Asianet Suvarna News Asianet Suvarna News

ಯೋಧರಿಗೆ ಹಾಡಿನ ಮೂಲಕ ಸ್ಫೂರ್ತಿ ತುಂಬಿದ ಸೈನಿಕ ಧೋನಿ!

ಭಾರತೀಯ ಸೇನೆ ಜೊತೆ 15 ದಿನಗಳ ಕಾಲ ಸೇವೆ ಸಲ್ಲಿಸಲಿರು ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ದಕ್ಷಿಣ ಕಾಶ್ಮೀರದಲ್ಲಿ ಪಹರೆ ಆರಂಭಿಸಿದ್ದಾರೆ. ಇದೇ ವೇಳೆ ಸೈನಿಕರಿಗೆ ಹಾಡಿನ ಮೂಲಕ ಸ್ಫೂರ್ತಿ ತುಂಬಿದ್ದಾರೆ.

MS Dhoni singing the classic Indian song in 106 Territorial army Battalion at kashmir
Author
Bengaluru, First Published Aug 4, 2019, 12:12 PM IST
  • Facebook
  • Twitter
  • Whatsapp

ಕಾಶ್ಮೀರ(ಆ.04): ದಕ್ಷಿಣ ಕಾಶ್ಮೀರದಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಭಾರತೀಯ ಸೇನೆ ಸೇರಿಕೊಂಡ ಧೋನಿ, ಕಣಿವೆ ರಾಜ್ಯದಲ್ಲಿ ಯೋಧರ ಜೊತೆ ಗಸ್ತು ತಿರುಗುತ್ತಿದ್ದಾರೆ. 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ನಲ್ಲಿ ಧೋನಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಧೋನಿ ಯೋಧರಿಗೆ ಹಾಡು  ಹೇಳೋ  ಮೂಲಕ ಸ್ಫೂರ್ತಿ ತುಂಬಿದ್ದಾರೆ.

ಇದನ್ನೂ ಓದಿ: ಸೇನೆಯಲ್ಲಿ ಧೋನಿ ಆಟೋಗ್ರಾಫ್‌ಗೆ ಫುಲ್ ಡಿಮ್ಯಾಂಡ್!

106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ ಕ್ಯಾಂಪ್‌ನಲ್ಲಿ ಯೋಧರ ಜೊತೆ ಧೋನಿ ಅನುಭವದ  ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ ಮೆ ಪಲ್ ದೋ ಪಲ್ ಕಾ ಶಾಯರ್ ಹಿಂದಿ ಹಾಡನ್ನು ಹಾಡಿ ಯೋಧರಿಗೆ ಸ್ಫೂತಿ ತುಂಬಿದ್ದಾರೆ.

 

ಇದನ್ನೂ ಓದಿ: ದೇಶ ರಕ್ಷಣೆ ಮಾಡುವ ಸೈನಿಕ ಧೋನಿಗೆ ರಕ್ಷಣೆ ಬೇಕಿಲ್ಲ: ಸೇನಾ ಮುಖ್ಯಸ್ಥ!

ಸೇನಾ ಕ್ಯಾಂಪ್‌ ಸೇರಿಕೊಂಡ ಬಳಿಕ ಧೋನಿ ಆಟೋಗ್ರಾಫ್‌ಗೆ ನೀಡುತ್ತಿರುವ ಫೋಟೋ ವೈರಲ್ ಆಗಿತ್ತು. ಇದು ಸೇನೆ ಸೇರಿಕೊಂಡ ಬಳಿಕ ಬಿಡುಗಡೆಯಾದ ಮೊದಲ ಫೋಟೋ ಆಗಿತ್ತು. ಇದೀಗ ವಿಡಿಯೋ ವೈರಲ್ ಆಗಿದೆ.

Follow Us:
Download App:
  • android
  • ios