ರಾಂಚಿ(ಡಿ.09): ಭಾರತೀಯ ಸೇನೆಯ ಪ್ಯಾರಾಚ್ಯೂಟ್ ರೆಜಿಮೆಂಟ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ಇದೀಗ ಸೈನ್ಯಕ್ಕೆ ಮತ್ತೊಂದು ಕೊಡುಗೆ ನೀಡಲು ಮುಂದಾಗಿದ್ದಾರೆ. ಧೋನಿ ಶೀಘ್ರದಲ್ಲೇ ಸೇನಾಧಿಕಾರಿಗಳಿಗಿ ಟಿವಿ ಶೋ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ಉಗ್ರ ಚಟುವಟಿಕೆ: ದಕ್ಷಿಣ ಕಾಶ್ಮೀರದಲ್ಲಿ ಧೋನಿ ಪಹರೆ!

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಧೋನಿ, ಇದೀಗ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಹೀರೋಗಳ ವೀರ ಚರಿತ್ರೆ ಹೇಳುವು ಟಿವಿ ಶೋ ನಿರ್ಮಾಣ ಮಾಡಲಿದ್ದಾರೆ.  ಈ ಕಾರ್ಯಕ್ರಮದ ಮೂಲಕ ಪರಮ ವೀರ ಚಕ್ರ, ಆಶೋಕ ಚಕ್ರ ಪ್ರಶಸ್ತಿ ಪಡೆದ ವೀರ ಯೋಧರ ಕತೆಗಳು ಎಲ್ಲರನ್ನೂ ತಲುಪಲಿದೆ. 

ಇದನ್ನೂ ಓದಿ: ಯೋಧರಿಗೆ ಹಾಡಿನ ಮೂಲಕ ಸ್ಫೂರ್ತಿ ತುಂಬಿದ ಸೈನಿಕ ಧೋನಿ!

ಸೈನಿಕರ, ಸೇನಾಧಿಕಾರಿಗಳ ವೈಯುಕ್ತಿ ವಿಚಾರ, ಸೇನೆಯ ಸೇವೆ, ಕಠಿಣ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲಲಿದೆ. ಭಾರತೀಯ ಟಿವಿ ಶೋನಲ್ಲಿ ಹೊಸ ಕಾರ್ಯಕ್ರಮಕ್ಕೆ ಧೋನಿ ಮುಂದಾಗಿದ್ದಾರೆ. ಈ ಮಹತ್ವದ ಟಿವಿ ಶೋ ನಿರ್ಮಾಣ ಮಾಡಲಿರುವ ಧೋನಿ, 2020ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. 

2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ, ಭಾರತೀಯ ಸೇನೆಯಲ್ಲಿ 15 ದಿನ ಸೇವೆ ಸಲ್ಲಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಧೋನಿ ಸೈನಿಕರ ಜೊತೆ ಸೇವೆ ಸಲ್ಲಿಸಿದ್ದರು. ಆದರೆ ವಿಶ್ವಕಪ್ ಬಳಿಕ ಧೋನಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.