Asianet Suvarna News Asianet Suvarna News

ಮುಂಬೈ ಹಾಫ್ ಮ್ಯಾರಥಾನ್, ಆ.20ಕ್ಕೆ ಸಚಿನ್ ತೆಂಡುಲ್ಕರ್‌ ಚಾಲನೆ!

ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಮುಂಬೈ ಮ್ಯಾರಾಥಾನ್‌ ಮತ್ತೆ ಆರಂಭಗೊಳ್ಳುತ್ತಿದೆ. ನಾಳೆ ಸಚಿನ್ ತೆಂಡುಲ್ಕರ್ ಮುಂಬೈ ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಲಿದ್ದಾರೆ.

Master Blaster Sachin Tendulkar to flag off mumbai half marathon on august 20th after long covid break ckm
Author
Bengaluru, First Published Aug 19, 2022, 9:06 PM IST

ಮುಂಬೈ(ಆ.19): ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಭಾನುವಾರ(ಆ.21) ನಡೆಯಲಿರುವ ಮುಂಬೈ ಹಾಫ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸುಮಾರು 13500ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಓಟಗಾರರು ಮೂರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. 21 ಕಿಲೋ ಮೀಟರ್ ಓಟದಲ್ಲಿ 4000 ಮಂದಿ ಪಾಲ್ಗೊಳ್ಳಲಿದ್ದು, 10 ಕಿಲೋ ಮೀಟರ್ ಓಟದಲ್ಲಿ ಅಂದಾಜು 7000 ಮತ್ತು ೫ ಕಿಲೋ ಮೀಟರ್ ಓಟದಲ್ಲಿ 2500 ಓಟಗಾರರು ಭಾಗವಹಿಸಲಿದ್ದಾರೆ. ‘ಓಡುವುದರಿಂದ ಅನೇಕ ರೀತಿಯ ಉಪಯೋಗಗಳಿವೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ’ ಎಂದು ಸಚಿನ್ ತೆಂಡುಲ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಫ್ ಮ್ಯಾರಥಾನ್ ಮತ್ತು ಎಲೈಟ್ 10ಕೆ ಸ್ಪರ್ಧೆಯಲ್ಲಿ ವಿಜೇತರಾಗುವ ಅಥ್ಲೀಟ್‌ಗಳನ್ನು ಸಚಿನ್ ಸನ್ಮಾನಿಸಲಿದ್ದಾರೆ.

‘ಕೋವಿಡ್ ಮಹಾಮಾರಿ ಆರಂಭಗೊಂಡಾಗಿನಿಂದ ಫಿಟ್ನೆಸ್ ಕಡೆಗೆ ಜನರು ಹೆಚ್ಚು ಗಮನ ಹರಿಸಲು ಶುರು ಮಾಡಿದ್ದಾರೆ. ಸಕ್ರಿಯ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನ ಅರಿತಿದ್ದಾರೆ’ ಎಂದು ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಹಾಫ್ ಮ್ಯಾರಥಾನ್ ಜಿಯೋ ಗಾರ್ಡನ್ಸ್, ಬಿಕೆಸಿಯಲ್ಲಿ ಆರಂಭಗೊಂಡು ಅಲ್ಲಿಯೇ ಮುಕ್ತಾಯಗೊಳ್ಳಲಿದೆ. ಬೆಳಗ್ಗೆ 5.15ಕ್ಕೆ ಓಟ ಆರಂಭಗೊಳ್ಳಲಿದೆ.10ಕೆ ಓಟ ಬೆಳಗ್ಗೆ 6.20ಕ್ಕೆ ಮತ್ತು ೫ಕೆ ಓಟ ಬೆಳಗ್ಗೆ 8ಕ್ಕೆ ಶುರುವಾಗಲಿದೆ. 5ನೇ ಆವೃತ್ತಿಯ ಓಟದ ಸ್ಪರ್ಧೆಯಲ್ಲಿ ವಿವಿಧ ಕಾರ್ಪೋರೇಟ್ ತಂಡಗಳು ಪಾಲ್ಗೊಳ್ಳಲಿದ್ದು, ಉತ್ತಮ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ. 

ಮ್ಯಾರಥಾನ್‌ನಲ್ಲಿ ಓಡಿ ಪದಕ ಗಳಿಸಿದ ಬಾತುಕೋಳಿ: ವಿಡಿಯೋ ವೈರಲ್‌

ಭಾರತೀಯ ನಾಕೌಪಡೆಯ 2000ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿರುವುದು ಬಹಳ ವಿಶೇಷ. ಹಾಫ್ ಮ್ಯಾರಥಾನ್‌ನಲ್ಲಿ 82 ವರ್ಷದ ಸ್ಪರ್ಧಿ ಕಣಕ್ಕಿಳಿಯಲಿದ್ದು, ಪ್ರಮುಖ ಆಕರ್ಷಣೆ ಎನಿಸಿದ್ದಾರೆ. 72 ವರ್ಷದ ಮಹಿಳಾ ಸ್ಪರ್ಧಿ ಸಹ ಓಡಲಿದ್ದು, ಎಲ್ಲರ ಗಮನ ಸೆಳೆಯುವ ನಿರೀಕ್ಷೆ ಇದೆ. 5ಕೆ ಓಟದಲ್ಲಿ 7 ವರ್ಷ ಬಾಲಕಿ ಮತ್ತು 8 ವರ್ಷದ ಬಾಲಕ ಪಾಲ್ಗೊಳ್ಳಲಿದ್ದು, ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿರುವ ಅತಿಕಿರಿಯ ಓಟಗಾರರು ಎನಿಸಿಕೊಳ್ಳಲಿದ್ದಾರೆ.

ಸೆ. 11ಕ್ಕೆ ಮೈಸೂರು ಮ್ಯಾರಥಾನ್‌ ಓಟ
ಲೈಫ್‌ ಈಸ್‌ ಕಾಲಿಂಗ್‌ ವತಿಯಿಂದ ರನ್‌ ಸರಣಿ ಅಂಗವಾಗಿ ಸೆ. 11ರಂದು ನಗರದಲ್ಲಿ ಮೈಸೂರು ಮ್ಯಾರಥಾನ್‌ ಓಟ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ನಿರ್ದೇಶಕ ಸುನಿಲ್‌ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 5.30ಕ್ಕೆ ಅರಮನೆ ಬಲರಾಮ ದ್ವಾರದ ಬಳಿ ಓಟ ಆರಂಭವಾಗಲಿದೆ. 30 ಕಿಮೀ, 21 ಕಿಮೀ, 10 ಕಿಮೀಗಳ ಓಟ ಇದ್ದು, 16 ವರ್ಷ ಮೇಲ್ಪಟ್ಟವರು ಪಾಲ್ಗೊಳ್ಳಬಹುದು. ಇನ್ನು 11 ವರ್ಷ ಮೇಲ್ಪಟ್ಟವರು ಐದು ಕಿಮೀ ನಡಿಗೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಾಲ್ಗೊಳ್ಳಲಿಚ್ಛಿಸುವ ಆಸಕ್ತರು ಮೊ. 96066 22006 ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಎವರೆಸ್ಟ್‌ನಲ್ಲಿ ಕನ್ನಡತಿ ಅಶ್ವಿನಿ ಭಟ್ 60 ಕಿ.ಮೀ. ಮ್ಯಾರಥಾನ್...!

Follow Us:
Download App:
  • android
  • ios