ರಾಂಚಿ(ಅ.27): ಭಾರತದ ಮಾಜಿ ನಾಯಕ ಎಂ.ಎಸ್‌. ಧೋನಿ ಕ್ರಿಕೆಟ್‌ ಭವಿ​ಷ್ಯದ ಕುರಿತು ಚರ್ಚೆ ನಡೆ​ಯು​ತ್ತಿದೆ. ಇದೇ ಸಂದರ್ಭ ಧೋನಿ ಮೌನ​ವಾ​ಗಿ ತಮ್ಮ ಭವಿ​ಷ್ಯದ ಬಗ್ಗೆ ಯೋಜ​ನೆ​ಗ​ಳನ್ನು ರೂಪಿಸುತ್ತಿದ್ದಾರಂತೆ. ಕ್ರಿಕೆ​ಟ್‌​ನಿಂದ ಹಣ ಸಂಪಾ​ದಿ​ಸಿರುವ ಧೋನಿ, ಕ್ರಿಕೆ​ಟ್‌ಗೂ ತಮ್ಮಿಂದ ಕೊಡುಗೆ ನೀಡಲು ಮುಂದಾಗಿದ್ದಾರೆ. ದೇಶ​ದೆ​ಲ್ಲೆಡೆ, ವಿದೇ​ಶ​ದ​ಲ್ಲೂ ಕ್ರಿಕೆಟ್‌ ಅಕಾ​ಡೆ​ಮಿ​ ಸ್ಥಾಪಿ​ಸಲು ಧೋನಿ ಯೋಚಿ​ಸಿ​ದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.

ಮೊದಲ ಹಂತ​ದಲ್ಲಿ ತಮ್ಮ ತವರು ರಾಂಚಿ​ಯಲ್ಲಿ ಕ್ರಿಕೆಟ್‌ ಅಕಾ​ಡೆ​ಮಿ​ಯೊಂದನ್ನು ತೆರೆ​ಯಲು ಯೋಜನೆ ಹಾಕಿ​ಕೊಂಡಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಬಾಲ್ಯದ ಗೆಳೆಯ, ಮ್ಯಾನೇ​ಜರ್‌ ಮಿಹಿರ್‌ ದಿವಾ​ಕ​ರ್‌ ಅವರ ‘ಆರ್ಕಾ ಸ್ಪೋರ್ಟ್ಸ್ ರಾಂಚಿ​ಯಲ್ಲಿ ಮುಂದಿನ 2 ವರ್ಷ​ಗ​ಳಲ್ಲಿ ಅಕಾ​ಡೆಮಿ ಸ್ಥಾಪಿ​ಸಲಿದೆ. ಇತ್ತೀ​ಚೆಗೆ ಧೋನಿ ಇಂದೋ​ರ್‌​ನಲ್ಲಿ ಅಕಾ​ಡೆಮಿ ತೆರೆ​ದಿದ್ದು, ಶೀಘ್ರ ಸಿಲಿ​ಗು​ರಿ​ಯಲ್ಲೊಂದು ಕ್ರಿಕೆಟ್‌ ಅಕಾ​ಡೆಮಿ ಆರಂಭಿ​ಸ​ಲಿ​ದ್ದಾ​ರೆ. ಅಲ್ಲದೆ ಡೆಲ್ಲಿ, ಪಾಟ್ನಾ, ಬೊಕಾರೊ, ನಾಗ್ಪುರ, ವಾರ​ಣಾಸಿಯಲ್ಲಿ ಈಗಾ​ಗಲೇ ಧೋನಿ ಅಕಾ​ಡೆಮಿ ಆರಂಭ​ವಾ​ಗಿ​ವೆ.

ಧೋನಿ ಪುಲ್‌ಅಫ್ಸ್‌ಗೆ ಅಭಿಮಾನಿಗಳು ಫಿದಾ
ವಯಸ್ಸು ಕೇವಲ ಸಂಖ್ಯೆ​ಯಷ್ಟೇ ಎಂಬು​ದ​ನ್ನು ಮಾಜಿ ನಾಯಕ ಎಂ.ಎಸ್‌ ಧೋನಿ ಮತ್ತೊಮ್ಮೆ ಸಾಬೀ​ತು​ಪ​ಡಿ​ಸಿ​ದ್ದಾ​ರೆ. ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ (ಜೆಎ​ಸ್‌​ಸಿ​ಎ)ಯಲ್ಲಿ 38ನೇ ವಯಸ್ಸಿನಲ್ಲಿ ಧೋನಿ, ಜಿಮ್‌ ಮಾಡು​ತ್ತಿ​ರುವ ಇತ್ತೀ​ಚೆ​ಗಿನ ವೀಡಿಯೋ ವೈರಲ್‌ ಆಗಿದೆ. ವೀಡಿ​ಯೋ​ದಲ್ಲಿ ಧೋನಿ ನಾಲ್ಕು ಪುಲ್‌​ಅಫ್ಸ್‌ ತೆಗೆ​ಯು​ವು​ದನ್ನು ಕಾಣ​ಬ​ಹುದು. ಸ್ಟಂಫ್ಸ್‌ ಹಿಂದೆ ಧೋನಿ ಕೈ, ಕಾಲು​ಗ​ಳನ್ನು ವೇಗ​ವಾಗಿ ಸಂಚ​ರಿ​ಸು​ತ್ತಾರೆ. ನಾಯಕ​ತ್ವದ ದಿನ​ಗ​ಳಿಂದಲೇ ಧೋನಿ ಫಿಟ್ನೆಸ್‌ಗೆ ಶೇ.100ರಷ್ಟುಆದ್ಯತೆ ನೀಡು​ತ್ತಲೇ ಬಂದಿ​ದ್ದು, ಫಿಟ್ನೆಸ್‌ ಉಳಿ​ಸಿ​ಕೊಂಡಿದ್ದಾರೆ.