ಮಹೇಂದ್ರ ಸಿಂಗ್ ಧೋನಿ..! ಕ್ರಿಕೆಟ್ ಜಗತ್ತಿನಲ್ಲಿ ಈ ಹೆಸರು ಕೇಳದವರೇ ಇಲ್ಲ. ಬೇರೆ ಕ್ರಿಕೆಟರ್ಸ್‌ಗೆ  ಅಭಿಮಾನಿಗಳಿದ್ರೆ, ಧೋನಿಗೆ ಮಾತ್ರ ಭಕ್ತರಿದ್ದಾರೆ ಅಂದ್ರೆ ತಪ್ಪಿಲ್ಲ. ಈ ಬಾರಿಯ IPLನಲ್ಲೂ ಇದೇ ಪ್ರೂವ್ ಆಯ್ತು. 

ಬೆಂಗಳೂರು: ಕ್ರಿಕೆಟ್ ಜಗತ್ತಿನ ಲೆಜೆಂಡ್ ಧೋನಿ, ತಮ್ಮ ಬ್ಯಾಟಿಂಗ್ ಮೂಲಕ ಅಷ್ಟೇ ಅಲ್ಲ. ವ್ಯಕ್ತಿತ್ವದ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಧೋನಿಯ ಶ್ರೇಷ್ಠ ವ್ಯಕ್ತಿತ್ವ ಮತ್ತೊಮ್ಮೆ ಅನಾವರಣಗೊಂಡಿದೆ. ಇದನ್ನು ನೋಡಿದ ಫ್ಯಾನ್ಸ್ ಧೋನಿಯ ಗುಣಕ್ಕೆ ಫಿದಾ ಆಗಿದ್ದಾರೆ.

ಮೈದಾನದಲ್ಲೇ ಅಭಿಮಾನಿಗೆ ಸಿಕ್ತು ಧೋನಿಯಿಂದ ಅಭಯ

ಮಹೇಂದ್ರ ಸಿಂಗ್ ಧೋನಿ..! ಕ್ರಿಕೆಟ್ ಜಗತ್ತಿನಲ್ಲಿ ಈ ಹೆಸರು ಕೇಳದವರೇ ಇಲ್ಲ. ಬೇರೆ ಕ್ರಿಕೆಟರ್ಸ್‌ಗೆ ಅಭಿಮಾನಿಗಳಿದ್ರೆ, ಧೋನಿಗೆ ಮಾತ್ರ ಭಕ್ತರಿದ್ದಾರೆ ಅಂದ್ರೆ ತಪ್ಪಿಲ್ಲ. ಈ ಬಾರಿಯ IPLನಲ್ಲೂ ಇದೇ ಪ್ರೂವ್ ಆಯ್ತು. 

ಅಹಮದಾಬಾದ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡ್ತಿದ್ರು. ಈ ವೇಳೆ ಸ್ಟೇಡಿಯೊಂನೊಳಗೆ ನುಗ್ಗಿ ಬಂದ ಅಭಿಮಾನಿಯೊಬ್ಬ ಧೋನಿ ಕಾಲಿಗೆ ಬಿದ್ದ. ಅವರನ್ನ ಅಪ್ಪಿಕೊಂಡ. ಧೋನಿಯು ಆತನ ಮೇಲೆ ಕೈಹಾಕಿ 20 ಸೆಕೆಂಡ್‌ಗಳ ಕಾಲ ಪ್ರೀತಿಯಿಂದ ಮಾತನಾಡಿಸಿದ್ರು. ನಂತರ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನ ಸ್ಟೇಡಿಯಂನಿಂದ ಹೊರಗಡೆ ಹಾಕಿದ್ರು. 

ಟಿ20 ವಿಶ್ವಕಪ್‌ನಲ್ಲೂ ಕೊಹ್ಲಿ ವಿರಾಟರೂಪ..! ವಿರಾಟ್ ರೆಕಾರ್ಡ್ ಮುರಿಯಲು ಮತ್ತೊಬ್ಬ ರೆಡಿ

ಈಗ್ಯಾಕೆ ಈ ವಿಷ್ಯ ಅಂದ್ರೆ, ಅಂದು ಧೋನಿಯನ್ನ ತಬ್ಬಿಕೊಂಡ ಅಭಿಮಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ಧೋನಿ ಜೊತೆ ನಡೆದ ಮಾತುಕತೆಯನ್ನ ರಿವೀಲ್ ಮಾಡಿದ್ದಾರೆ. ಇದನ್ನ ಕೇಳಿ ಫ್ಯಾನ್ಸ್ ತಲಾ ಫರ್ ರೀಸನ್ ಅಂತಿದ್ದಾರೆ. 

Scroll to load tweet…

ಮ್ಯಾಚ್ ನಡೆಯುತ್ತಿದ್ದಾಗ ಧೋನಿ ಬ್ಯಾಟಿಂಗ್‌ಗೆ ಬರುತ್ತಿದ್ದಂತೆ, ಹೇಗಾದ್ರೂ ಮಾಡಿ ಅವರನ್ನ ಭೇಟಿಯಾಗ್ಬೇಕು ಅಂತ ಅನ್ನಿಸಿತು. ತಕ್ಷಣ ಫೆನ್ಸಿಂಗ್ ಹಾರಿ, ಸ್ಟೇಡಿಯಂನೊಳಗೆ ನುಗ್ಗಿದೆ. ಕೈ ಎತ್ತಿ ಮಹಿ ಭಾಯ್ ಅಂತ ಕೂಗಿದೆ. ಆಗ ಧೋನಿ ಸುಮ್ನೆ ಮಜಾ ಮಾಡಲು ಇಲ್ಲಿ ಬಂದಿದ್ದೀಯಾ ಅಲ್ವಾ ಅಂತ ಕೇಳಿದ್ರು. ಧೋನಿಯನ್ನ ನೋಡಿದ ಖುಷಿಗೆ ನನಗೆ ಮಾತೇ ಬರಲಿಲ್ಲ. ಅವ್ರ ಪಾದ ಮುಟ್ಟಿ ನಮಸ್ಕರಿಸಿದೆ. ಆ ಕ್ಷಣ ನನ್ನ ಕಣ್ಣಲ್ಲಿ ನೀರು ತುಂಬಿದ್ವು. 21 ಸೆಕೆಂಡ್‌ಗಳ ಮಾತುಕತೆಯಲ್ಲೇ ನನಗಿರೋ ಸಮಸ್ಯೆಯನ್ನ ಅವ್ರು ಕಂಡುಹಿಡಿದ್ರು. ಯಾಕೆ ಅಷ್ಟು ವೇಗವಾಗಿ ಉಸಿರಾಡ್ತಿದ್ದೀಯಾ ಅಂತ ಕೇಳಿದ್ರು. ನನಗೆ ಉಸಿರಾಟದ ತೊಂದರೆಯಿದೆ ಸರ್ಜರಿ ಆಗಬೇಕಿದೆ ಅಂತ ಹೇಳಿದೆ. ನನ್ನ ಸಮಸ್ಯೆ ಬಗ್ಗೆ ಹೇಳುತ್ತಿದ್ದಂತೆ, ನಿನ್ನ ಚಿಕಿತ್ಸೆಗೆ ಆಗೋ ಖರ್ಚನ್ನ ನಾನು ಭರಿಸುತ್ತೇನೆ. ನಿನಗೆ ಏನು ಆಗುವುದಿಲ್ಲ, ಭಯಪಡಬೇಡ ಅಂತ ಧೋನಿ ಭರವಸೆ ನೀಡಿದ್ರು. 

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿಯ ಒಳ್ಳೆಯ ಮನಸ್ಸಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೊಂದೇ ಅಲ್ಲ, ಹಲವಾರು ಬಾರಿ ಧೋನಿ ತಮ್ಮ ಒಳ್ಳೆ ಮನಸ್ಸಿನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್