Asianet Suvarna News Asianet Suvarna News

ಕೇಕ್ ಕತ್ತರಿಸಿ, ತಿಂದ ನಂತರ ಪತ್ನಿಗೆ ಧೋನಿ ಕೇಳಿದ್ದೇನು? ಉತ್ತರದಿಂದ ಮಹಿ ನಿರಾಳ!

ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೇಕ್ ತಿಂದ ಬಳಿಕ ಧೋನಿ ಚಿಂತಿತರಾದಂತೆ ಕಾಣುತ್ತಾರೆ. ಆನಂತರ ಪತ್ನಿ ನೀಡಿದ ಉತ್ತರದಿಂದ  ಧೋನಿ ಕೂಲ್ ಆಗುತ್ತಾರೆ.

mahendra singh dhoni questioned this cake eggless or not mrq
Author
First Published Jul 7, 2024, 12:24 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಡೀ ವಿಶ್ವದ ತುಂಬೆಲ್ಲಾ ಕೋಟ್ಯಂತರ ಅಭಿಮಾನಿಗಳನ್ನು ಧೋನಿ (Dhoni Fans) ಹೊಂದಿದ್ದು, ಫ್ಯಾನ್ಸ್ ಸೋಶಿಯಲ್ ಮೀಡಿಯಾ ಮೂಲಕ ಕೂಲ್ ಕ್ಯಾಪ್ಟನ್‌ಗೆ ವಿಶ್ ಮಾಡುತ್ತಿದ್ದಾರೆ. ಪತ್ನಿ ಸಾಕ್ಷಿ (Sakshi Dhoni) ಜೊತೆ ಕೇಕ್ ಮಾಡಿ ಬರ್ತ್ ಡೇ ಆಚರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಕ್ಷಿ ಪತಿ ಬರ್ತ್ ಡೇ ಆಚರಣೆಯ (Dhoni Birthday Celebration) ವಿಡಿಯೋವನ್ನು ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಪದೇ ಪದೇ ನೋಡುವಂತೆ ನಿಮ್ಮನ್ನು ಮಾಡುತ್ತದೆ. ಕೇಕ್ ಕತ್ತರಿಸಿ ತಿಂದ ಬಳಿಕ ಧೋನಿ ದಿಢೀರ್ ಅಂತ ಪತ್ನಿ ಸಾಕ್ಷಿ ಅವರಿಗೆ ದಿಢೀರ್ ಅಂತ ಪ್ರಶ್ನೆಯೊಂದನ್ನು ಕೇಳುತ್ತಾರೆ. ಆಮೇಲೆ ಅಲ್ಲಿದ್ದವರ  ಉತ್ತರ ಕೇಳಿ ಧೋನಿ ನಿರಾಳರಾಗುತ್ತಾರೆ. 

7ನೇ ಜುಲೈ 1981ರಲ್ಲಿ ರಾಂಚಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಜನಿಸಿದ್ದಾರೆ. ಸಣ್ಣ ಊರಿನಿಂದ ಬಂದ ಧೋನಿಯವರ ಇಲ್ಲಿಯವರೆಗಿನ ಜೀವನ ತೆರೆದ ಪುಸ್ತಕವಾಗಿದೆ. ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಕಥೆಯುಳ್ಳ ಸಿನಿಮಾ ಸಹ ಬಿಡುಗಡೆಯಾಗಿದೆ.  15ನೇ ಆಗಸ್ಟ್ 2020ರಂದು ಧೋನಿ ಇಂಟರ್‌ನ್ಯಾಷನಲ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ನಾಲ್ಕು ವರ್ಷ ಕಳೆದ್ರೂ ಇಂದಿಗೂ ಧೋನಿಯವರ ಫ್ಯಾನ್ ಫಾಲೋಯಿಂಗ್‌ನಲ್ಲಿ ಯಾವುದೇ ಕಡಿಮೆಯಾಗಿಲ್ಲ. ಬದಲಾಗಿ ಧೋನಿ ಅಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಕೇಕ್ ಕತ್ತರಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಮತ್ತೊಮ್ಮೆ ಬಯಲಾಯ್ತು ಧೋನಿಯ ದೊಡ್ಡ ಗುಣ..! ಕಣ್ಣೀರು ಹಾಕಿದ ಅಭಿಮಾನಿಗೆ ಸಿಕ್ತು ಅಭಯ..!

ಧೋನಿ ಕೇಳಿದ ಪ್ರಶ್ನೆ ಏನು? 

ವೈರಲ್ ಆಗಿರುವ ವಿಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಜೊತೆಯಲ್ಲಿ ಕೇಕ್ ಕತ್ತರಿಸುತ್ತಾರೆ. ನಂತರ ಸಾಕ್ಷಿ ಕೇಕ್‌ನ್ನು ಪತಿಗೆ ತಿನ್ನಿಸುತ್ತಾರೆ. ಆನಂತರ ಧೋನಿ ಸಹ ಪತ್ನಿಗೆ ಕೇಕ್ ತಿನ್ನಿಸುತ್ತಾರೆ. ಆನಂತರ ಸಾಕ್ಷಿ ಪತಿಗೆ ನಮಸ್ಕರಿಸಿ, ಕೈ ಮುಗಿದು ಪಕ್ಕಕ್ಕೆ ಸರಿಯುತ್ತಾರೆ. ಕೇಕ್ ತಿನ್ನುವಾಗ ಇದು ಎಗ್‌ಲೆಸ್ ಕೇಕ್ ಅಲ್ಲವಾ ಎಂದು ಕೇಳುತ್ತಾರೆ. ಒಂದು ಕ್ಷಣ ಧೋನಿ ಫುಲ್ ಶಾಕ್ ಆಗಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಹೌದು ಎಂಬ ಉತ್ತರ ಕೇಳುತ್ತಿದ್ದಂತೆ ಧೋನಿ ನಿರಾಳರಾದಂತೆ ಕಾಣುತ್ತಾರೆ. 

ಮಹೇಂದ್ರ ಸಿಂಗ್ ಧೋನಿ ವಯಸ್ಸು 43 ಆದ್ರೂ ಇಂದಿಗೂ 20ರ ಯುವಕನಂತೆ ಬ್ಯಾಟ್ ಬೀಸುತ್ತಾರೆ. ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಬ್ಯಾಟಿಂಗ್ ಕಂಡು ಇಡೀ ವಿಶ್ವವೇ ಶಾಕ್ ಆಗಿತ್ತು. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಾರೆ. 

ಧೋನಿ, ಕೊಹ್ಲಿ, ಸಚಿನ್‌, ರೋಹಿತ್‌ ಇವರೆಲ್ಲರ ಸಂಪತ್ತು ಕೂಡಿಸಿದ್ರೂ, ಭಾರತದ ಈ ಮಾಜಿ ಕ್ರಿಕೆಟರ್‌ ಶ್ರೀಮಂತಿಕೆಗೆ ಸಮವಲ್ಲ!

Latest Videos
Follow Us:
Download App:
  • android
  • ios