ಭಾರತ ಮಹಿಳಾ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ರನ್ ಚೇಸ್ ಮಾಡಿ ಸೈ ಎನಿಸಿಕೊಂಡಿದೆ. ಶೆಫಾಲಿ ವರ್ಮಾ, ಸ್ಮೃತಿ ಮಂಧನಾ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಮೆಲ್ಬರ್ನ್‌(ಫೆ.09): ತ್ರಿಕೋನ ಟಿ20 ಸರಣಿಯಲ್ಲಿ ಭಾರತ ಮಹಿಳಾ ತಂಡ 2ನೇ ಗೆಲುವು ದಾಖಲಿಸಿದ್ದು, ಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ, ಆಸ್ಪ್ರೇಲಿಯಾ ವಿರುದ್ಧ 7 ವಿಕೆಟ್‌ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌, ಗಾರ್ಡ್‌ನರ್‌(93)ರ ಆಕರ್ಷಕ ಆಟದ ನೆರವಿನಿಂದ 5 ವಿಕೆಟ್‌ಗೆ 173 ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂಧನಾ (55), ಶಫಾಲಿ ವರ್ಮಾ (49), ಜೆಮಿಮಾ ರೋಡ್ರಿಗಸ್‌ (30) ಆಸರೆಯಾದರು. ಭಾರತ ಇನ್ನು 2 ಎಸೆತ ಬಾಕಿ ಇರುವಂತೆ ಜಯಿಸಿತು. 

'ಬಿ' ದರ್ಜೆಗೆ ಹಿಂಬಡ್ತಿ ಪಡೆದ ಮಿಥಾಲಿ ರಾಜ್‌!

ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಭಾನುವಾರ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ಸೆಣಸಲಿದ್ದು, ಈ ಪಂದ್ಯದ ಬಳಿಕ ಫೈನಲ್‌ನಲ್ಲಿ ಆಡುವ ತಂಡಗಳು ಯಾವುವು ಎಂದು ನಿರ್ಧಾರವಾಗಲಿದೆ.

ಸ್ಕೋರ್‌: ಆಸ್ಪ್ರೇಲಿಯಾ 173/5, ಭಾರತ 177/3