ಐರ್ಲೆಂಡ್ ವಿರುದ್ದದ ಸೋಲಿನ ಬೆನ್ನಲ್ಲೇ ಇದೀಗ ವೈಭವ್ ಸೂರ್ಯವಂಶಿಗೆ ಅವಕಾಶ ಕೈತಪ್ಪಿದ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ಪಾಳಯದಲ್ಲೇ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಲಂಡನ್ (ಜೂ.30) ಭಾರತ ಹಾಗೂ ಐರ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ತೀವ್ರ ಮುಗಭಂಗ ಅನುಭವಿಸಿದ ಶ್ರೇಯಸ್ ಅಯ್ಯರ್ ಪಡೆ, ಅಷ್ಟೇ ಟೀಕೆಗಳನ್ನು ಎದುರಿಸಿದೆ. ಪ್ರಮುಖವಾಗಿ 15ರ ಹರೆಯದ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡದಿರುವ ಕುರಿತು ಆಕ್ರೋಶಗಳು ವ್ಯಕ್ತವಾಗಿತ್ತು. ಇದೀಗ ಮೊದಲ ಬಾರಿಗೆ ನಾಯಕ ಶ್ರೇಯಸ್ ಅಯ್ಯರ್ ವೈಭವ್ ಸೂರ್ಯವಂಶಿ ಪಾದಾರ್ಪಣೆ ಕುರಿತು ಮೌನ ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ದದ ಸರಣಿ ಆರಂಭಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಈ ಕುರಿತು ಮಾತನಾಡಿದ್ದಾರೆ. ನನ್ನ ಕೈಗಳನ್ನು ಕಟ್ಟಿ ಹಾಕಲಾಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳುವ ಮೂಲಕ ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.
ನಮ್ಮ ಕೈಹಳು ಕಟ್ಟಲ್ಪಟ್ಟಿವೆ
ಇಂಗ್ಲೆಂಡ್ ಸರಣಿಗೂ ಮೊದಲಿನ ಸುದ್ದಿಗೋಷ್ಠಿಯಲ್ಲಿ ವೈಭವ್ ಸೂರ್ಯವಂಶಿ ಪಾದಾರ್ಪಣೆ ಕುರಿತು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ಶ್ರೇಯಸ್ ಅಯ್ಯರ್, ಯಾವ ಆಟಗಾರನಿಗೆ ಸ್ಥಾನ, ಯಾವ ತಂಡ,ಯಾವ ಕಾಂಬಿನೇಷನ್ ಕಣಕ್ಕಿಳಿಸುತ್ತಿದ್ದೇವೆ ಅನ್ನೋದು ಖಾಸಗಿ ವಿಷಯವಾಗಿದೆ. ಇದು ತಂಡದ ಆಂತರಿಕ ವಿಚಾರ. ಆದರೆ ವೈಭವ್ ಕುರಿತು ಹೇಳುವುದಾದರೆ ಪ್ರಸ್ತುತ ನಮ್ಮ ಕೈಗಳು ಕಟ್ಟಲ್ಪಿಟ್ಟಿದೆ. ಗೌಪ್ಯ ವಿಚಾರಗಳನ್ನು ನಮ್ಮ ಕಾರ್ಯತಂತ್ರಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಅದು ಎದುರಾಳಿಗಳ ಗೇಮ್‌ಪ್ಲಾನ್‌ಗೆ ಸಹಾಕಾರಿಯಾಗುವ ಸಾಧ್ಯತೆ ಇದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ವೈಭವ್ ಅದ್ಭುತ ಪ್ರತಿಭೆ, ಹಾಡಿ ಹೊಗಳಿದ ಶ್ರೇಯಸ್ ಅಯ್ಯರ್
ವೈಭವ್ ಸೂರ್ಯವಂಶಿ ಅದ್ಭುತ ಪ್ರತಿಭೆ. ವಿಶ್ವಮಟ್ಟದ ಬೌಲರ್ ವಿರುದ್ದ ದಿಟ್ಟ ಹೋರಾಟ ನೀಡಿದ್ದಾನೆ. ವೈಭವ್‌ಗೆ ಯಾವಾಗ ಅವಕಾಶ ಸಿಗುತ್ತೋ ಆ ವೇಳೆ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾನೆ ಅನ್ನೋ ಭರವಸೆ ನನಗಿದೆ. ಯುವ ಆಟಗಾರನಿಗೆ ನಮ್ಮ ಬೆಂಬಲ ಇದ್ದೇ ಇರುತ್ತೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಸೂರ್ಯವಂಶಿಯನ್ನು ತಂಡದ ಪ್ಲೇಯಿಂಗ್ ಇಲೆವನ್‌ನಲ್ಲಿ ಅವಕಾಶ ನೀಡುವ ಕುರಿತು ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ ಅನ್ನೋ ಸೂಚನೆಯನ್ನು ಶ್ರೇಯಸ್ ಅಯ್ಯರ್ ನೀಡಿದ್ದಾರೆ. ಈ ಮೂಲಕ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ತಮ್ಮ ಇಚ್ಚೆಯಂತೆ ಇರಲಿಲ್ಲ ಅನ್ನೋ ಸುಳಿವನ್ನು ಶ್ರೇಯಸ್ ಅಯ್ಯರ್ ನೀಡಿದ್ದಾರೆ.
ಭರ್ಜರಿ ನೆಟ್ಸ್ ಪ್ರಾಕ್ಟೀಸ್
ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೂ ಮೊದಲು ನೆಟ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಅಭ್ಯಾಸ ಮಾಡಿದ್ದಾರೆ. ಹಿರಿಯ ಕ್ರಿಕೆಟಿಗರ ಜೊತೆ ವೈಭವ್ ಸೂರ್ಯವಂಶಿ ಅಭ್ಯಾಸ ಮಾಡಿದ್ದಾರೆ. ಭಾರತದ ವೇಗಿಗಳಾದ ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಸೇರಿದಂತೆ ನೆಟ್ಸ್ ಬೌಲರ್‌ಗಳ ದಾಳಿಯನ್ನು ವೈಭವ್ ಉತ್ತವಾಗಿ ಎದುರಿಸಿದ್ದಾರೆ.
ವೈಭವ್ ಸೂರ್ಯವಂಶಿಯನ್ನು ಐರ್ಲೆಂಡ್ ವಿರುದ್ಧ ಕಣಕ್ಕಿಳಿಸದ ವಿರುದ್ದ ಹಲವು ಮಾಜಿ ಕ್ರಿಕೆಟಿಗರು ಗರಂ ಆಗಿದ್ದಾರೆ. ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಭಾರತೀಯ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ವೈಭವ್ ಸೂರ್ಯವಂಶಿಯಂತ ಅದ್ಭುತ ಪ್ರತಿಭೆಯನ್ನು ಬೆಂಚ್ ಕಾಯುಸುವುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು.


