ಫಿಟ್‌ನೆಸ್ ಸಮಸ್ಯೆಯಿಂದಾಗಿ ವೇಗಿ ಮೊಹಮ್ಮದ್ ಶಮಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. 64 ಟೆಸ್ಟ್‌ಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. ಹಲವು ಯುವ ಬೌಲರ್‌ಗಳು ತಂಡದ ಆಯ್ಕೆ ರೇಸ್‌ನಲ್ಲಿರುವುದರಿಂದ ಶಮಿ ಇನ್ನು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಮುಂಬೈ: ಫಿಟ್‌ನೆಸ್‌ ಸಮಸ್ಯೆಯಿಂದಾಗಿ ವೇಗಿ ಮೊಹಮ್ಮದ್ ಶಮಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇದರೊಂದಿಗೆ 64 ಟೆಸ್ಟ್‌ನಲ್ಲಿ 229 ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿಗೆ ಭಾರತ ತಂಡದ ಬಾಗಿಲು ಬಂದ್ ಆಯಿತೇ ಎಂಬ ಪ್ರಶ್ನೆಗಳು ಉದ್ಭವಿಸತೊಡಗಿವೆ. ಶಮಿಗೆ ಮುಂದಿನ ಸೆಪ್ಟೆಂಬರ್‌ಗೆ 35 ವರ್ಷ ಆಗಲಿದೆ.

2023ರ ಏಕದಿನ ವಿಶ್ವಕಪ್ ಬಳಿಕ ಗಾಯದಿಂದಾಗಿ ಒಂದೂವರೆ ವರ್ಷ ತಂಡದಿಂದ ಹೊರಗುಳಿದಿದ್ದ ಶಮಿ, ಸದ್ಯ ಐಪಿಎಲ್ ಆಡುತ್ತಿದ್ದರೂ ಐಪಿಎಲ್ ಆಡುತ್ತಿದ್ದರೂ ಮೊದಲಿನ ಮೊನಚು ಕಳೆದುಕೊಂಡಿದ್ದಾರೆ. ಅವರಿಗೆ ಪ್ರತಿದಿನ 15ರಿಂದ 20 ಓವರ್ ಎಸೆಯುವುದು ಹಾಗೂ 90 ಓವರ್ ಫೀಲ್ಡ್‌ನ

ಲ್ಲಿರುವುದು ಸಾಧ್ಯವಿಲ್ಲ ಎಂಬುದು ಬಿಸಿಸಿಐ ವೈದ್ಯಕೀಯ ತಂಡದ ವರದಿ, ಕೆಲ ತಿಂಗಳ ಬಳಿಕ ಸಂಪೂರ್ಣ ಫಿಟ್ ಆದರೂ, ಮೊದಲಿನ ಲಯ

ಕಂಡುಕೊಳ್ಳಲಿದ್ದಾರೆಯೇ ಎಂಬ ಅನುಮಾನವಿದೆ. ಅಲ್ಲದೆ, ಹಲವು ಯುವ ಬೌಲರ್‌ಗಳು ತಂಡದ ಆಯ್ಕೆ ರೇಸ್‌ನಲ್ಲಿರುವುದರಿಂದ ಶಮಿ ಇನ್ನು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.

ಏಪ್ರಿಲ್ ಆರಂಭದಲ್ಲೇ ಟೆಸ್ಟ್ ನಿವೃತ್ತಿ ಕುರಿತು ಬಿಸಿಸಿಐಗೆ ತಿಳಿಸಿದ್ದ ಕೊಹ್ಲಿ!

ಮುಂಬೈ: ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಈ ಬಗ್ಗೆ ಏಪ್ರಿಲ್ ಆರಂಭದಲ್ಲೇ ಬಿಸಿಸಿಐಗೆ ಮಾಹಿತಿ ನೀಡಿದ್ದರು. ಇದನ್ನು ಸ್ವತಃ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 'ಕೊಹ್ಲಿ ಏಪ್ರಿಲ್ ಆರಂಭದಲ್ಲೇ ಬಿಸಿಸಿಐ, ಆಯ್ಕೆ ಸಮಿತಿಯನ್ನು ಸಂಪರ್ಕಿಸಿದ್ದರು. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕು ಕೊನೆಗೊಂಡಿದ್ದಾಗಿ ಅವರು ಭಾವಿಸಿದ್ದರು. ತನಗೆ ಸಾಧ್ಯವಿರುವಷ್ಟು ಅವರು ಭಾರತ ತಂಡಕ್ಕೆ ಕೊಡುಗೆ ನೀಡಿದ್ದಾರೆ' ಎಂದಿದ್ದಾರೆ. ಕೊಹ್ಲಿ ರೋಹಿತ್‌ರಿಂದ ತೆರವಾದ ಸ್ಥಾನ ತುಂಬುವುದು ಸುಲಭವಲ್ಲ, ಆದರೆ ಇದು ಇತರರಿಗೆ ಅವಕಾಶ ಮಾಡಿಕೊಡಲಿದೆ ಎಂದು ಅಗರ್ಕರ್ ಹೇಳಿದ್ದಾರೆ.