ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಬೇಕಿದ್ದರೂ ನಿರಂತರ ಮಳೆಯಿಂದಾಗಿ ಟಾಸ್‌ ಕೂಡಾ ಸಾಧ್ಯವಾಗಲಿಲ್ಲ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಮಳೆ ಸುರಿದ ಕಾರಣ ಅಂಪೈರ್‌ಗಳು ರಾತ್ರಿ 10.30ರ ವೇಳೆಗೆ ಪಂದ್ಯವನ್ನು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.

ಡಬ್ಲಿನ್‌(ಆ.24): ಭಾರತ ಹಾಗೂ ಐರ್ಲೆಂಡ್‌ ನಡುವೆ ಬುಧವಾರ ನಡೆಯಬೇಕಿದ್ದ 3ನೇ ಹಾಗೂ ಕೊನೆಯ ಟಿ20 ಪಂದ್ಯ ಭಾರೀ ಮಳೆಯಿಂದಾಗಿ ರದ್ದುಗೊಂಡಿತು. ಹೀಗಾಗಿ ಪ್ರವಾಸಿ ಭಾರತ ಸರಣಿಯನ್ನು 2-0 ಅಂತರದಲ್ಲಿ ಜಯಿ​ಸಿತು.

ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಬೇಕಿದ್ದರೂ ನಿರಂತರ ಮಳೆಯಿಂದಾಗಿ ಟಾಸ್‌ ಕೂಡಾ ಸಾಧ್ಯವಾಗಲಿಲ್ಲ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಮಳೆ ಸುರಿದ ಕಾರಣ ಅಂಪೈರ್‌ಗಳು ರಾತ್ರಿ 10.30ರ ವೇಳೆಗೆ ಪಂದ್ಯವನ್ನು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು. ಸರಣಿಯ ಆರಂಭಿಕ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಆದರೆ ಜಸ್‌ಪ್ರೀತ್‌ ಬುಮ್ರಾ ನಾಯಕತ್ವದ ಭಾರತ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 2 ರನ್‌ಗಳಿಂದ ಗೆಲುವು ಸಾಧಿಸಿತ್ತು. 2ನೇ ಪಂದ್ಯದಲ್ಲಿ ಭಾರತ 33 ರನ್‌ಗಳ ಜಯಗಳಿಸಿ ಸರಣಿ ತನ್ನದಾಗಿಸಿಕೊಂಡಿತ್ತು.

ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್‌ಗಳ ಫಾರ್ಮ್ ಹೇಗಿದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಅಂಕಿ-ಅಂಶ

ಐರ್ಲೆಂಡ್ ಎದುರಿನ ಮೊದಲೆರಡು ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಹಾಗೂ ರಿಂಕು ಸಿಂಗ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಈ ಸರಣಿ ನಾಯಕ ಜಸ್ಪ್ರೀತ್ ಬುಮ್ರಾ ಹಾಗೂ ಪ್ರಸಿದ್ಧ್ ಕೃಷ್ಣ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಗುಲ್ಬರ್ಗ, ಮೈಸೂರಿಗೆ ಜಯ

ಬೆಂಗಳೂರು: ಮಹಾರಾಜ ಟ್ರೋಫಿ ಟಿ20ಯಲ್ಲಿ ಬುಧವಾರ ಮಂಗಳೂರು ವಿರುದ್ಧ ಮೈಸೂರು 7 ವಿಕೆಟ್‌ ಜಯಗಳಿಸಿತು. ಮೈಸೂರಿಗಿದು 5ನೇ ಗೆಲುವಾದರೆ, ಮಂಗಳೂರು 4ನೇ ಸೋಲು ಕಂಡಿತು. ಮತ್ತೊಂದು ಪಂದ್ಯದಲ್ಲಿ ಹುಬ್ಬಳ್ಳಿ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್‌ 7 ವಿಕೆಟ್‌ ಗೆಲುವು ಸಾಧಿಸಿ, 4ನೇ ಜಯ ಸಂಪಾದಿಸಿತು. ಹುಬ್ಬಳ್ಳಿಗಿದು 2ನೇ ಸೋಲು.

'ರನೌಟ್‌ ಆಗಿಲ್ಲ..ಇನ್ನೂ ಬದುಕಿದ್ದೇನೆ..' ತನ್ನ ಸಾವಿನ ಸುದ್ದಿಯನ್ನು ತಾನೇ ಓದಿ ರಿಪ್ಲೈ ಮಾಡಿದ ಹೀಥ್ ಸ್ಟ್ರೀಕ್‌!

ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಸ್ಟ್ರೀಕ್‌ ನಿಧನ ವದಂತಿ!

ಹರಾರೆ: ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೀಥ್‌ ಸ್ಟ್ರೀಕ್‌ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಬುಧವಾರ ಭಾರೀ ವದಂತಿ ಹರಡಿದ್ದು, ಬಳಿಕ ಸಾವಿನ ಸುದ್ದಿಯನ್ನು ಸ್ವತಃ ಸ್ಟ್ರೀಕ್‌ ಅಲ್ಲಗಳೆದಿದ್ದಾರೆ. ಸ್ಟ್ರೀಕ್‌ ನಿಧನದ ಬಗ್ಗೆ ಅವರ ಮಾಜಿ ಸಹ ಆಟಗಾರ ಹೆನ್ರಿ ಒಲಾಂಗ ತಿಳಿಸಿದ್ದರು. ಬಳಿಕ ಮತ್ತೊಂದು ಟ್ವೀಟ್‌ನಲ್ಲಿ ಸ್ಟ್ರೀಕ್‌ ಬದುಕಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ನಿಧನ ಸುದ್ದಿ ಹಬ್ಬಿಸಿದವರ ವಿರುದ್ಧ ಸ್ಟ್ರೀಕ್‌ ಬೇಸರ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ.

ಹೀಥ್ ಸ್ಟ್ರೀಕ್‌ ಅವರ ಬೌಲಿಂಗ್ ಕೌಶಲ ಜಿಂಬಾಬ್ವೆ ತಂಡದ ಪಾಲಿಗೆ ಒಂದು ರೀತಿ ಆಸ್ತಿಯಾಗಿತ್ತು. ಬೌಲಿಂಗ್‌ನಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡುತ್ತಿದ್ದ ಹೀಥ್ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‌ನಲ್ಲಿ 1990 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 2943 ರನ್ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ದ ಹರಾರೆಯಲ್ಲಿ ಅಜೇಯ 127 ರನ್ ಬಾರಿಸಿದ್ದು, ಹೀಥ್ ಸ್ಟ್ರೀಕ್ ಬಾರಿಸಿದ ಏಕೈಕ ಟೆಸ್ಟ್ ಶತಕ ಎನಿಸಿತ್ತು.