'ಬಿ' ದರ್ಜೆಗೆ ಹಿಂಬಡ್ತಿ ಪಡೆದ ಮಿಥಾಲಿ ರಾಜ್‌!

ಬಿಸಿಸಿಐ ನೂತನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಗೊಂಡಿದ್ದು, 'ಎ' ಗ್ರೇಡ್‌ನಿಂದ ಮಿಥಾಲಿ ರಾಜ್ 'ಬಿ' ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ... 

Team India Women Cricketer Mithali Raj demoted to Grade B in central contracts

ಮುಂಬೈ(ಜ.17): ಭಾರತ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಗುರುವಾರ ನೂತನವಾಗಿ ಪ್ರಕಟಗೊಂಡ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ‘ಬಿ’ ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ.

ಕಳೆದ ವರ್ಷ ಅವರು ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದರು. ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂಧನಾ ಹಾಗೂ ಪೂನಮ್‌ ಯಾದವ್‌ ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದು ವಾರ್ಷಿಕ 50 ಲಕ್ಷ ರುಪಾಯಿ ವೇತನ ಪಡೆಯಲಿದ್ದಾರೆ. ‘ಬಿ’ ದರ್ಜೆಯಲ್ಲಿ ಮಿಥಾಲಿ, ಜೂಲನ್‌ ಸೇರಿ 8 ಆಟಗಾರ್ತಿಯರಿದ್ದು, ವಾರ್ಷಿಕ  30 ಲಕ್ಷ, ‘ಸಿ’ ದರ್ಜೆಯಲ್ಲಿ ಕರ್ನಾಟಕದ ವೇದಾ, ರಾಜೇಶ್ವರಿ ಸೇರಿ 11 ಆಟಗಾರ್ತಿಯರಿದ್ದು ವಾರ್ಷಿಕ 10 ಲಕ್ಷ ರುಪಾಯಿ ವೇತನ ಗಳಿಸಲಿದ್ದಾರೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

37 ವರ್ಷದ ಮಿಥಾಲಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇನ್ನು 2021ರ ಏಕದಿನ ವಿಶ್ವಕಪ್‌ವರೆಗೂ ತಂಡದಲ್ಲಿ ಮುಂದುವರೆಯುವ ಇಚ್ಚೆ ಹೊಂದಿದ್ದಾರೆ. ಬಿಸಿಸಿಐ ನೂತನ ಕೇಂದ್ರಿಯ ಗುತ್ತಿಗೆಯು ಅಕ್ಟೋಬರ್ 2019ರಿಂದ ಸೆಪ್ಟೆಂಬರ್ 2020ರವರೆಗೆ ಇರಲಿದೆ.

ಬಿಸಿಸಿಐ ಗುತ್ತಿಗೆಗೆ ಒಳಪಟ್ಟ ಆಟಗಾರ್ತಿಯರ ಪಟ್ಟಿ ಹೀಗಿದೆ:

* ಗ್ರೇಡ್ ಎ(50 ಲಕ್ಷ): ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ, ಪೂನಂ ಯಾಧವ್.

* ಗ್ರೇಡ್ ಬಿ(30 ಲಕ್ಷ): ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಏಕ್ತಾ ಬಿಶ್ತ್, ರಾಧಾ ಯಾದವ್, ತಾನಿಯಾ ಭಾಟಿಯಾ, ಶಿಖಾ ಪಾಂಡೆ, ಜಿಮಿಯಾ ರೋಡ್ರಿಗಸ್, ದೀಪ್ತಿ ಶರ್ಮಾ.

* ಗ್ರೇಡ್ ಸಿ(10 ಲಕ್ಷ): ವೇಧಾ ಕೃಷ್ಣಮೂರ್ತಿ, ಪೂನಂ ಯಾದವ್, ಅನುಜಾ ಪಾಟಿಲ್, ಮಾನ್ಸಿ ಜೋಶಿ, ಡಿ. ಹೇಮಲತಾ, ಅರುಂಧತಿ ರೆಡ್ಡಿ, ರಾಜೇಶ್ವರ್ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ, ಶಫಾಲಿ ವರ್ಮಾ.

 

Latest Videos
Follow Us:
Download App:
  • android
  • ios