Asianet Suvarna News Asianet Suvarna News

ಮಿಂಚಿನ ಪ್ರದರ್ಶನ ತೋರುತ್ತಿರುವ ಸರ್ಫರಾಜ್ ಖಾನ್‌ ಸದ್ಯದಲ್ಲೇ ಟೀಂ ಇಂಡಿಯಾಗೆ ಎಂಟ್ರಿ..?

* ಟೀಂ ಇಂಡಿಯಾ ಬಾಗಿಲು ಬಡಿಯುತ್ತಿದ್ದಾರೆ ಸರ್ಫರಾಜ್ ಖಾನ್
* ಮುಂಬೈ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಬ್ಯಾಟರ್‌ ಸರ್ಫರಾಜ್ ಖಾನ್
* ಈ ಬಾರಿಯ ರಣಜಿ ಟೂರ್ನಿಯಲ್ಲಿ 900ಕ್ಕೂ ಅಧಿಕ ರನ್ ಬಾರಿಸಿದ ಮುಂಬೈ ಕ್ರಿಕೆಟಿಗ

Mumbai Cricketer Sarfaraz Khan likely to receive maiden Test call up for Bangladesh series in November kvn
Author
Bengaluru, First Published Jun 24, 2022, 5:04 PM IST

ಬೆಂಗಳೂರು(ಜೂ.24): ಯುವ ಪ್ರತಿಭಾನ್ವಿತ ಬ್ಯಾಟರ್ ಶರ್ಫರಾಜ್ ಖಾನ್‌ (Sarfaraz Khan), ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಸರ್ಫರಾಜ್ ಖಾನ್ ಸ್ಥಿರ ಪ್ರದರ್ಶನದ ಮೂಲಕ ಟೀಂ ಇಂಡಿಯಾ (Team India) ಪ್ರವೇಶಿಸಲು ಬಾಗಿಲು ತಟ್ಟುತ್ತಿದ್ದಾರೆ. 24 ವರ್ಷದ ಬಲಗೈ ಬ್ಯಾಟರ್‌ ಸರ್ಫರಾಜ್ ಖಾನ್ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ನಡೆಯುತ್ತಿರುವ 2022ನೇ ಸಾಲಿನ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯದಲ್ಲಿ ಮಧ್ಯಪ್ರದೇಶ ಎದುರು ಆಕರ್ಷಕ 134 ರನ್ ಚಚ್ಚುವ ಮೂಲಕ ಅಬ್ಬರಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಫರಾಜ್ ಖಾನ್, ಮುಂಬರುವ ಟೆಸ್ಟ್ ಸರಣಿಗಳಲ್ಲಿ ಬಿಸಿಸಿಐ ಮುಂಬೈ ಮೂಲದ ಆಟಗಾರನಿಗೆ ಮಣೆ ಹಾಕಲಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.

ಮುಂಬೈ ಕ್ರಿಕೆಟ್‌ ತಂಡವು (Mumbai Cricket Team) ದಾಖಲೆಯ 42 ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಮಧ್ಯಪ್ರದೇಶ ಎದುರು ರಣಜಿ ಟ್ರೋಫಿ ಪ್ರಶಸ್ತಿಗಾಗಿ ಕಾದಾಡುತ್ತಿದೆ. ಮುಂಬೈ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ 46 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಸರ್ಫರಾಜ್ ಖಾನ್ ಒಟ್ಟು 4 ಶತಕ ಸಿಡಿಸಿ ಮುಂಬೈ ಕ್ರಿಕೆಟ್ ತಂಡಕ್ಕೆ ಆಸರೆಯಾಗಿದ್ದಾರೆ. ಮಧ್ಯಪ್ರದೇಶ (Madhya Pradesh Cricket) ಎದುರು ರಣಜಿ ಟ್ರೋಫಿ ಫೈನಲ್‌ನಲ್ಲಿ ಸರ್ಫರಾಜ್ ಖಾನ್ 243 ಎಸೆತಗಳನ್ನು ಎದುರಿಸಿ 134 ರನ್ ಚಚ್ಚಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಸರ್ಫರಾಜ್ ಖಾನ್ ಸದ್ಯದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಯ್ಕೆ ಸಮಿತಿಯು ಮುಂಬರುವ ನವೆಂಬರ್‌ನಲ್ಲಿ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾಗೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಅವರನ್ನೀಗ ಕಡೆಗಣಿಸಲು ಸಾಧ್ಯವೇ ಇಲ್ಲ. ಅವರ ಪ್ರದರ್ಶನವೇ ಅವರ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತುಪಡಿಸಿದೆ. ಈ ಮೂಲಕ ಭಾರತ ತಂಡದಲ್ಲಿರುವ ಆಟಗಾರರ ಮೇಲೆ ಒತ್ತಡ ಬೀಳುವಂತೆ ಮಾಡಿದೆ. ಬಾಂಗ್ಲಾದೇಶ ಎದುರಿನ ಟೆಸ್ಟ್‌ ಸರಣಿ ವೇಳೆ ಸರ್ಫರಾಜ್ ಖಾನ್‌ರನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕಳೆದ ವರ್ಷ ಭಾರತ 'ಎ' (India A) ತಂಡದ ಪರ ದಕ್ಷಿಣ ಆಫ್ರಿಕಾ ಎದುರು ಉತ್ತಮ ಪ್ರದರ್ಶನ ತೋರಿದ್ದರು. ಅವರು ಒಳ್ಳೆಯ ಕ್ಷೇತ್ರರಕ್ಷಕ ಕೂಡಾ ಹೌದು ಎಂದು ಬಿಸಿಸಿಐ (BCCI) ಮೂಲಗಳು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿವೆ ಎಂದು ವರದಿ ಮಾಡಿದೆ.

ರಿಷಭ್ ಪಂತ್ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಷ್ಟಪಡಬೇಕೆಂದ ಮಾಜಿ ಕ್ರಿಕೆಟಿಗ..!

2022ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈನ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್ 6 ಪಂದ್ಯಗಳನ್ನಾಡಿ 4 ಶತಕ ಹಾಗೂ 2 ಅರ್ಧಶತಕ ಸಹಿತ 937 ರನ್ ಬಾರಿಸಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಎರಡು ಬಾರಿ 900+ ರನ್ ಬಾರಿಸಿ ಮೂರನೇ ಬ್ಯಾಟರ್ ಎನ್ನುವ ಶ್ರೇಯ ಕೂಡಾ ಸರ್ಫರಾಜ್ ಖಾನ್‌ ಪಾಲಾಗಿದೆ. ಈ ಮೊದಲು ಅಜಯ್‌ ಶರ್ಮಾ ಹಾಗೂ ವಾಸೀಂ ಜಾಫರ್ ಮಾತ್ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಎರಡು ಬಾರಿ 900+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರು ಎನಿಸಿಕೊಂಡಿರುವ ಕನ್ನಡಿಗ ಸುನಿಲ್ ಜೋಶಿ (Sunil Joshi) ಹಾಗೂ ಹರ್ವೀಂದರ್ ಸಿಂಗ್ (Harvinder Singh) ಈಗಾಗಲೇ ಸರ್ಫರಾಜ್ ಖಾನ್ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios