Asianet Suvarna News Asianet Suvarna News

ಎಂ ಎಸ್ ಧೋನಿ ಮೊದಲ ಉದ್ಯೋಗ ರೈಲ್ವೆ ಇಲಾಖೆ ನೇಮಕಾತಿ ಪತ್ರ ವೈರಲ್..!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಗರಿಷ್ಠ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದೆ.

MS Dhoni First Appointment Letter For Indian Railways Old Picture Goes Viral in Social Media kvn
Author
First Published Feb 27, 2024, 3:15 PM IST

ಬೆಂಗಳೂರು(ಫೆ.27): ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿಯ ಲೈಫ್‌ ಸ್ಟೋರಿ ಯಾರಿಗೆ ಗೊತ್ತಿಲ್ಲ ಹೇಳಿ. ತುಂಬಾ ಸಾಧಾರಣ ಕುಟುಂಬದ ಹಿನ್ನೆಲೆ ಹೊಂದಿದ್ದ ರಾಂಚಿ ಮೂಲದ ಧೋನಿ, ಇಂದು ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದೇ ಕಣ್ಣು ಮುಂದೆ ನಡೆದ ವಿಸ್ಮಯ. ತನಗೆ ಎದುರಾದ ಪ್ರತಿ ಅವಮಾನ, ಸವಾಲವುಗಳನ್ನು ಮೆಟ್ಟಿನಿಂತು ಇದೀಗ ಲೆಜೆಂಡರಿ ಆಟಗಾರನಾಗಿ ಧೋನಿ ಬೆಳೆದು ನಿಂತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ವರ್ಷಗಳೇ ಕಳೆದರೂ, ಕ್ಯಾಪ್ಟನ್ ಕೂಲ್ ಮೇಲಿನ ಅಭಿಮಾನ ಅವರ ಫ್ಯಾನ್ಸ್‌ಗಳಲ್ಲಿ ಕೊಂಚವು ಕಮ್ಮಿಯಾಗಿಲ್ಲ. ತಮ್ಮ ಸರಳ ನಡೆನುಡಿಯ ಮೂಲಕ ಧೋನಿ ಈಗಲೂ ಕೋಟ್ಯಾಂತರ ಅಭಿಮಾನಿಗಳ ಪಾಲಿನ ದೇವರೆನಿಸಿಕೊಂಡಿದ್ದಾರೆ. ಇಂತಹ ಧೋನಿ, ತಾವು ಓರ್ವ ವೃತ್ತಿಪರ ಆಟಗಾರನಾಗುವ ಮುನ್ನ ಭಾರತೀಯ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ರಾಂಚಿ ಟೆಸ್ಟ್ ಪಂದ್ಯದ ವೇಳೆ ಧೋನಿಯ ರೈಲ್ವೆ ಇಲಾಖೆಯ ಅಪಾಯಿಂಟ್ಮೆಂಟ್ ಲೆಟರ್ ಅನಾವರಣಗೊಂಡಿದೆ. ಅವರ ನೇಮಕಾತಿ ಪತ್ರದ ಸ್ಕ್ರೀನ್‌ಶಾಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

'ಆಡಲು ಹಸಿವಿಲ್ಲದವರನ್ನು ಆಡಿಸೋದ್ರಲ್ಲಿ ಅರ್ಥವಿಲ್ಲ': ಟೀಂ ಇಂಡಿಯಾ ಕ್ಯಾಪ್ಟನ್ ಹೀಗಂದಿದ್ದೇಕೆ?

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕ್ರಿಕೆಟಿಗ ಆಗುವ ಮುನ್ನ ಭಾರತೀಯ ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ತನ್ನ ಕನಸು ನನಸು ಮಾಡಿಕೊಳ್ಳಲು, ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಿ ಟೀಂ ಇಂಡಿಯಾ ಲೆಜೆಂಡ್ ಆಗಿ ಹೊರಹೊಮ್ಮಿದ್ದು ಕಣ್ಣ ಮುಂದೆ ನಡೆದ ಅಚ್ಚರಿ.

ಮೂರು ಮಾದರಿಯ ಐಸಿಸಿ ಟ್ರೋಫಿ ಗೆದ್ದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಧೋನಿ ಹೆಸರಿನಲ್ಲಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

IPL 2024: ಈ ಬಾರಿ ಮೊಹಾಲಿಯಾಚೆ ಹೊಸ ಸ್ಟೇಡಿಯಂನಲ್ಲಿ ತವರಿನ ಪಂದ್ಯ ಆಡಲು ಪಂಜಾಬ್ ಕಿಂಗ್ಸ್ ರೆಡಿ..!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಗರಿಷ್ಠ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೀಗ ಧೋನಿ ಮಾರ್ಚ್ 22ರಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದ್ದಾರೆ

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನ ಚೆಪಾಕ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಕಣಕ್ಕಿಳಿಯಲು ಸಜ್ಜಾಗಿದೆ. ಬಹುತೇಕ ಇದು ಧೋನಿ ಆಡಲಿರುವ ಕಟ್ಟಕಡೆಯ ಐಪಿಎಲ್ ಆಗುವ ಸಾಧ್ಯತೆ ಇದೆ ಎನ್ನುವುದು ಬಹುತೇಕ ಕ್ರೀಡಾಭಿಮಾನಿಗಳ ಲೆಕ್ಕಾಚಾರವಾಗಿದೆ.

Follow Us:
Download App:
  • android
  • ios