Asianet Suvarna News Asianet Suvarna News

ICC ODI Rankings: ಏಷ್ಯಾಕಪ್‌ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್‌ ಮತ್ತೆ ನಂ.1 ಬೌಲರ್‌!

ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಶುಭ್‌ಮನ್‌ ಗಿಲ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಕ್ರಮವಾಗಿ 2 ಮತ್ತು 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್‌ ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್‌ ಅಗ್ರ-20ರಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, 6ನೇ ಸ್ಥಾನದಲ್ಲಿದ್ದಾರೆ.

Mohammed Siraj reclaims No 1 spot in ODI bowling rankings kvn
Author
First Published Sep 22, 2023, 11:06 AM IST

ದುಬೈ(ಸೆ.22): ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಏಷ್ಯಾಕಪ್‌ ಫೈನಲ್‌ನಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ್ದ ಭಾರತದ ಯುವ ವೇಗಿ ಮೊಹಮದ್‌ ಸಿರಾಜ್‌, ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ರ್‍ಯಾಕಿಂಗ್‌ ಪಟ್ಟಿಯಲ್ಲಿ ಸಿರಾಜ್‌ 8 ಸ್ಥಾನ ಪ್ರಗತಿ ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

ಆಸ್ಟ್ರೇಲಿಯಾದ ಜೋಶ್‌ ಹೇಜಲ್‌ವುಡ್‌ರನ್ನು ಹಿಂದಿಕ್ಕಿರುವ ಹೈದರಾಬಾದ್‌ ಮೂಲದ ವೇಗಿ ಸದ್ಯ 694 ರೇಟಿಂಗ್‌ ಅಂಕ ಹೊಂದಿದ್ದಾರೆ. 678 ರೇಟಿಂಗ್‌ ಅಂಕ ಹೊಂದಿರುವ ಹೇಜಲ್‌ವುಡ್‌ಗಿಂತ ಸಿರಾಜ್‌ 16 ಅಂಕ ಮುಂದಿದ್ದಾರೆ. ಶುಕ್ರವಾರದಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಸಿರಾಜ್‌ ಹಾಗೂ ಹೇಜಲ್‌ವುಡ್‌ ನಡುವೆ ಅಗ್ರಸ್ಥಾನಕ್ಕೆ ಪೈಪೋಟಿ ಏರ್ಪಡಲಿದೆ.

ಈ ಮೊದಲು ಜನವರಿಯಲ್ಲಿ ಮೊದಲ ಬಾರಿ ಸಿರಾಜ್‌ ನಂ.1 ಸ್ಥಾನ ಪಡೆದಿದ್ದರು. ಬಳಿಕ ಮಾರ್ಚ್‌ನಲ್ಲಿ ಸಿರಾಜ್‌ರನ್ನು ಹೇಜಲ್‌ವುಡ್‌ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಇದೇ ವೇಳೆ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, 3 ಸ್ಥಾನ ಮೇಲಕ್ಕೇರಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಜಸ್‌ಪ್ರೀತ್‌ ಬುಮ್ರಾ 2 ಸ್ಥಾನ ಜಿಗಿದು 27ನೇ ಹಾಗೂ ಹಾರ್ದಿಕ್‌ ಪಾಂಡ್ಯ 8 ಸ್ಥಾನ ಮೇಲೇರಿ 50ನೇ ಸ್ಥಾನ ಪಡೆದಿದ್ದಾರೆ.

ಏಕದಿನ ವಿಶ್ವಕಪ್‌ಗೆ ಭಾರತ ಕೊನೆ ಸುತ್ತಿನ ಅಭ್ಯಾಸ..! ಟೀಂ ಇಂಡಿಯಾಗಿಂದು ಆಸೀಸ್ ಸವಾಲು

2ನೇ ಸ್ಥಾನದಲ್ಲಿ ಗಿಲ್‌

ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಶುಭ್‌ಮನ್‌ ಗಿಲ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಕ್ರಮವಾಗಿ 2 ಮತ್ತು 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್‌ ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್‌ ಅಗ್ರ-20ರಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, 6ನೇ ಸ್ಥಾನದಲ್ಲಿದ್ದಾರೆ.

2024ರ ಟಿ20 ವಿಶ್ವಕಪ್‌: ಅಮೆರಿಕದ 3 ನಗರ ಆತಿಥ್ಯ

ದುಬೈ: 2024ರ ಟಿ20 ವಿಶ್ವಕಪ್‌ಗೆ ಅಮೆರಿಕದ 3 ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬುಧವಾರ ಅಂತಿಮಗೊಳಿಸಿದೆ. ಬಹುನಿರೀಕ್ಷಿತ ಟೂರ್ನಿಗೆ ಅಮೆರಿಕದ ಜೊತೆ ವೆಸ್ಟ್‌ಇಂಡೀಸ್‌ ಕೂಡಾ ಆತಿಥ್ಯ ವಹಿಸಲಿದ್ದು, ಸದ್ಯ ಅಮೆರಿಕದ 3 ಕ್ರೀಡಾಂಗಣಗಳ ಪಟ್ಟಿ ಪ್ರಕಟಿಸಿದೆ.

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಜೆರ್ಸಿ ಅನಾವರಣ; ನೂತನ ಜೆರ್ಸಿಯಲ್ಲಿ 2 ಮಹತ್ವದ ಬದಲಾವಣೆ ಮಾಡಿದ Adidas

ಇದೇ ಮೊದಲ ಬಾರಿ ಅಮೆರಿಕದಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತಿದ್ದು, ನ್ಯೂಯಾರ್ಕ್‌, ಡಲ್ಲಾಸ್‌ ಹಾಗೂ ಫ್ಲೋರಿಡಾದಲ್ಲಿ ಪಂದ್ಯಗಳನ್ನು ನಡೆಸಲಾಗುವುದು ಎಂದು ಐಸಿಸಿ ಮಾಹಿತಿ ನೀಡಿದೆ. ಡಲ್ಲಾಸ್‌ ಹಾಗೂ ಫ್ಲೋರಿಡಾದಲ್ಲಿರುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಐಸಿಸಿ ನಿರ್ಧರಿಸಿದೆ. ಇದೇ ವೇಳೆ ನ್ಯೂಯಾರ್ಕ್ ನಗರದ ಪೂರ್ವಕ್ಕೆ ಸುಮಾರು 30 ಮೈಲಿ ದೂರದಲ್ಲಿ 34,000 ಆಸನ ಸಾಮರ್ಥ್ಯವಿರುವ ಕ್ರೀಡಾಂಗಣವನ್ನೂ ವಿಶ್ವಕಪ್‌ಗೆ ಸಜ್ಜುಗೊಳಿಸಲಾಗುತ್ತಿದ್ದು, ಇದೇ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ, ವಾಷಿಂಗ್ಟನ್‌ನಲ್ಲಿರುವ ಕ್ರೀಡಾಂಗಣವನ್ನು ಅಭ್ಯಾಸ ಪಂದ್ಯಗಳಿಗಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದೆ. 2024ರ ಜೂನ್‌ 4ರಿಂದ 30ರ ವರೆಗೂ ವಿಶ್ವಕಪ್‌ ನಡೆಯಲಿದೆ.

ಬಾಂಗ್ಲಾ-ಕಿವೀಸ್‌ ಮೊದಲ ಏಕದಿನ ಮಳೆಗೆ ಬಲಿ

ಮೀರ್‌ಪುರ್‌: ವಿಶ್ವಕಪ್‌ ಸಿದ್ಧತೆಗಾಗಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ತಂಡಗಳು 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು, ಗುರುವಾರ ಮೊದಲ ಪಂದ್ಯ ಮಳೆಗೆ ಬಲಿಯಾಯಿತು. ಟಾಸ್ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ನ್ಯೂಜಿಲೆಂಡ್‌, 33.4 ಓವರಲ್ಲಿ 136 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದಾಗ ಆರಂಭಗೊಂಡ ಮಳೆ, ಆಟ ಮುಂದುವರಿಯಲು ಅವಕಾಶ ನೀಡಲಿಲ್ಲ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದರೂ ಕೇನ್‌ ವಿಲಿಯಮ್ಸನ್‌ ಈ ಸರಣಿಯಲ್ಲಿ ಆಡುತ್ತಿಲ್ಲ. ಗಾಯಾಳು ಟಿಮ್‌ ಸೌಥಿ ಸಹ ಅಲಭ್ಯರಾಗಿದ್ದಾರೆ. ಹೀಗಾಗಿ ವೇಗಿ ಲಾಕಿ ಫರ್ಗ್ಯೂಸನ್‌ ತಂಡ ಮುನ್ನಡೆಸುತ್ತಿದ್ದಾರೆ.

ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!

ಕಿವೀಸ್‌ ವೇಗಿ ಸೌಥಿಗೆ ಕೈಬೆರಳಿನ ಶಸ್ತ್ರಚಿಕಿತ್ಸೆ

ಆಕ್ಲಂಡ್‌: ಕೈ ಬೆರಳಿನ ಗಾಯಕ್ಕೆ ತುತ್ತಾಗಿರುವ ನ್ಯೂಜಿಲೆಂಡ್‌ನ ಹಿರಿಯ ವೇಗಿ ಟಿಮ್‌ ಸೌಥಿ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್‌ ಆರಂಭಿಕ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗುವ ಸಾಧ್ಯತೆ ಇದೆ. 34 ವರ್ಷದ ಸೌಥಿ ಕಳೆದ ವಾರ ಇಂಗ್ಲೆಂಡ್‌ ವಿರುದ್ಧದ 4ನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು.

Follow Us:
Download App:
  • android
  • ios