Asianet Suvarna News Asianet Suvarna News

MS ಧೋನಿ ಹುಟ್ಟುಹಬ್ಬಕ್ಕೆ ಹೆಲಿಕಾಪ್ಟರ್ 7 ಹಾಡು ಗಿಫ್ಟ್ ನೀಡಿದ DJ ಬ್ರಾವೋ!

ವಿಶ್ವಕಂಡ ಅತ್ಯುತ್ತಮ ನಾಯಕ, ಭಾರತಕ್ಕೆ 3 ಐಸಿಸಿ ಟ್ರೋಫಿ ಗೆಲ್ಲಿಕೊಟ್ಟ ವೀರ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಹಲವು ದಿಗ್ಗಜರು ಧೋನಿಗೆ ಶುಭಕೋರಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಟೀಮ್‌ಮೇಟ್ಸ್, ಧೋನಿ ಆತ್ಮೀಯ ಗೆಳೆಯ ಡ್ವೇನ್ ಬ್ರಾವೋ ಧೋನಿಗೆ ಹೆಲಿಕಾಪ್ಟರ್ 7 ಹಾಡನ್ನು ಗಿಫ್ಟ್ ಮಾಡಿದ್ದಾರೆ.

Dwayne Bravo gift helicopter 7 song on MS Dhoni birthday
Author
Bengaluru, First Published Jul 7, 2020, 7:09 PM IST
  • Facebook
  • Twitter
  • Whatsapp

ರಾಂಚಿ(ಜು.07):  ವಿಶ್ವಕಂಡ ಅದ್ಭುತ ಕ್ರಿಕೆಟಿಗ, ಶ್ರೇಷ್ಠ ನಾಯಕ ಎಂ.ಎಸ್.ಧೋನಿ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟೀಮ್‌ಮೇಟ್ಸ್ ಡ್ವೇನ್ ಬ್ರಾವೋ ಹೆಲಿಕಾಪ್ಟರ್ 7 ಹಾಡನ್ನು ಧೋನಿಗೆ ಗಿಫ್ಟ್ ನೀಡಿದ್ದಾರೆ. ಧೋನಿ ಕುರಿತ ಈ ಹಾಡು , ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಬ್ರಾವೋ ನೀಡಿದ್ದಾರೆ.

#Happy Birthday MSD - ಕ್ಯಾಪ್ಟನ್‌ ಕೂಲ್‌ ಬಗ್ಗೆ ಗೊತ್ತಿರದ ಸಂಗತಿಗಳಿವು

ಎಂ.ಎಸ್.ಧೋನಿ ಹುಟ್ಟು ಹಬ್ಬ ಜುಲೈ 07ನೇ ತಾರೀಖು. ಹೀಗಾಗಿ ಧೋನಿ ಜರ್ಸಿ ನಂಬರ್ 7. ಇದೇ ಜರ್ಸಿ ನಂಬರ್ 7 ಹಾಗೂ ಧೋನಿಯ ಸಿಗ್ನೇಚರ್ ಸಿಕ್ಸ್ ಹೆಲಿಕಾಪ್ಟರ್ ಶಾಟ್‌ನ್ನು ಈ ಹಾಡಿನಲ್ಲಿ ಸೇರಿಸಲಾಗಿದೆ. ಧೋನಿ ಸಾಧನೆಗಳನ್ನು, ಸರಳತೆಯನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. ಧೋನಿ ಕ್ರಿಕೆಟ್ ಜರ್ನಿ, ಐಸಿಸಿ 3 ಟ್ರೋಫಿ ಸೇರಿದಂತೆ ಸಾಧನೆಯ ಚಿತ್ರಣವನ್ನು ನೀಡಲಾಗಿದೆ. 

Happy Birthday MSD: ಇಲ್ಲಿವೆ ನೋಡಿ ಧೋನಿ ಸಾಧನೆಯ ಒಂದು ಝಲಕ್

ಚಾಂಪಿಯನ್ ಹಾಡಿನ ಮೂಲಕ ಹೊಸ ಸಂಚಲನ ಮೂಡಿಸಿರುವ ಡ್ವೇನ್ ಬ್ರಾವೋ ಇದೀಗ ಧೋನಿಗಾಗಿಗ ಹೆಲಿಕಾಪ್ಟರ್ 7 ಹಾಡನ್ನು ಬಿಡುಗಡೆ ಮಾಡಿ ಸದ್ದು ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ ಖಾತೆಯಲ್ಲಿ ಸಂಪೂರ್ಣ ಹಾಡನ್ನು ಪೋಸ್ಟ್ ಮಾಡಲಾಗಿದೆ. ಧೋನಿ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  

 

ಮಹಿ ಬರ್ತ್‌ ಡೇಗೆ ಹೃದಯಸ್ಪರ್ಷಿಯಾಗಿ ಶುಭಕೋರಿದ ಕೊಹ್ಲಿ..!.

ಧೋನಿ ಹುಟ್ಟು ಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ವಿದೇಶಿ ಕ್ರಿಕೆಟಿಗರು ಸೇರಿದಂತೆ ಎಲ್ಲರೂ ಧೋನಿಗೆ ಶುಭಾಶಯ ಕೋರಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, ಈ ಬಾರಿಯ ಐಪಿಎಲ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ಮಾತುಗಳು ಬಲವಾಗಿತ್ತು. ಆದರೆ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಆಯೋಜನೆ ಕಷ್ಟವಾಗಿದೆ. ಸರಿಸುಮಾರು 1 ವರ್ಷಗಳ ಬಳಿಕ ಧೋನಿ ಬ್ಯಾಟಿಂಗ್ ನೋಡಲು ಬಯಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. 

Follow Us:
Download App:
  • android
  • ios