂಡ್ಯ ಇದೀಗ ಮದುವೆಗೂ ಮೊದಲೇ ತಂದೆಯಾಗುತ್ತಿದ್ದಾರೆ. ಈ ಖುಷಿಯನ್ನ ಪಾಂಡ್ಯ ದಂಪತಿ ಹಂಚಿಕೊಂಡಿದ್ದಾರೆ. ಮದ್ವೆಗೂ ಮನ್ನವೇ ಅಪ್ಪನಾದ ಪಾಂಡ್ಯ ಕುರಿತು ಅಭಿಮಾನಿಗಳು ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…