ರಾಂಚಿ(ಜು.10): ಕೊರೋನಾ ವೈರಸ್ ಕಾರಣ ಕ್ರಿಕೆಟಿಗರು ಮನೆಯಲ್ಲಿ ದಿನ ದೂಡುತ್ತಿದ್ದಾರೆ. ಜೊತೆಗೆ ಇಂಡೋರ್ ಅಭ್ಯಾಸ ಮಾಡುತ್ತಾ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದಾರೆ. ಇತ್ತ ಧೋನಿ ಕೂಡ ಬ್ಯುಸಿಯಾಗಿದ್ದಾರೆ. ಆದರೆ ಧೋನಿ ಕ್ರಿಕೆಟ್ ಅಭ್ಯಾಸ ಮಾಡುತ್ತಿಲ್ಲ, ಬದಲಾಗಿ ತಮ್ಮ ಹೊಲದಲ್ಲಿ ರೈತನಾಗಿ ಕೆಲಸ ಮಾಡುತ್ತಾ ಫಿಟ್ ಆಗಿದ್ದಾರೆ. ಇದರ ನಡುವೆ ಧೋನಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕವೆ ಬ್ರ್ಯಾಂಡ್ ಪ್ರಚಾರ ಮಾಡುವು ನಿರ್ಧಾರಕ್ಕೆ ಬಂದಿದ್ದಾರೆ.

MS ಧೋನಿ ಹುಟ್ಟುಹಬ್ಬಕ್ಕೆ ಹೆಲಿಕಾಪ್ಟರ್ 7 ಹಾಡು ಗಿಫ್ಟ್ ನೀಡಿದ DJ ಬ್ರಾವೋ!...

2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ, ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಐಪಿಎಲ್ ಟೂರ್ನಿ ಕೂಡ ತಾತ್ಕಾಲಿಕ ರದ್ದಾಗಿರುವ ಕಾರಣ ಧೋನಿ ಎಲ್ಲೂ ಕಾಣಿಸುತ್ತಿಲ್ಲ. ಹೊಸ ಜಾಹೀರಾತುಗಳಲ್ಲಿ ಧೋನಿ ಪತ್ತೆ ಇಲ್ಲ. ಇದಕ್ಕೆ ಕಾರಣವನ್ನು ಧೋನಿ ಆಪ್ತ ಗೆಳೆಯ ಮಹಿರ್ ದಿವಾಕರ್ ಬಿಚ್ಚಿಟ್ಟಿದ್ದಾರೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದು ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಬಳಿಕ ಎಂಡೋರ್ಸ್‌ಮೆಂಟ್. ಅಲ್ಲೀವರೆಗೆ ಯಾವುದೂ ಇಲ್ಲ ಎಂದು ಧೋನಿ ನಿರ್ಧರಿಸಿದ್ದಾರೆ ಎಂದು  ದಿವಾಕರ್ ಹೇಳಿದ್ದಾರೆ.

ಇಲ್ಲಿವೆ ನೋಡಿ ಧೋನಿ ಸಾಧನೆಯ ಒಂದು ಝಲಕ್

ಧೋನಿಯ ದೇಶಭಕ್ತಿಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಭಾರತೀಯ ಸೇನೆ ಜೊತೆ ಗಡಿಯಲ್ಲಿ ಸೇವೆ ಸಲ್ಲಿಸಿದ ಧೋನಿ, ಇದೀಗ ರೈತನಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕೆಲಸವನ್ನು ಅಷ್ಟೇ ಶ್ರದ್ಧೆಯಿಂದ ಗೌರವದಿಂದ ಮಾಡುತ್ತಾರೆ. ಧೋನಿ ರಾಂಚಿಯಲ್ಲಿ 40 ರಿಂದ 50 ಏಕರೆ ಸ್ಥಳವಿದೆ. ಇದರಲ್ಲಿ ಪಪಾಯ, ಪೈನಾಪಲ್, ಬನಾನ ಸೇರಿದಂತೆ ಹಲವು ಆರ್ಗಾನಿಕ್ ಬೆಳೆ ಬೆಳೆಯುತ್ತಿದ್ದಾರೆ ಎಂದು ದಿವಾಕರ್ ಹೇಳಿದ್ದಾರೆ.

 

ಕೊರೋನಾ ವೈರಸ್ ಹೋರಾಟಕ್ಕೆ ಧೋನಿ ಕೇವಲ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬಂದಿತ್ತು. ದೇಶಕ್ಕಾಗಿ ಸದಾ ತುಡಿಯುವ ಧೋನಿ ಬಗ್ಗೆ ಟೀಕೆ ಸಮಂಜಸವಲ್ಲ ಎಂದು ದಿವಾಕರ್ ಹೇಳಿದ್ದಾರೆ. ಇಷ್ಟೇ ಅಲ್ಲ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದರು.