Asianet Suvarna News Asianet Suvarna News

ಕ್ರಿಕೆಟ್‌ನಿಂದ ದೂರ, ದೂರ; ಅಜಯ್ ದೇವಗನ್ ಜೊತೆ ಧೋನಿ ಪ್ರತ್ಯಕ್ಷ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಯಾವುದೇ ಕ್ರಿಕೆಟ್ ಆಡಿಲ್ಲ. ಕುಟುಂಬದ ಜೊತೆ ಧೋನಿ ಕಾಲ ಕಳೆಯುತ್ತಿದ್ದಾರೆ. ಇದೀಗ ಧೋನಿ ದಿಢೀರ್ ಆಗಿ ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ಪ್ರತ್ಯಕ್ಷವಾಗಿದ್ದಾರೆ. ಕಾರಣ ಇಲ್ಲಿದೆ. 

MS Dhoni Poses with Bollywood actor ajay devgn
Author
Bengaluru, First Published Jan 9, 2020, 10:30 PM IST
  • Facebook
  • Twitter
  • Whatsapp

ಮುಂಬೈ(ಜ.09): ಭಾರತ ಮಾತ್ರವಲ್ಲ ಇಡೀ ವಿಶ್ವವೇ ಧೋನಿ ಮತ್ತೆ ಮೈದಾನಕ್ಕಿಳಿಯುವದನ್ನು ಕಾಯುತ್ತಿದೆ. ಆದರೆ ಧೋನಿ ಸುಳಿವು ನೀಡುತ್ತಿಲ್ಲ, ಆಯ್ಕೆ ಸಮಿತಿ ತಿರುಗಿ ನೋಡುತ್ತಿಲ್ಲ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಇದೀಗ ಟಿ20 ವಿಶ್ವಕಪ್ ಸರಣಿಗಾದರೂ ಧೋನಿ ತಂಡ ಸೇರಿಕೊಳ್ಳಲಿ ಅನ್ನೋದೇ ಅಭಿಮಾನಿಗಳ ಆಶಯ.

ಇದನ್ನೂ ಓದಿ: ವಯಸ್ಸು 4, ಫ್ಯಾನ್ ಫಾಲೋವರ್ಸ್ 15 ಲಕ್ಷ; ದಾಖಲೆ ಬರೆದ ಝಿವಾ ಧೋನಿ!

ಕ್ರಿಕೆಟ್‌ನಿಂದ ದೂರವಾಗಿರುವ ಧೋನಿ ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ಪ್ರತ್ಯಕ್ಷವಾಗಿದ್ದಾರೆ. ಅಜಯ್ ದೇವಗನ್ ತಮ್ಮ ಬಾಲಿವುಡ್ ಇತಿಹಾಸದಲ್ಲಿ 100ನೇ ಚಿತ್ರದ ಪ್ರಮೋಶನ್‌ನಲ್ಲಿ ಬ್ಯೂಸಿಯಾಗಿದ್ದಾರೆ. ತನ್‌ಹಾಜಿ ಚಿತ್ರ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ. ಇದರ ಪ್ರಚಾರದ ವೇಳೆ ಅಜಯ್ ದೇವಗನ್ ಧೋನಿಯನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

ಸಾಮಾಜಿಕ ಜಾಲತಾಣಧಲ್ಲಿ ಫೋಟೋ ಹಂಚಿಕೊಂಡಿರುವ ಅಜಯ್ ದೇವಗನ್, ಕ್ರಿಕೆಟ್ ಹಾಗೂ ಬಾಲಿವುಡ್, ಎಲ್ಲರನ್ನೂ ಒಂದುಗೂಡಿಸುವ ದೇಶದ ಎರಡು ಧರ್ಮಗಳು ಎಂದು ದೇವಗನ್ ಹೇಳಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Cricket and Films ... the uniting religion of our country @mahi7781

A post shared by Ajay Devgn (@ajaydevgn) on Jan 8, 2020 at 9:31pm PST

ಇತ್ತೀಚೆಗಷ್ಟೇ ಸಾಕ್ಷಿ ಧೋನಿ, ಪುತ್ರಿ ಝಿವಾ ಜೊತೆ ಮುಸೋರಿಯಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅಜಯ್ ದೇವಗನ್ ಜೊತೆ ಧೋನಿ ಕಾಣಿಸಿಕೊಂಡಿದ್ದಾರೆ.
 

Follow Us:
Download App:
  • android
  • ios