ಐಪಿಎಲ್ ಹರಾಜಿನಲ್ಲಿ ಸೈಲೆಂಟ್ ಟೈ ಬ್ರೇಕರ್‌ ಅಂದ್ರೆ ಏನು? ಇಲ್ಲಿದೆ ಡೀಟೈಲ್ಸ್‌

ಐಪಿಎಲ್ ಹರಾಜಿನಲ್ಲಿ ಬಳಕೆಯಾದ ಸೈಲೆಂಟ್ ಟೈಬ್ರೇಕರ್ ಬಗ್ಗೆ ತಿಳಿಯೋಣ ಬನ್ನಿ

What is a silent tie breaker bid in IPL 2025 auction kvn

ಬೆಂಗಳೂರು: 2025ರ ಐಪಿಎಲ್ ಮೆಗಾ ಹರಾಜಿಗೆ ಭರ್ಜರಿಯಾಗಿಯೇ ಚಾಲನೆ ಸಿಕ್ಕಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಇನ್ನು ಈ ಹರಾಜಿನಲ್ಲಿ  ಮತ್ತೊಮ್ಮೆ ಸೈಲೆಂಟ್ ಟೈ ಬ್ರೇಕರ್ ಹೆಚ್ಚು ಗಮನ ಸೆಳೆದಿದೆ. 

ಹಾಗಿದ್ರೆ ಏನಿದು ಸೈಲೆಂಟ್ ಟೈ ಬ್ರೇಕರ್?

ಸೈಲೆಂಟ್ ಟೈ ಬ್ರೇಕರ್ ಎಂದರೆ ಒಂದು ಆಟಗಾರನ ಮೇಲೆ ಎರಡು ಫ್ರಾಂಚೈಸಿಗಳು ಒಂದು ಮೊತ್ತಕ್ಕೆ ಬಿಡ್ ಮಾಡುತ್ತವೆ. ಇದಾದ ನಂತರ ತನ್ನ ಪರ್ಸ್‌ನಲ್ಲಿ ಹೆಚ್ಚಿಗೆ ಹಣವಿಲ್ಲದೇ ಹೋದರೇ, ಬಿಡ್ ಟೈ ಆಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಿಸಿಸಿಐ ಸೈಲೆಂಟ್ ಟೈ ಬ್ರೇಕರ್ ಅವಕಾಶವನ್ನು ಕಲ್ಪಿಸಿದೆ.

ಹೌದು ಸೈಲೆಂಡ್ ಟೈ ಬ್ರೇಕರ್ ಎಂದರೆ ಆ ಎರಡು ತಂಡಗಳು ಹಾಳೆಯಲ್ಲಿ ಬರೆದು ತಮ್ಮ ಅಂತಿಮ ಬಿಡ್ ಮೊತ್ತವನ್ನು ಆಕ್ಷನರ್‌ಗೆ ತಿಳಿಸಬೇಕು. ಆ ಎರಡು ತಂಡಗಳ ಪೈಕಿ ಯಾವ ತಂಡದ ಬಿಡ್ಡಿಂಗ್ ಮೊತ್ತ ಹೆಚ್ಚಿರುತ್ತದೋ ಆ ಮೊತ್ತಕ್ಕೆ ಆಟಗಾರ ಆ ತಂಡವನ್ನು ಸೇರಿಕೊಳ್ಳುತ್ತಾರೆ. 

ಆರ್‌ಸಿಬಿ ಫ್ಯಾನ್ಸ್ ಕಾದು ಕುಳಿತಿದ್ದೇ ಬಂತು, ಕೆಎಲ್ ರಾಹುಲ್ ಸೋಲ್ಡ್ ಔಟ್!

ಟೈ ಬ್ರೇಕ್ ಬಿಡ್ ಒಂದು ಕಂತಿನಲ್ಲಿ ಪಾವತಿಸಬೇಕಾದ ಮೊತ್ತವನ್ನು ಸೂಚಿಸುತ್ತದೆ, ಫ್ರಾಂಚೈಸಿಯು ಬಿಸಿಸಿಐಗೆ ಪಾವತಿಸಲು ಸಿದ್ಧವಾಗಿದೆ. ಟೈ-ಬ್ರೇಕ್ ಬಿಡ್‌ನ ಮೊತ್ತವು ಕೊನೆಯ ಬಿಡ್‌ನ ಮೊತ್ತದಿಂದ ಪ್ರತ್ಯೇಕವಾಗಿದೆ ಮತ್ತು ಹೆಚ್ಚುವರಿಯಾಗಿರುತ್ತದೆ. ಟೈ ಬ್ರೇಕ್ ಬಿಡ್ ಎನ್ನುವುದು ಪ್ರತ್ಯೇಕ ಮೊತ್ತವಾಗಿದ್ದು, ಫ್ರಾಂಚೈಸಿಯು ಬಿಸಿಸಿಐಗೆ ಪಾವತಿಸಲು ಸಿದ್ಧವಾಗಿದೆ ಎನ್ನುವುದನ್ನು ಸೂಚಿಸುತ್ತದೆ. 

Latest Videos
Follow Us:
Download App:
  • android
  • ios