Asianet Suvarna News Asianet Suvarna News

ದ್ರಾವಿಡ್ ಕೋಚ್ ಅವಧಿ ಶೀಘ್ರದಲ್ಲೇ ಅಂತ್ಯ, ಆಸ್ಟ್ರೇಲಿಯಾ ಸರಣಿಗೆ ವಿವಿಎಸ್ ಲಕ್ಷ್ಮಣ್‌ಗೆ ಜವಾಬ್ಜಾರಿ!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ ಗೆಲುವಿನ ಲಯದಲ್ಲಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ತಂಡದ ಯಶಸ್ಸಿನ ಪ್ರಮುಖ ರೂವಾರಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಶೀಘ್ರದಲ್ಲೇ ಅಂತ್ಯಗೊಳ್ಳುತ್ತಿದೆ. ಇತ್ತ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿವಿಎಸ್ ಲಕ್ಷ್ಣಣ್‌ಗೆ ಕೋಚ್ ಪಟ್ಟ ಕಟ್ಟಲು ಸಿದ್ಧತೆಗಳು ನಡೆದಿದೆ.
 

Rahul Dravid Team India coach term will expire end of ICC World cup 2023 ckm
Author
First Published Oct 27, 2023, 3:21 PM IST

ಮುಂಬೈ(ಅ.27) ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ರಾಹುಲ್ ದ್ರಾವಿಡ್ ಕೋಚಿಂಗ್ ಅವಧಿ ನವೆಂಬರ್ 19ಕ್ಕೆ ಅಂತ್ಯಗೊಳ್ಳುತ್ತಿದೆ. ವಿಶ್ವಕಪ್ ಟೂರ್ನಿ ವರೆಗೆ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಸಲಿದ್ದಾರೆ. ನವೆಂಬರ್ 23 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭಗೊಳ್ಳತ್ತಿದೆ. ಈ ಸರಣಿಗೆ  ಎನ್‌ಸಿಎ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷಣ್‌ಗೆ ಟೀಂ ಇಂಡಿಯಾ ಕೋಚ್ ಪಟ್ಟ ಸಾಧ್ಯತೆಗಳು ದಟ್ಟಾವಾಗಿದೆ.

ರವಿ ಶಾಸ್ತ್ರಿ ಬಳಿಕ ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡ ರಾಹುಲ್ ದ್ರಾವಿಡ್ ತಂಡದಲ್ಲಿನ ಶಿಸ್ತು ಹಾಗೂ ಉತ್ತಮ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವದ ನೀಡಿದ್ದರು. ಇದರ ಪರಿಣಾಮ ಇದೀಗ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವಿನ ಲಯದಲ್ಲಿದೆ. ರಾಹುಲ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಕಳೆದ ವರ್ಷದ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶ ಪಡೆದಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. 

ಸಿಬ್ಬಂದಿಗೆ ಟ್ರಕ್ಕಿಂಗ್ ಆಯೋಜಿಸಿದ ಕೋಚ್ ದ್ರಾವಿಡ್, ಕೊಹ್ಲಿ-ರೋಹಿತ್ ಸೇರಿ ಆಟಗಾರರಿಗೆ ನೋ ಎಂಟ್ರಿ!

ರಾಹುಲ್ ದ್ರಾವಿಡ್ 2 ವರ್ಷದ ಟೀಂ ಇಂಡಿಯಾ ಕೋಚಿಂಗ್ ಅವಧಿ ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯಗೊಳ್ಳುತ್ತಿದೆ. ದ್ರಾವಿಡ್ ಅವರನ್ನೇ ಮತ್ತೆರಡು ವರ್ಷಕ್ಕೆ ಮುಂದುವರಿಸಲು ಬಿಸಿಸಿಐ ಆಸಕ್ತಿ ವಹಿಸಿದೆ. ಇದರ ನಡುವೆ ವಿಶ್ರಾಂತಿ ನೀಡುವ ಸಲುವಾಗಿ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿವಿಎಸ್ ಲಕ್ಷ್ಮಣ್‌ಗೆ ಕೋಚ್ ಜವಾಬ್ದಾರಿ ನೀಡಲು ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 5 ಟಿ20 ಪಂದ್ಯ ಆಡಲಿದೆ. ಈ ಸರಣಿ ಭಾರತದಲ್ಲೇ ನಡೆಯಲಿದೆ.

ರಾಹುಲ್ ದ್ರಾವಿಡ್ ಕೋಚಿಂಗ್ ಮತ್ತೆರೆಡು ವರ್ಷಕ್ಕೆ ಮುಂದುವರಿಸಿ 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ವರೆಗೂ ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿದೆ. ಐಸಿಸಿ ಟ್ರೋಫಿ ಕೊರತೆ ನೀಗಿಸಿಕೊಳ್ಳಲು ಬಿಸಿಸಿಐ ಕೆಲ ಪ್ಲಾನ್ ಮಾಡಿದೆ. ಈ ಕುರಿತು ದ್ರಾವಿಡ್ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದೆ ಅನ್ನೋ ಮಾತುಗಳು ಕೇಳಿಬಂದಿದ. 

ಇಂಗ್ಲೆಂಡ್‌ ಎದುರಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡ್ತಾರಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ವಿಶ್ರಾಂತಿ ನೀಡುವ ಸಾಧ್ಯತೆ ಇದೆ. 

Follow Us:
Download App:
  • android
  • ios