2011ರ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಸಿಕ್ಸರ್ ವೇಳೆ ಚೆಂಡು ಬಿದ್ದಿದ್ದ ಆಸನ ಹರಾಜಿಗೆ..!
ಎಂಸಿಎ ಕ್ರಿಕೆಟ್ ವೆಬ್‌ಸೈಟ್‌ನಲ್ಲಿ, '2011 ವರ್ಲ್ಡ್ ಕಪ್ ಮೆಮೋರಿಯಲ್ ಸೀಟ್' ಎನ್ನುವ ಸೆಕ್ಷನ್ ಅಡಿ ಈ ಎರಡು ಸೀಟ್ ಖರೀದಿಸಲು ಆಯ್ಕೆಯನ್ನು ಓಪನ್ ಮಾಡಿದೆ. ಇದರ ಜತೆಗೆ ವಾಂಖೇಡೆ ಮೈದಾನದಲ್ಲಿರುವ ಹಾಸ್ಪಿಟಾಲಿಟಿ ವ್ಯವಸ್ಥೆಯನ್ನು ಒಳಗೊಂಡಿರುವ ಮೆಮೋರಿಯಲ್ ಸ್ಟ್ಯಾಂಡ್‌ನ ಎರಡು ಸೀಟ್‌ಗಳ ಟಿಕೆಟ್‌ಗಳನ್ನು ಹರಾಜು ಮಾಡಲಾಗುವುದು ಎಂದು ತಿಳಿಸಿದೆ.
ಮುಂಬೈ(ಸೆ.15): 2011ರ ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಎಂ.ಎಸ್.ಧೋನಿ ಗೆಲುವಿನ ಸಿಕ್ಸರ್ ಸಿಡಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆ ಸಿಕ್ಸರ್ ಸಿಡಿಸಿದಾಗ ಚೆಂಡು ಹೋಗಿ ಬಿದ್ದ ಸ್ಥಳವನ್ನು ಗುರುತಿಸಿರುವ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ), 2023ರ ವಿಶ್ವಕಪ್ ಪಂದ್ಯಕ್ಕೆ ಆ 2 ಆಸನಗಳ ಟಿಕೆಟ್‌ಗಳನ್ನು ಹರಾಜು ಹಾಕುವುದಾಗಿ ಘೋಷಿಸಿದೆ. ಹರಾಜಿನಿಂದ ಬರುವ ಹಣವನ್ನು ಪ್ರತಿಭಾನ್ವಿತ ಕ್ರಿಕೆಟಿಗರ ತರಬೇತಿಗೆ ಬಳಸುವಂತೆ ಸ್ವತಃ ಧೋನಿಯೇ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಎಂಸಿಎ ಕ್ರಿಕೆಟ್ ವೆಬ್‌ಸೈಟ್‌ನಲ್ಲಿ, '2011 ವರ್ಲ್ಡ್ ಕಪ್ ಮೆಮೋರಿಯಲ್ ಸೀಟ್' ಎನ್ನುವ ಸೆಕ್ಷನ್ ಅಡಿ ಈ ಎರಡು ಸೀಟ್ ಖರೀದಿಸಲು ಆಯ್ಕೆಯನ್ನು ಓಪನ್ ಮಾಡಿದೆ. ಇದರ ಜತೆಗೆ ವಾಂಖೇಡೆ ಮೈದಾನದಲ್ಲಿರುವ ಹಾಸ್ಪಿಟಾಲಿಟಿ ವ್ಯವಸ್ಥೆಯನ್ನು ಒಳಗೊಂಡಿರುವ ಮೆಮೋರಿಯಲ್ ಸ್ಟ್ಯಾಂಡ್‌ನ ಎರಡು ಸೀಟ್‌ಗಳ ಟಿಕೆಟ್‌ಗಳನ್ನು ಹರಾಜು ಮಾಡಲಾಗುವುದು ಎಂದು ತಿಳಿಸಿದೆ.
ಈ ಕುರಿತಂತೆ ಮಾತನಾಡಿರುವ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ, "ಈ ಎರಡು ಸೀಟುಗಳಗೆ ಶಾಶ್ವತವಾಗಿ ಎಂ ಎಸ್ ಧೋನಿ ಹೆಸರಿಡಲಾಗಿದೆ. ಈ ಸೀಟ್‌ಗಳನ್ನು ಎಂಎಸ್ ಧೋನಿ ಸೀಟ್‌ಗಳೆಂದು ಗುರುತಿಸಲಾಗಿದೆ. ನಾವು ಈ ಸೀಟ್‌ಗಳನ್ನು ವಿಶೇಷವಾಗಿ ಮಾಡುವ ಪ್ರಯತ್ನದಲ್ಲಿದ್ದೇವೆ. ಇವನ್ನು ಮೆಮೋರಿಯಲ್ ಅನ್ನಾಗಿ ಮಾಡುವುದಿಲ್ಲ. ಇದಕ್ಕೆ ಬದಲಾಗಿ ಈ ಸೀಟ್‌ಗಳನ್ನು ಸುಂದರವಾಗಿ ಡಿಸೈನ್ ಮಾಡಲಿದ್ದೇವೆ. ಈ ಸೀಟ್‌ಗಳು ಒಂದು ರೀತಿ ಸೋಪಾ ರೀತಿಯಲ್ಲಿ ಇರಲಿದ್ದು, ಹಾಸ್ಪಿಟಾಲಿಟಿ ವ್ಯವಸ್ಥೆಯನ್ನು ಹೊಂದಿರಲಿದೆ. ಮುಂದಿನ 10 ದಿನಗಳಲ್ಲಿ ನಾವು ಈ ಸೀಟ್‌ಗಳ ಹರಾಜು ಹಾಕಲಿದ್ದೇವೆ" ಎಂದು ತಿಳಿಸಿದ್ದಾರೆ.
2011ರ ಏಪ್ರಿಲ್ 02ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ವೇಗಿ ನುವಾನ್ ಕುಲಸೇಖರ್ ಅವರ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಧೋನಿ, ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡವು ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರುವಂತೆ ಮಾಡಿದ್ದರು. ಇದರ ಜತೆಗೆ ಭಾರತ ಕ್ರಿಕೆಟ್ ತಂಡವು ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಧೋನಿ ಸಿಡಿಸಿದ ಸಿಕ್ಸರ್ ಚೆಂಡು ಬಿದ್ದ ಜಾಗವನ್ನು ಕಳೆದ ಏಪ್ರಿಲ್‌ನಲ್ಲಿ ಮುಂಬೈ ಕ್ರಿಕೆಟ್ ಮಂಡಳಿಯ ಸಿಬ್ಬಂದಿಗಳು, ಆ ಜಾಗವನ್ನು ಮೆಮೋರಿಯಲ್ ಸ್ಟ್ಯಾಂಡ್ ಆಗಿ ನಿರ್ಮಿಸುವ ಮೂಲಕ ಕ್ರಿಕೆಟ್ ಲೆಜೆಂಡ್‌ಗೆ ವಿನೂತನ ಗೌರವ ಸಲ್ಲಿಸಿದ್ದರು.
ಮತ್ತೆ ಅಭ್ಯಾಸ ಆರಂಭಿಸಿದ ಅಯ್ಯರ್: ಫೈನಲ್‌ಗೆ ಫಿಟ್?
ಕೊಲಂಬೊ: ಇತ್ತೀಚೆಗಷ್ಟೇ ತಂಡಕ್ಕೆ ವಾಪಸಾಗಿದ್ದರೂ ಮತ್ತೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಪಾಕಿಸ್ತಾನ ಹಾಗೂ ಶ್ರೀಲಂಕಾದ ವಿರುದ್ಧದ ಸೂಪರ್-4 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಭಾರತದ ತಾರಾ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಭಾನುವಾರ ನಿಗದಿಯಾಗಿರುವ ಫೈನಲ್ ಪಂದ್ಯಕ್ಕೆ ಅವರು ಫಿಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗತ್ತಿದೆ. ಗುರುವಾರ ಶ್ರೇಯಸ್ ನೆಟ್ಸ್ ಅಭ್ಯಾಸ ನಡೆಸಿದರು. ಗುರುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.