ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ದೀಪಾವಳಿಗೆ ಸಿದ್ದತೆ ನಡೆಸುತ್ತಿದ್ದಾರೆ. ಮಗಳು ಝಿವಾ ಜತೆ ಧೋನಿ ಹೊಸ ಕಾರ್ ತೊಳೆದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ರಾಂಚಿ(ಅ.25): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ದೀಪಾ​ವಳಿ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆ​ಸಿ​ದ್ದಾರೆ. ತಮ್ಮ ಗ್ಯಾರೆಜ್‌ನಲ್ಲಿ​ರುವ ಕಾರ್‌ಗಳನ್ನು ತೊಳೆದು ಕಂಗೊ​ಳಿಸು​ವಂತೆ ಮಾಡು​ತ್ತಿ​ರುವ ಧೋನಿಗೆ ಮಗಳು ಝೀವಾ ಸಹಾಯ ಮಾಡು​ತ್ತಿ​ದ್ದಾಳೆ.

ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: 3 ಕನ್ನಡಿಗರಿಗೆ ಸ್ಥಾನ

ಈ ವಿಡಿಯೋವನ್ನು ಧೋನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ‘ಇಷ್ಟು ದೊಡ್ಡ ವಾಹನ ತೊಳೆಯುವಾಗ ಚಿಕ್ಕ ಸಹಾ​ಯ​ವೂ ದೊಡ್ಡದೆನಿ​ಸು​ತ್ತದೆ’ ಎಂದು ಶೀರ್ಷಿಕೆ ಬರೆ​ದಿ​ದ್ದಾರೆ.

View post on Instagram

ಧೋನಿ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ ಕೇವಲ ಒಂದು ಗಂಟೆಯೊಳಗೆ 7 ಲಕ್ಷ ಬಾರಿ ವೀಕ್ಷಣೆಗೊಳಗಾಗಿದೆ. ಈ ವಿಡಿಯೋಗೆ ಸಾವಿರಾರು ಜನ ಕಾಮೆಂಟ್ ಮಾಡಿದ್ದು, ನಾನು ಬಂದು ನಿಮಗೆ ಸಹಾಯ ಮಾಡಲೇ ಎಂದು ಕೇಳಿಕೊಂಡಿದ್ದಾರೆ.

ಧೋನಿ ನಿವೃತ್ತಿಯ ಬಗೆಗೆ ಸ್ಫೋಟಕ ಹೇಳಿಕೆ ನೀಡಿದ ದಾದಾ..!

2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ದೂರವೇ ಉಳಿದಿದ್ದಾರೆ. ಕೆಲಕಾಲ ಕಾಶ್ಮೀರ ಗಡಿಯಲ್ಲಿ ಸೈನಿಕನಾಗಿ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದರು. ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಿಂದ ದೂರ ಉಳಿದಿದ್ದ ಧೋನಿ, ಇದೀಗ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ ಮುಂದಿನ ಭವಿಷ್ಯ ಏನು ಎನ್ನುವ ಅಭಿಮಾನಿಗಳ ಪ್ರಶ್ನೆ ಈಗಲೂ ಉತ್ತರ ಸಿಕ್ಕಿಲ್ಲ.

ಒಟ್ಟಿನಲ್ಲಿ ಸಾವಿರಾರು ಕೋಟಿಯ ಒಡೆಯ ಸರಳವಾಗಿ ತನ್ನ ಮಗಳ ಜತೆ ಕಾರ್ ತೊಳೆಯುತ್ತಿರುವ ದೃಶ್ಯಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.