Maharaja Trophy 2024 : ಗುಲ್ಬರ್ಗಾ ಮಣಿಸಿ 2ನೇ ಬಾರಿ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್‌ಗೆ ಲಗ್ಗೆ
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: 3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 09 ವಿಕೆಟ್‌ಗಳಿಂದ ಬಗ್ಗುಬಡಿದ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ. 2022ರಲ್ಲಿ ಗುಲ್ಬರ್ಗಾ ವಿರುದ್ಧವೇ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಆಗಿದ್ದ ಬೆಂಗಳೂರು, ಟೂರ್ನಿಯಲ್ಲಿ 2ನೇ ಬಾರಿ ಪ್ರಶಸ್ತಿ ಸುತ್ತಿಗೇರಿತು. 2ನೇ ಬಾರಿ ಫೈನಲ್‌ಗೇರುವ ಗುಲ್ಬರ್ಗಾ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗಾ 19.5 ಓವರ್‌ಗಳಲ್ಲಿ 155 ರನ್ ಕಲೆಹಾಕಿತು. ಪ್ರಮುಖ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಲುವ್‌ನಿತ್ ಸಿಸೋಡಿಯಾ 20 ಎಸೆತಗಳಲ್ಲಿ 41 ರನ್, ಪ್ರವೀಣ್ ದುಬೆ 26 ರನ್ ಗಳಿಸಿದರು. 8ನೇ ವಿಕೆಟ್‌ಗೆ ಪ್ರವೀಣ್-ಫೈಜಾನ್ ಖಾನ್(13) 38 ರನ್ ಜೊತೆಯಾಟವಾಡಿದರು. ಮೊಹ್ಸಿನ್, ಲಾವಿಶ್, ಕ್ರಾಂತಿ ಕುಮಾರ್ ಹಾಗೂ ಶುಭಾಂಗ್ ಹೆಗ್ಡೆ ತಲಾ 2 ವಿಕೆಟ್ ಕಿತ್ತರು.
ಸಾವಿರ ಕೋಟಿ ಆಸ್ತಿ ಒಡೆಯ ಮಹೇಂದ್ರ ಸಿಂಗ್ ಧೋನಿ..! ನಿವೃತ್ತಿಯಾದ್ರೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್ ವ್ಯಾಲ್ಯೂ..!
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಳೂರು ಸ್ಫೋಟಕ ಆಟದ ಮೂಲಕ ಆರಂಭದಲ್ಲೇ ಗುಲ್ಬರ್ಗಾ ವಿರುದ್ಧ ಸವಾರಿ ಮಾಡಿತು. ನಾಯಕ ಮಯಾಂಕ್ ಅಗರ್‌ವಾಲ್ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ ಸಿಡಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಎಲ್.ಆರ್.ಚೇತನ್ ಔಟಾಗದೆ 89 ರನ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಚೇತನ್ ಕೇವಲ 51 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಭರ್ಜರಿ ಸಿಕ್ಸರ್ ಸಿಡಿಸಿದರು. ಈ ಮೂಲಕ ಇನ್ನೂ 17 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸ್ಕೋರ್:
ಗುಲ್ಬರ್ಗಾ 19.5 ಓವರ್‌ಗಳಲ್ಲಿ 155/10 (ಲುವ್‌ನಿತ್ 41, ಪ್ರವೀಣ್ 26, ಕ್ರಾಂತಿ 2/22, ಶುಭಾಂಗ್2/23)
ಬೆಂಗಳೂರು 17.1 ಓವರ್‌ಗಳಲ್ಲಿ 159/1 (ಮಯಾಂಕ್ 52, ಚೇತನ್ 89*)
ಪಾಕ್-ಬಾಂಗ್ಲಾ 2ನೇ ಟೆಸ್ಟ್: 1ನೇ ದಿನದಾಟ ಮಳೆಗೆ ಬಲಿ
ರಾವಲ್ಪಿಂಡಿ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ನ ಮೊದಲ ದಿನದಾಟ ಮಳೆಗೆ ಬಲಿಯಾಗಿದೆ. ಭೋಜನ ವಿರಾಮದ ವರೆಗೂ ಕಾಯ್ದ ಅಂಪೈರ್‌ಗಳು, ಮಳೆ ನಿಲ್ಲದ ಕಾರಣ ದಿನದಾಟವನ್ನು ರದ್ದುಗೊಳಿಸಿದರು. ಉಭಯ ತಂಡಗಳ ಆಟಗಾರರು ಕ್ರೀಡಾಂಗಣಕ್ಕೆ ಆಗಮಿಸದೆ ಹೋಟೆಲ್‌ನಲ್ಲೇ ಉಳಿದರು. ಪಂದ್ಯದಲ್ಲಿ ಇನ್ನೂ ಟಾಸ್ ಸಹ ಆಗಿಲ್ಲ.
ಮಹಾರಾಜ ಸೆಮೀಸ್‌ಗೆ ಅಖಾಡ ಸಿದ್ಧ: ಇಂದು ಬೆಂಗಳೂರು-ಗುಲ್ಬರ್ಗಾ, ನಾಳೆ ಮೈಸೂರು-ಹುಬ್ಬಳ್ಳಿ ಫೈಟ್..!
ನ್ಯೂಜಿಲೆಂಡ್ ತಂಡಕ್ಕೆ ಓರಂ ಬೌಲಿಂಗ್ ಕೋಚ್
ಆಕ್ಲಂಡ್: ಭಾರತ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡ ಮಾಜಿ ವೇಗದ ಬೌಲರ್ ಜೇಕಬ್ ಓರಮ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. 2001ರಿಂದ 2012ರ ವರೆಗೆ ಕಿವೀಸ್ ಪರ 33 ಟೆಸ್ಟ್, 160 ಏಕದಿನ ಹಾಗೂ 36 ಟಿ20 ಪಂದ್ಯಗಳನ್ನಾಡಿರುವ 46 ವರ್ಷದ ಓರಮ್ ಅಕ್ಟೋಬರ್ 7ರಿಂದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಓರಮ್ ಇತ್ತೀಚೆಗೆ ಟಿ20 ವಿಶ್ವಕಪ್‌ನಲ್ಲೂ ತಂಡದ ಬೌಲಿಂಗ್ ಕೋಚ್ ಆಗಿದ್ದರು. 2022ರಲ್ಲಿ ಕಿವೀಸ್ ಮಹಿಳಾ ತಂಡಕ್ಕೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ನ್ಯೂಜಿಲೆಂಡ್ ತಂಡ ಅ.16ರಿಂದ ನ.5ರ ವರೆಗೆ ಭಾರತ ವಿರುದ್ಧ ಕ್ರಮವಾಗಿ ಬೆಂಗಳೂರು, ಪುಣೆ ಹಾಗೂ ಮುಂಬೈನಲ್ಲಿ 3 ಟೆಸ್ಟ್ ಪಂದ್ಯಗಳನ್ನಾಡಲಿವೆ.