ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಬಲಿಷ್ಠ ತಂಡವನ್ನು ಕಟ್ಟಿದ ಮುಂಬೈ ಇಂಡಿಯನ್ಸ್ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೆಳೆದುಕೊಂಡ ಮುಂಬೈ ಫ್ರಾಂಚೈಸಿಮುಂಬೈ ಬಲ ತುಂಬಲಿರುವ ಪೂಜಾ ವಸ್ತ್ರಾಕರ್, ನಥಾಲಿ ಶೀವರ್

ಬೆಂಗಳೂರು(ಫೆ.13): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಸಾಕಷ್ಟು ಸಮತೋಲಿತ ತಂಡವನ್ನು ಕಟ್ಟುವಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು, ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ನಥಾಲಿ ಶೀವರ್, ಪೂಜಾ ವಸ್ತ್ರಾಕರ್, ಯಾಶಿಕಾ ಭಾಟಿಯಾ ಅವರಂತಹ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮೊದಲಿಗೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು 1.80 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು ಇದಾದ ಬಳಿಕ ಇಂಗ್ಲೆಂಡ್ ತಂಡದ ತಾರಾ ಆಲ್ರೌಂಡರ್ ಹಾಗೂ ಉಪನಾಯಕಿ ನಥಾಲಿ ಶೀವರ್ ಅವರನ್ನು 3.20 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಶೀವರ್ ಖರೀದಿಸಲು ಯುಪಿ ವಾರಿಯರ್ಸ್ ಪೈಪೋಟಿ ನೀಡಿತಾದರೂ ಕೊನೆಗೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಯಿತು.

ಇನ್ನು ನ್ಯೂಜಿಲೆಂಡ್ ಆಲ್ರೌಂಡರ್‌ ಅಮೆಲಿಯಾ ಕೆರ್ರ್ ಅವರನ್ನು 1 ಕೋಟಿ ರುಪಾಯಿ ನೀಡಿ ಮುಂಬೈ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಟೀಂ ಇಂಡಿಯಾ ತಾರಾ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಅವರನ್ನು 1.90 ಕೋಟಿ ರುಪಾಯಿ ನೀಡಿ ಸೆಳೆದುಕೊಳ್ಳುವಲ್ಲಿ ಮುಂಬೈ ಫ್ರಾಂಚೈಸಿಯು ಯಶಸ್ವಿಯಾಯಿತು. ಭಾರತ ತಂಡದ ವಿಕೆಟ್‌ ಕೀಪರ್ ಬ್ಯಾಟರ್ ಯಾಶ್ತಿಕಾ ಭಾಟಿಯಾ ಅವರಿಗೆ 1.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಯಶಸ್ವಿಯಾಯಿತು.

WPL Auction: ಸ್ಮೃತಿ ಮಂಧನಾ, ರಿಚಾ ಘೋಷ್ ಸೇರಿದಂತೆ ಬಲಿಷ್ಠ ಮಹಿಳಾ ತಂಡವನ್ನು ಕಟ್ಟಿದ RCB..!

ಆಸ್ಟ್ರೇಲಿಯಾದ ಆಲ್ರೌಂಡರ್ ಹೀಥರ್ ಗ್ರೇಹಂ ಅವರಿಗೆ 30 ಲಕ್ಷ ರುಪಾಯಿ ನೀಡಿ ಮುಂಬೈ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು ಇಂಗ್ಲೆಂಡ್ ಆಲ್ರೌಂಡರ್‌ ಇಸಾಬೆಲ್ಲೆ ವಾಂಗ್‌ ಅವರನ್ನು 30 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ಭಾರತದ ಆಲ್ರೌಂಡರ್ ಅಮನ್‌ಜೋತ್ ಕೌರ್ ಅವರನ್ನು 50 ಲಕ್ಷ ರುಪಾಯಿ ನೀಡಿ ಖರೀದಿಸುವಲ್ಲಿ ಮುಂಬೈ ಯಶಸ್ವಿಯಾಯಿತು. ಇನ್ನು ಬೆಂಗಾಲ್ ಮೂಲದ ಧಾರಾ ಗುಜ್ಜರ್ ಅವರನ್ನು ಮೂಲ ಬೆಲೆ 10 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು ಎಡಗೈ ಸ್ಪಿನ್ನರ್ ಸಾಯಿಕಾ ಇಶಾಕ್‌ ಅವರನ್ನು ಮೂಲ ಬೆಲೆ 10 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 

ಇನ್ನುಳಿದಂತೆ ವೆಸ್ಟ್ ಇಂಡೀಸ್ ತಂಡದ ನಾಯಕಿ ಹೀಲೆ ಮ್ಯಾಥ್ಯೂಸ್ ಅವರನ್ನು 40 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹುಮೈರಾ ಖಾಜಿ, ನೀಲಂ ಬಿಶ್ತ್‌, ಸೋನಂ ಯಾದವ್ ಅವರನ್ನು ಮೂಲ ಬೆಲೆಗೆ ತನ್ನತ್ತ ಸೆಳೆದುಕೊಳ್ಳುವಲ್ಲಿ ಮುಂಬೈ ಫ್ರಾಂಚೈಸಿಯು ಯಶಸ್ವಿಯಾಯಿತು.

WPL ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ತಂಡ ಹೀಗಿದೆ ನೋಡಿ:

1. ಹರ್ಮನ್‌ಪ್ರೀತ್ ಕೌರ್: 1.80 ಕೋಟಿ ರುಪಾಯಿ
2. ನಥಾಲಿ ಶೀವರ್: 3.20 ಕೋಟಿ ರುಪಾಯಿ
3. ಅಮೆಲಿಯಾ ಕೆರ್ರ್‌: 1 ಕೋಟಿ ರುಪಾಯಿ
4. ಪೂಜಾ ವಸ್ತ್ರಾಕರ್: 1.90 ಕೋಟಿ ರುಪಾಯಿ
5. ಯಾಶ್ತಿಕಾ ಭಾಟಿಯಾ: 1.50 ಕೋಟಿ ರುಪಾಯಿ
6. ಹೀಥರ್ ಗ್ರೆಹಂ: 30 ಲಕ್ಷ ರುಪಾಯಿ
7. ಇಸಾಬೆಲ್ಲೆ ವಾಂಗ್: 30 ಲಕ್ಷ ರುಪಾಯಿ
8. ಅಮನ್‌ಜೋತ್ ಕೌರ್: 50 ಲಕ್ಷ ರುಪಾಯಿ
9. ಧಾರ್ ಗುಜ್ಜರ್: 10 ಲಕ್ಷ ರುಪಾಯಿ
10. ಸಾಯಿಕಾ ಇಶಾಕ್‌: 10 ಲಕ್ಷ ರುಪಾಯಿ
11. ಹೀಲೆ ಮ್ಯಾಥ್ಯೂಸ್‌: 40 ಲಕ್ಷ ರುಪಾಯಿ
12. ಚೋಲೆ ಟ್ರೈಯಾನ್: 30 ಲಕ್ಷ ರುಪಾಯಿ
13. ಹುಮೈರಾ ಖಾಜಿ: 10 ಲಕ್ಷ ರುಪಾಯಿ
14. ಪ್ರಿಯಾಂಕ ಬಾಲಾ: 20 ಲಕ್ಷ ರುಪಾಯಿ
15. ಸೋನಂ ಯಾದವ್: 10 ಲಕ್ಷ ರುಪಾಯಿ
16. ಜಿಂತಿಮನಿ ಕಲಿತಾ: 10 ಲಕ್ಷ ರುಪಾಯಿ
17. ನೀಲಂ ಬಿಶ್ತ್‌: 10 ಲಕ್ಷ ರುಪಾಯಿ