2008ರಿಂದಲೂ ಪಂಜಾಬ್‌ ತಂಡ ಮೊಹಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುತ್ತಿತ್ತು. ಮುಲ್ಲಾನ್ಪುರ ಕ್ರೀಡಾಂಗಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, 33 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಬಹುದಾಗಿದೆ. ಮಾ.23ರಂದು ಡೆಲ್ಲಿ ವಿರುದ್ಧ ಪಂಜಾಬ್‌ ಮೊದಲ ಪಂದ್ಯವಾಡಲಿದೆ.

ಮೊಹಾಲಿ: ಹೊಸದಾಗಿ ನಿರ್ಮಾಣಗೊಂಡಿರುವ ಮುಲ್ಲಾನ್ಪುರದ ಮಹಾರಾಜ ಯದವೀಂದ್ರ ಸಿಂಗ್‌ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ(ಐಪಿಎಲ್‌) ತನ್ನ ತವರಿನ ಪಂದ್ಯಗಳು ನಡೆಯಲಿವೆ ಎಂದು ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ತಿಳಿಸಿದೆ. 

2008ರಿಂದಲೂ ಪಂಜಾಬ್‌ ತಂಡ ಮೊಹಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುತ್ತಿತ್ತು. ಮುಲ್ಲಾನ್ಪುರ ಕ್ರೀಡಾಂಗಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, 33 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಬಹುದಾಗಿದೆ. ಮಾ.23ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್‌ ಕಿಂಗ್ಸ್ ಮೊದಲ ಪಂದ್ಯವಾಡಲಿದೆ.

Ranji Trophy: ವಿದರ್ಭ ಎದುರು ಸೆಮೀಸ್‌ಗೇರಲು ಕರ್ನಾಟಕ ದಿಟ್ಟ ಹೋರಾಟ..!

ಡಬ್ಲ್ಯುಪಿಎಲ್‌: ಯುಪಿ ವಿರುದ್ಧ ಕ್ಯಾಪಿಟಲ್ಸ್‌ಗೆ 9 ವಿಕೆಟ್‌ ಜಯ

ಬೆಂಗಳೂರು: 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಕಳೆದ ಬಾರಿ ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಡೆಲ್ಲಿ ಮೊದಲ ಗೆಲುವು ದಾಖಲಿಸಿದರೆ, ಯುಪಿ ಸತತ 2ನೇ ಪಂದ್ಯದಲ್ಲೂ ಪರಾಭವಗೊಂಡಿತು.

ಮೊದಲು ಬ್ಯಾಟ್‌ ಮಾಡಿದ ಯುಪಿ, ರಾಧಾ ಯಾದವ್‌ ಹಾಗೂ ಮರಿಯಾನೆ ಕಾಪ್‌ ಮಾರಕ ದಾಳಿಗೆ ತತ್ತರಿಸಿ 9 ವಿಕೆಟ್‌ಗೆ 119 ರನ್‌ ಕಲೆಹಾಕಿತು. ಶ್ವೇತಾ ಶೆರಾವತ್‌ 45 ರನ್‌ ಗಳಿಸಿದ್ದು ಬಿಟ್ಟರೆ ಇತರ ಬ್ಯಾಟರ್‌ಗಳು ತಂಡದ ನೆರವಿಗೆ ಬರಲಿಲ್ಲ. ರಾಧಾ 20 ರನ್‌ಗೆ 4, ಕಾಪ್‌ 4 ಓವರಲ್ಲಿ 1 ಮೇಡಿನ್‌ ಸಹಿತ 5 ರನ್‌ ನೀಡಿ 3 ವಿಕೆಟ್‌ ಕಿತ್ತರು.

Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್..!

ಸುಲಭ ಗುರಿ ಬೆನ್ನತ್ತಿದ ಡೆಲ್ಲಿ 14.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ಗೆಲುವು ಸಾಧಿಸಿತು. ನಾಯಕಿ ಮೆಗ್‌ ಲ್ಯಾನಿಂಗ್‌ 51 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಶಫಾಲಿ ವರ್ಮಾ 43 ಎಸೆತಗಳಲ್ಲಿ ಔಟಾಗದೆ 64 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ಇಂದಿನ ಪಂದ್ಯ: ಆರ್‌ಸಿಬಿ-ಗುಜರಾತ್‌, ರಾತ್ರಿ 7.30ಕ್ಕೆ

ಅಂಧರ ಟಿ20: ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ಭಾರತ

ದುಬೈ: ಸುನಿಲ್‌ ರಮೇಶ್‌ ಮತ್ತು ಅಜಯ್‌ ಕುಮಾರ್‌ ಅರ್ಧಶತಕದ ನೆರವಿಂದ ಪಾಕಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಅಂಧರ ಕ್ರಿಕೆಟ್‌ ತಂಡ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ 2-1ರಿಂದ ಸರಣಿ ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 193 ರನ್‌ ಗಳಿಸಿತು. ದುರ್ಗಾರಾವ್‌ 3 ವಿಕೆಟ್‌ ಉರುಳಿಸಿ ಮಿಂಚಿದರು. ಭಾರತ 18.4 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ರಮೇಶ್‌ 64, ಅಜಯ್‌ 66 ರನ್‌ ಗಳಿಸಿದರು.