ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಧೋನಿ ಪುತ್ರಿ ಝಿವಾ..! ವಿಡಿಯೋ ವೈರಲ್
ನಿರೀಕ್ಷೆಯಂತೆಯೇ ಆಗಸ್ಟ್ 23ರ ಸಂಜೆ 6.04 ನಿಮಿಷಕ್ಕೆ ಸುರಕ್ಷಿತವಾಗಿ ಚಂದ್ರನ ಮೇಲೆ ಇಸ್ರೋ ವಿಕ್ರಮ್ ಲ್ಯಾಂಡರ್ ಇಳಿಸುವಲ್ಲಿ ಯಶಸ್ವಿಯಾಗಿದೆ. ಇದು ಇಡೀ ದೇಶವೇ ಸಂಭ್ರಮಿಸುವಂತ ಸಾಧನೆ ಮಾಡಿದೆ. ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ 4ನೇ ದೇಶ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ.
ರಾಂಚಿ(ಆ.24): ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಬುಧವಾರ ಬೆಳಿಗ್ಗೆಯಿಂದಲೂ ಈ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದ ಜನರು ಲ್ಯಾಂಡಿಂಗ್ ಪ್ರಕ್ರಿಯೆಯ ಲೈವ್ ವೀಕ್ಷಿಸುವ ಮೂಲಕ ರೋಮಾಂಚನಗೊಂಡರು.
ಹಲವು ನಗರಗಳಲ್ಲಿ ಜನರು ರಸ್ತೆಗಳಿದು ತ್ರಿವರ್ಣ ಧ್ವಜ ಹಿಡಿದು ಸಂಭ್ರದಲ್ಲಿ ನರ್ತಿಸಿದರು. ಪಟನಾದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜನ ಸಂಭ್ರಮಿಸಿದರು. ರೈಲು ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿದ್ದ ಪ್ರಯಾಣಿಕರು ಸಹ ಇಸ್ರೋದ ಸಾಧನೆಯ ಮಾಹಿತಿ ತಿಳಿದು ಸಂತೋಷ ವ್ಯಕ್ತಪಡಿಸಿದರು. ಹಲವು ನಗರಗಳಲ್ಲಿ ಸಿಹಿ ಹಂಚುವ ಮೂಲಕ ಇಸ್ರೋದ ಸಾಧನೆಗೆ ಹೆಮ್ಮೆ ಪಡಲಾಯಿತು. ಅಲ್ಲದೇ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಸಹ ತ್ರಿವರ್ಣ ಧ್ವಜ ಹಿಡಿದು ಇಸ್ರೋಗೆ ಧನ್ಯವಾದ ಅರ್ಪಿಸಿದರು.
ನಿರೀಕ್ಷೆಯಂತೆಯೇ ಆಗಸ್ಟ್ 23ರ ಸಂಜೆ 6.04 ನಿಮಿಷಕ್ಕೆ ಸುರಕ್ಷಿತವಾಗಿ ಚಂದ್ರನ ಮೇಲೆ ಇಸ್ರೋ ವಿಕ್ರಮ್ ಲ್ಯಾಂಡರ್ ಇಳಿಸುವಲ್ಲಿ ಯಶಸ್ವಿಯಾಗಿದೆ. ಇದು ಇಡೀ ದೇಶವೇ ಸಂಭ್ರಮಿಸುವಂತ ಸಾಧನೆ ಮಾಡಿದೆ. ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ 4ನೇ ದೇಶ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ.
Ind vs Ire 3ನೇ ಟಿ20 ಪಂದ್ಯ ಮಳೆಗಾಹುತಿ! ಭಾರತಕ್ಕೆ 2-0 ಸರಣಿ ಜಯ
ಇದೀಗ ಈ ಸುಂದರ ಕ್ಷಣವನ್ನು ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ಹಾಗೂ ಅವರ ಪುತ್ರಿ ಝಿವಾ ಕೂಡಾ ಟಿವಿಯಲ್ಲಿ ನೋಡಿ ಸಂಭ್ರಮಿಸಿದ್ದಾರೆ. ಇದನ್ನು ಧೋನಿ ಪತ್ನಿ ಸಾಕ್ಷಿ ವಿಡಿಯೋ ಮಾಡಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಇನ್ನು ಝಿವಾ ಚಂದ್ರಯಾನ 3 ಯಶಸ್ಸನ್ನು ಝಿವಾ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೊಸ ಇತಿಹಾಸ:
ಜು.14ರಂದು ಶ್ರೀಹರಿಕೋಟದಿಂದ ಉಡ್ಡಯನಗೊಂದು 41 ದಿನಗಳ ಕಾಲ ಭೂಮಿ ಮತ್ತು ಚಂದ್ರನ ಕಕ್ಷೆಯಲ್ಲಿ ಸುತ್ತಿದ್ದ ರೋವರ್ ಅನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದ್ದ ವಿಕ್ರಂ ಲ್ಯಾಂಡರ್ ಬುಧವಾರ ಸಂಜೆ 5.44ಕ್ಕೆ 30 ಕಿ.ಮೀ ಎತ್ತರಪ್ರದೇಶದಿಂದ ಚಂದ್ರನತ್ತ ಹಂತಹಂತವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಅಂತಿಮವಾಗಿ 20 ನಿಮಿಷಗಳ ಆತಂಕದ ಕ್ಷಣವನ್ನು ಯಶಸ್ವಿಯಾಗಿ ಮೆಟ್ಟಿನಿಂತು 6.04ಕ್ಕೆ ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್‌್ಟಲ್ಯಾಂಡಿಂಗ್ ಮಾಡಿತು. ಇದಾದ ಬಳಿಕ ರಾತ್ರಿ 9.30ರ ವೇಳೆಗೆ ಲ್ಯಾಂಡರ್‌ನಿಂದ ರೋವರ್ ಹೊರಬಂದು ಚಂದ್ರನ ಭೂಮಿಯನ್ನು ಸ್ಪರ್ಶ ಮಾಡಿತು.
ಚಂದ್ರಯಾನ 3 ಸಕ್ಸಸ್ ಬೆನ್ನಲ್ಲೇ ಟೀಂ ಇಂಡಿಯಾದಲ್ಲೂ ಹುಮ್ಮಸ್ಸು..! ಈ ಸಲ ಕಪ್ ನಮ್ದೇ ಬಾಸೂ..!
ಎಲ್ಲಾ ದೃಶ್ಯಗಳನ್ನು ಲ್ಯಾಂಡರ್‌ನಲ್ಲಿದ್ದ ಕ್ಯಾಮೆರಾಗಳು ಸೆರೆಹಿಡಿದು ಭೂಮಿಗೆ ರವಾನಿಸಿದವು. ಬಳಿಕ ರೋವರ್ ಕೂಡ ಲ್ಯಾಂಡರ್‌ನ ಫೋಟೋ ಹಿಡಿದು ಭೂಮಿಗೆ ರವಾನಿಸುವ ಮೂಲಕ ಇಸ್ರೋ ಬಾಹ್ಯಾಕಾಶದಲ್ಲಿ ಇತಿಹಾಸ ಸೃಷ್ಟಿಸಿತು.