ಐಪಿಎಲ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಆಸ್ಪತ್ರೆ ದಾಖಲಾಗಲಿದ್ದಾರೆ ಧೋನಿ, ಮೊಣಕಾಲು ಸರ್ಜರಿ!
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5ನೇ ಬಾರಿಗೆ ಚಾಂಪಿಯನ್ ಸ್ಥಾನದಲ್ಲಿ ಕೂರಿಸಿದ ನಾಯಕ ಎಂ.ಎಸ್.ಧೋನಿಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ. ಆದರೆ ಗಾಯದ ನಡುವೆ ಈ ಬಾರಿಯ ಐಪಿಎಲ್ ಟೂರ್ನಿ ಆಡಿದ್ದ ಧೋನಿ ಇದೀಗ ಆಸ್ಪತ್ರೆ ದಾಖಲಾಗಲು ವೈದ್ಯರ ಸಲಹೆ ಪಡೆದಿದ್ದಾರೆ.
ಮುಂಬೈ(ಮೇ.31): ಐಪಿಎಲ್ 2023 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಎಂಎಸ್ ಧೋನಿ ನಾಯಕತ್ವ, ತಂಡದ ಅದ್ಭುತ ಪ್ರದರ್ಶನಕ್ಕೆ ಪ್ರಶಸ್ತಿ ಒಲಿದಿದೆ. ಟ್ರೋಫಿ ಗೆಲುವಿನ ಬಳಿಕ ಧೋನಿ ವಿದಾಯ ಮಾತನ್ನು ತಳ್ಳಿಹಾಕಿದ್ದರು. ಇದು ಕೋಟ್ಯಾಂತರ ಅಭಿಮಾನಿಗಳ ಸಂತಸವನ್ನು ಡಬಲ್ ಮಾಡಿತ್ತು.ಆದರೆ ಈ ಬಾರಿಯ ಟೂರ್ನಿಯನ್ನು ಧೋನಿ ನೋವಿನಲ್ಲೇ ಆಡಿದ್ದರು. ಮೊಣಕಾಲು ಗಾಯದಿಂದ ಬಳಲಿದ್ದ ಧೋನಿ, ತಂಡಕ್ಕಾಗಿ, ಅಭಿಮಾನಿಗಳಿಗಾಗಿ ಆಡಿದ್ದರು. ಇದೀಗ ಗಾಯದಿಂದ ಚೇತರಿಸಿಕೊಳ್ಳಲು ಸರ್ಜರಿಗೆ ಮುಂದಾಗಿದ್ದಾರೆ.
ಮೊಣಕಾಲು ನೋವಿನಿಂದ ಬಳಲಿರುವ ಎಂ.ಎಸ್ ಧೋನಿ ವೈದ್ಯರ ಸಲಹೆಯಂತೆ ಮಂದಿನ ವಾರ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಇದೆ. ಮುಂಬೈನ ಕೊಕಿಲಾ ಬೆನ್ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ಮೊಣಕಾಲು ಗಾಯ ಸೇರಿದಂತೆ ಇತರ ಗಾಯಗಳಿಗೆ ಚಿಕಿತ್ಸೆ ಪಡೆಯಲು ಧೋನಿ ನಿರ್ಧರಿಸಿದ್ದಾರೆ. ಇದರಲ್ಲಿ ಮೊಣಕಾಲು ಸರ್ಜರಿಗೆ ಮುಂದಾಗುವ ಸಾಧ್ಯತೆ ಇದೆ.
ಫೈನಲ್ ಪಂದ್ಯಕ್ಕೂ ಮೊದಲೇ ಭಾವುಕರಾಗಿದ್ದ ಧೋನಿ, ಡಗೌಟ್‌ನಲ್ಲಿ ಕುಳಿತು ಸುಧಾರಿಸಿಕೊಂಡ MSD!
ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಧೋನಿ, ವಿದಾಯ ಮಾತನ್ನು ತಳ್ಳಿಹಾಕಿದ್ದರು. ಅಭಿಮಾನಿಗಳಿಗಾಗಿ ಮುಂದಿನ ಐಪಿಎಲ್ ಆಡುವುದಾಗಿ ಹೇಳಿದ್ದರು. ಆದರೆ ಫಿಟ್ನೆಸ್ ವಿಚಾರವನ್ನು ಗಮದಲ್ಲಿಟ್ಟುಕೊಳ್ಳುತ್ತೇನೆ ಎಂದಿದ್ದರು. ಇದೀಗ ಮತ್ತೆ ಫಿಟ್ ಆಗಿ ಮೈದಾನಕ್ಕಿಳಿಯಲು ಧೋನಿ ಸರ್ಜರಿಗೆ ಮುಂದಾಗಿದ್ದಾರೆ.
‘ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಆದರೆ ಎಲ್ಲೆಡೆ ಅಭಿಮಾನಿಗಳಿಂದ ಬಹಳ ಪ್ರೀತಿ ಸಿಗುತ್ತಿದೆ. ಇನ್ನೊಂದು ಆವೃತ್ತಿಯಲ್ಲಿ ಆಡಿದರೆ ಅಭಿಮಾನಿಗಳಿಗೆ ಉಡುಗೊರೆ ನೀಡಿದಂತಾಗುತ್ತದೆ. ಆದರೆ ಮುಂದಿನ ಐಪಿಎಲ್‌ನಲ್ಲಿ ಆಡಲು 9 ತಿಂಗಳು ಪರಿಶ್ರಮ ವಹಿಸಬೇಕಿದೆ’ ಎಂದರು. ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ, ಈ ವಾರದಲ್ಲೇ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
'IPL ನಿವೃತ್ತಿ ಹೇಳಲು ಸರಿಯಾದ ಸಮಯ, ಆದರೆ..?' ರಿಟೈರ್‌ಮೆಂಟ್ ಬಗ್ಗೆ ಧೋನಿ ಅಚ್ಚರಿಯ ಮಾತು..!
ಚೆನ್ನೈ ತಂಡ ಐಪಿಎಲ್ ಟ್ರೋಫಿ ಗೆದ್ದ ವರ್ಷಗಳನ್ನು ದಪ್ಪಕ್ಷರಗಳಲ್ಲಿ ಬರೆದಿದ್ದ ಕೇಕ್‌ವೊಂದನ್ನು ಧೋನಿ ಕತ್ತರಿಸಿ ತಮ್ಮ ಸಹ ಆಟಗಾರರಿಗೆ ತಿನ್ನಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ತೆರಳಿದ ಜಡೇಜಾ ಹಾಗೂ ರಹಾನೆ ಹೊರತುಪಡಿಸಿ ಇನ್ನುಳಿದ ಆಟಗಾರರು ಮಂಗಳವಾರ ಮಧ್ಯಾಹ್ನದ ವೇಳೆಗೆ ಚೆನ್ನೈ ತಲುಪಿದರು. ಅಲ್ಲಿನ ಟಿ.ನಗರದಲ್ಲಿ ಇರುವ ಟಿಟಿಡಿ ದೇವಸ್ಥಾನದಲ್ಲಿ ಟ್ರೋಫಿಗೆ ವಿಶೇಷ ಪೂಜೆ ನಡೆಸಲಾಯಿತು. ಬುಧವಾರ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಉಪಸ್ಥಿತಿಯಲ್ಲಿ ಬೃಹತ್ ಅಭಿನಂದನಾ ಕಾರ‍್ಯಕ್ರಮವನ್ನು ಸಿಎಸ್‌ಕೆ ಮಾಲಿಕರು ಹಮ್ಮಿಕೊಂಡಿದ್ದಾರೆ.