ರನ್ನಿಂಗ್ ಬಿಟ್ವೀನ್ ವಿಕೆಟ್‌ನಲ್ಲಿ ಧೋನಿ ಬೆಸ್ಟ್, ಪೂಜಾರ ಕಳಪೆ, ಕ್ರಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!
ಬ್ಯಾಟ್ಸ್‌ಮನ್‌ಗೆ ರನ್ನಿಂಗ್ ಅತ್ಯಂತ ಮುಖ್ಯ. ಇದಕ್ಕೆ ಫಿಟ್ನೆಸ್ ಬೇಕೆ ಬೇಕು. ಆದರೆ ಕೆಲವರು ಫಿಟ್ ಇದ್ದರೂ ರನ್ನಿಂಗ್ ಬಿಟ್ವೀನ್ ವಿಕೆಟ್ ಅಷ್ಟಕಷ್ಟೆ. ಟೀಂ ಇಂಡಿಯಾದಲ್ಲಿನ ಅತ್ಯುತ್ತಮ ಹಾಗೂ ಕಳಪೆ ರನ್ನಿಂಗ್ ಬಿಟ್ವೀನ್ ವಿಕೆಟ್ ಯಾರು ಅನ್ನೋ ಕುತೂಹಲಕ್ಕೆ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ.
ಮುಂಬೈ(ಮಾ.21): IPL 2023 ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಫ್ರಾಂಚೈಸಿಗಳು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಮಾರ್ಚ್ 31 ರಂದು ಅಹಮ್ಮದಾಬಾದ್‌ನಲ್ಲಿ ಉದ್ಘಾಟನಾ ಪಂದ್ಯದ ಮೂಲಕ ಟೂರ್ನಿ ಆರಂಭಗೊಳ್ಳುತ್ತಿದೆ. ರೋಚಕ ಹೋರಾಟಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಇದರ ನಡುವೆ ಆರ್‌ಸಿಬಿ ಟೀಮ್‌ಮೇಟ್ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿಯ ಸಂದರ್ಶನ ಮಾಡಿದ್ದಾರೆ. ಕೊಹ್ಲಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕಂಡ ಬೆಸ್ಟ್ ರನ್ನಿಂಗ್ ಬಿಟ್ವೀನ್ ವಿಕೆಟ್ ಎಂ.ಎಸ್.ಧೋನಿ ಎಂದಿದ್ದಾರೆ. ಇನ್ನು ಅತ್ಯತ ಕಳಪೆ ರನ್ನರ್ ಎಂದರೆ ಅದು ಚೇತೇಶ್ವರ ಪೂಜಾರ ಎಂದು ಕೊಹ್ಲಿ ಹಲವು ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ವಾಹನಿಗೆ ನಡೆಸಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಬಳಿ ಟೀಂ ಇಂಡಿಯಾ ಹಲವು ಕುತೂಹಲಕರ ವಿಚಾರಗಳನ್ನು ಕೇಳಿದ್ದಾರೆ. ಇದರಲ್ಲಿ ವಿಕೆಟ್ ಮಧ್ಯೆ ಓಟದಲ್ಲಿ ಯಾರು ಬೆಸ್ಟ್ ಹಾಗೂ ಯಾರು ಕಳಪೆ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಕೊಹ್ಲಿ, ಬೆಸ್ಟ್ ಎಂ.ಎಸ್.ಧೋನಿ. ಇದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ಎಂ.ಎಸ್.ಧೋನಿ ವಿಕೆಟ್ ನಡುವಿನ ಓಟವನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಬ್ಯಾಟ್ ಬೀಸಿ ಬಳಿಕ ಧೋನಿ ಮಿಂಚಿನ ವೇಗದಲ್ಲಿ ಓಡುತ್ತಾರೆ ಎಂದಿದ್ದಾರೆ.
IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಆಡುವ ಹನ್ನೊಂದರ ಬಳಗ ಆಯ್ಕೆ ಮಾಡಿದ ಆರ್ ಅಶ್ವಿನ್..!
ಕಳಪೆ ಪ್ರಶ್ನೆಗೆ ಇದು ಚೇತೇಶ್ವರ ಪೂಜಾರಗೆ ಸಲ್ಲಲಿದೆ. ಕಾರಣ ಚೇತೇಶ್ವರ ಪೂಜಾರ ಓಟ ನಿರೀಕ್ಷಿತ ಮಟ್ಟ ಮೀರಿಲ್ಲ. 2018ರಲ್ಲಿ ಸೆಂಚುರಿಯನ್ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್‌ನಲ್ಲಿ ಪೂಜಾರ ರನೌಟ್ ಆಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ ರನೌಟ್ ಆಗಿದ್ದರು. ಬಳಿಕ ಬೇಸರದಲ್ಲಿದ್ದರು. ಹೀಗಾಗಿ ನಾನು ಪೂಜಾರ ಬಳಿ ತೆರಳಿ, ರನೌಟ್ ಕ್ರಿಕೆಟ್‌ನಲ್ಲಿ ಸಾಮಾನ್ಯ. ಹಲವು ದಿಗ್ಗಜ ಕ್ರಿಕೆಟಿಗರು ರನೌಟ್‌ಗೆ ಬಲಿಯಾಗಿದ್ದಾರೆ ಎಂದಿದ್ದೆ. ಬಳಿಕ ಎರಡನೇ ಇನ್ನಿಂಗ್ಸ್ ವೇಳೆಯೂ ಪೂಜಾರ ರನೌಟ್‌ಗೆ ಬಲಿಯಾಗಿದ್ದರು.
ವಿಶೇಷ ಅಂದರೆ ಪೂಜಾರ 3ನೇ ರನ್‌ಗಾಗಿ ಪಾರ್ಥಿವ್ ಪಟೇಲ್ ಕರೆದಿದ್ದಾರೆ. ಬಳಿಕ ಪೂಜಾರ ರನೌಟ್ ಆದರು ಎಂದು ಪೂಜಾರ ರನ್ನಿಂಗ್ ಬಿಟ್ವೀನ್ ವಿಕೆಟ್ ಕತೆಯನ್ನು ವಿವರಿಸಿದ್ದಾರೆ. ಹಲವರು ವಿರಾಟ್ ಕೊಹ್ಲಿ ಉತ್ತನ ರನ್ನಿಂಗ್ ಬಿಟ್ವೀನ್ ವಿಕೆಟ್ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಎಂ.ಎಸ್.ಧೋನಿ ಈ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ನಾನು ಹಾಗೂ ಧೋನಿ ಬ್ಯಾಟಿಂಗ್ ಮಾಡುವಾಗಲು ನಮ್ಮ ನಡುವೆ ಉತ್ತಮ ಅಂಡರ್‌ಸ್ಟಾಡಿಂಗ್ ಇರುತ್ತದೆ. ಹೀಗಾಗಿ ವಿಕೆಟ್ ಮಧ್ಯೆ ಓಟದಲ್ಲೂ ನಾವು ಯಶಸ್ಸು ಸಾಧಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್: ಚಾಂಪಿಯನ್ ಏಷ್ಯಾ ಲಯನ್ಸ್ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು?
ಮಾರ್ಚ್ 31 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ 4 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಇದೀಗ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಜೊತೆಗೆ ಅಭಿಮಾನಿಗಳಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.