ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕ್ರಿಕೆಟ್ ಭವಿಷ್ಯ ಕುರಿತು ಅಭಿಮಾನಿಗಳು ಆತಂಕಗೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ, ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. 2020ರಲ್ಲಿನ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಧೋನಿ ಆಯ್ಕೆಯಾಗಿಲ್ಲ. ಇದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆ ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ಆತಂಕಕ್ಕೆ ಕಾರಣವಾಗಿದೆ. 
 

MS Dhoni communicated with virat kohli and selectors says Sourav ganguly

ಮುಂಬೈ(ಡಿ.28): ಕ್ರಿಕೆಟ್‌ನಿಂದ ದೂರ ಉಳಿದಿರುವ ಎಂ.ಎಸ್.ಧೋನಿ ಮತ್ತೆ ತಂಡಕ್ಕೆ ವಾಪಸ್ಸಾಗಲಿ ಅನ್ನೋದು ಅಭಿಮಾನಿಗಳ ಆಶಯ. ಸದ್ಯ ಧೋನಿ ಬದಲು ತಂಡ ಸೇರಿಕೊಂಡಿರುವ ರಿಷಪ್ ಪಂತ್ ಕಳಪೆ ಪ್ರದರ್ಶನ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ. ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಧೋನಿ ಕರಿಯರ್ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಧೋನಿ

 ಎಂ.ಎಸ್.ಧೋನಿ ತಮ್ಮ ಕ್ರಿಕೆಟ್ ಕರಿಯರ್ ಕುರಿತು ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರ ಜೊತೆ ಮಾತನಾಡಿದ್ದಾರೆ. ಈ ಇದೀಗ ನಾನು ಧೋನಿ ಭವಿಷ್ಯ ಕುರಿತು ಹೇಳಿಕೆ ನೀಡುವುದು ಸರಿಯಲ್ಲ. ಧೋನಿ ನನ್ನ ಬಳಿ ಯಾವುದೇ ರೀತಿ ಮಾತುಕತೆ ನಡೆಸಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!.

ಮತ್ತೊಬ್ಬ ಧೋನಿ ಸಿಗಲಾರ. ಆದರೆ ಹೊಸ ವಿಕೆಟ್ ಕೀಪರ್ ರೆಡಿ ಮಾಡೋ ಜವಾಬ್ದಾರಿ ಆಯ್ಕೆ ಸಮಿತಿಗಿದೆ ಎಂದು ಗಂಗೂಲಿ ಹೇಳಿದ್ದಾರೆ.  ನಾಯಕ ಹಾಗೂ ಆಯ್ಕೆ ಸಮಿತಿ ಜೊತೆ ಧೋನಿ ಮಾತನಾಡಿದ ಬಳಿಕವೂ ತಂಡಕ್ಕೆ ಆಯ್ಕೆಯಾಗಿಲ್ಲ ಎಂದಾದರೆ ಧೋನಿ ಕ್ರಿಕೆಟ್‌ನಿಂದ ನಿವತ್ತಿಗೆ ಸಜ್ಜಾಗಿದ್ದಾರೆ ಅನ್ನೋ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.  
 

Latest Videos
Follow Us:
Download App:
  • android
  • ios