ಇಂಗ್ಲೆಂಡ್ ತಂಡವು ಪಾಕಿಸ್ತಾನ ಎದುರು ಬೃಹತ್ ಮೊತ್ತ ದಾಖಲಿಸುವ ಮೂಲಕ ಮುಲ್ತಾನ್ ಟೆಸ್ಟ್‌ನಲ್ಲಿ ಬಿಗಿ ಹಿಡಿತ ಸಾಧಿಸಿದೆ

ಮುಲ್ತಾನ್ (ಪಾಕಿಸ್ತಾನ): ಆತಿಥೇಯ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ಪರಾಕ್ರಮ ಮೆರೆದಿದ್ದು, ಹಲವು ವಿಶ್ವ ದಾಖಲೆಗಳನ್ನು ಮುರಿದಿದೆ. 'ಹೈವೇ' ಎಂದು ಕರೆಸಿಕೊಳ್ಳುತ್ತಿರುವ ಇಲ್ಲಿನ ಪಿಚ್‌ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 823 ರನ್ ಕಲೆಹಾಕಿತು.

ಪಾಕಿಸ್ತಾನದ 556 ರನ್‌ಗೆ ಉತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್, ಆತಿಥೇಯ ತಂಡದ ಬೌಲರ್ ಗಳನ್ನು ಚೆಂಡಾಡಿತು. ಜೋ ರೂಟ್ 375 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ 262 ರನ್ ಚಚ್ಚಿದರೆ, ಹ್ಯಾರಿ ಬೂಕ್ 322 ಎಸೆತಗಳಲ್ಲಿ 29 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 317 ರನ್ ಸಿಡಿಸಿ ಔಟಾದರು. ತಂಡ ಒಟ್ಟಾರೆ 150 ಓವರ್‌ಗಳಲ್ಲಿ 7 ವಿಕೆಟ್‌ಗೆ 823 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್ ಮುನ್ನಡೆ ಪಡೆಯಿತು.

ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ 4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 152 ರನ್ ಗಳಿಸಿದ್ದು, ಇನ್ನೂ 115 ರನ್ ಹಿನ್ನಡೆಯಲ್ಲಿದೆ. ತಂಡ ಇನ್ನಿಂಗ್ಸ್ ಸೋಲು ತಪ್ಪಿಸಲು ಹೋರಾಡುತ್ತಿದೆ.

22 ಗ್ರ್ಯಾನ್‌ ಸ್ಲಾಂ ಒಡೆಯ, ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ಟೆನಿಸ್‌ಗೆ ಗುಡ್‌ ಬೈ

4ನೇ ವಿಕೆಟ್‌ಗೆ ಬ್ರೂಕ್ -ರೂಟ್ 454 ರನ್ ಜತೆಯಾಟ:

ಇಂಗ್ಲೆಂಡ್ ಬ್ಯಾಟಿಂಗ್ ತಾರೆಯರಾದ ಜೋ ರೂಟ್‌ ಹಾಗೂ ಹ್ಯಾರಿ ಬ್ರೂಕ್‌ 4ನೇ ವಿಕೆಟ್‌ಗೆ 454 ರನ್ ಜೊತೆಯಾಟವಾಡಿದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ 4ನೇ ವಿಕೆಟ್‌ನಲ್ಲಿ 2ನೇ ಗರಿಷ್ಠ ಜೊತೆಯಾಟ. 2006ರಲ್ಲಿದ.ಆಫ್ರಿಕಾ ವಿರುದ್ಧ ಶ್ರೀಲಂಕಾದ ಸಂಗಕ್ಕರ-ಜಯವರ್ಧನೆ 624 ರನ್ ಜೊತೆಯಾಟವಾಡಿದ್ದರು.

ಇಂಗ್ಲೆಂಡ್‌ನ 823 ರನ್

ಇಂಗ್ಲೆಂಡ್ ಬಾರಿಸಿದ 823 ರನ್ ಟೆಸ್ಟ್‌ನಲ್ಲಿ ತಂಡವೊಂದರ 4ನೇ ಗರಿಷ್ಠ. 1997ರಲ್ಲಿ ಭಾರತ ವಿರುದ್ಧ ಶ್ರೀಲಂಕಾ 6 ವಿಕೆಟ್‌ಗೆ 952, 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 903/7, 1930ರಲ್ಲಿ ವಿಂಡೀಸ್ ವಿರುದ್ದ ಇಂಗ್ಲೆಂಡ್ 849/10 ರನ್ ಗಳಿಸಿತ್ತು.