ಉಗ್ರ ಚಟುವಟಿಕೆ ಇರುವ ದಕ್ಷಿಣ ಕಾಶ್ಮೀರದಲ್ಲಿ ಧೋನಿ ಪಹರೆ| ಇತರ ಯೋಧರಂತೆ ಪಹರೆ ಹಾಗೂ ಕಾವಲು ಕಾಯುವ ಜವಾಬ್ದಾರಿ 

ಶ್ರೀನಗರ[ಆ.01]: ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿರುವ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಉಗ್ರಗಾಮಿ ಚಟುವಟಿಕೆ ಹೆಚ್ಚಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಬುಧವಾರ ಸೇನೆಯ ಜೊತೆ ಸೇವೆಯನ್ನು ಆರಂಭಿಸಿದ್ದು, ಇತರ ಯೋಧರಂತೆ ಪಹರೆ ಹಾಗೂ ಕಾವಲು ಕಾಯುವ ಜವಾಬ್ದಾರಿ ನಿರ್ವಹಿಸಿದರು.

ಆ.15ವರೆಗೂ 106 ಟಿ.ಎ. ಪ್ಯಾರಾ ಬೆಟಾಲಿಯನ್‌ನಲ್ಲಿ ಧೋನಿ ಕರ್ತವ್ಯ ನಿರ್ವಹಿಸಿಲಿದ್ದಾರೆ. ಈ ಪಡೆಯ ಸೈನಿಕರ ಜೊತೆಗೇ ಇದ್ದು, ಅವರು ನಿರ್ವಹಿಸುವ ಎಲ್ಲಾ ಕೆಲಸಗಳನ್ನೂ ಮಾಡಲಿದ್ದಾರೆ. ಧೋನಿಯನ್ನು 2011 ರಲ್ಲಿ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಆಗಿ ನೇಮಕಗೊಳಿಸಲಾಗಿತ್ತು.

ಕಾಶ್ಮೀರದಲ್ಲಿ ಇಂದಿನಿಂದ ಗಸ್ತು ತಿರುಗಲಿದ್ದಾರೆ ಕ್ರಿಕೆಟಿಗ ಧೋನಿ!

2015ರಲ್ಲಿ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್‌ ತರಬೇತಿ ಕೇಂದ್ರದಲ್ಲಿ 5 ತರಬೇತಿ ಪೂರ್ಣಗೊಳಿಸುವ ಮೂಲಕ ಅರ್ಹತೆ ಪಡೆದ ಪ್ಯಾರಾಟ್ರೂಪರ್‌ ಆಗಿ ಹೊರಹೊಮ್ಮಿದ್ದರು.