ಸಾವಿರ ಕೋಟಿ ಆಸ್ತಿ ಒಡೆಯ ಮಹೇಂದ್ರ ಸಿಂಗ್ ಧೋನಿ..! ನಿವೃತ್ತಿಯಾದ್ರೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್ ವ್ಯಾಲ್ಯೂ..!
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ 4 ವರ್ಷಗಳೇ ಕಳೆದರು ಅವರ ಬ್ರ್ಯಾಂಡ್ ವ್ಯಾಲ್ಯೂ ಕಡಿಮೆಯಾಗಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮಹೇಂದ್ರ ಸಿಂಗ್ ಧೋನಿ..! ಕ್ರಿಕೆಟ್ ದುನಿಯಾದ ಗ್ರೇಟ್ ಕ್ಯಾಪ್ಟನ್. ಧೋನಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ಇದು ಎಲ್ಲರಿಗೂ ಗೊತ್ತಿರೋದೆ. ಆದ್ರೆ, ಕ್ರಿಕೆಟ್ ಮೂಲಕ ಧೋನಿಯ ಎಷ್ಟು ಕೋಟಿಗಳಿಸಿದ್ದಾರೆ, ಯಾವ್ಯಾವುದರಿಂದ ಎಷ್ಟೆಷ್ಟು ಕೋಟಿ ಸಂಪಾದಿಸ್ತಾರೆ ಅನ್ನೋದು ನಿಮಗೆ ಗೊತ್ತಾ..? ಹಾಗಾದ್ರೆ, ಈ ಸ್ಟೋರಿ ನೋಡಿ.
ರಿಟೈರ್ ಆದ್ಮೇಲೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್ ವ್ಯಾಲ್ಯೂ..!
M.S ಧೋನಿ, ಕ್ರಿಕೆಟ್ ಜಗತ್ತಿನ ಮಾಸ್ಟರ್ ಮೈಂಡ್. ಭಾರತೀಯ ಕ್ರಿಕೆಟ್‌ನ ಗ್ರೇಟೆಸ್ಟ್ ಕ್ಯಾಪ್ಟನ್. ಧೋನಿಯ ಶಾಂತ ಸ್ವಭಾವ, ತಂತ್ರಗಾರಿಕೆ, ಒತ್ತಡವನ್ನ ನಿಭಾಯಿಸುವ ರೀತಿ, ಎಂತವರಿಗೂ ಸ್ಫೂರ್ತಿ. ಇನ್ನು ಧೋನಿ ಕ್ರೇಝ್, ಫ್ಯಾನ್ ಫಾಲೋಯಿಂಗ್ ಬಗ್ಗೆಯಂತೂ ಹೇಳೋದೆ ಬೇಡ. ಐಪಿಎಲ್ಲೇ ಅದಕ್ಕೆ ಸಾಕ್ಷಿ..!
CSK ದೇಶದ ಯಾವುದೇ ಮೂಲೆಯಲ್ಲಿ ಆಡಿದ್ರು, ಅಲ್ಲಿ ಯೆಲ್ಲೋ ಸೈನ್ಯವೇ ತುಂಬಿ ತುಳುಕುತ್ತೆ. ಅದಕ್ಕೆ ಕಾರಣ, ಒನ್ ಆ್ಯಂಡ್ ಓನ್ಲಿ ಧೋನಿ. ಭಾರತದಲ್ಲಷ್ಟೇ ಅಲ್ಲದೇ, ಪ್ರಪಂಚದಾದ್ಯಂತ ಮಹಿಗೆ ಅಭಿಮಾನಿಗಳಿದ್ದಾರೆ. ಕೋಟಿ-ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ಮಹಿ, ಸಾವಿರಾರು ಕೋಟಿಗೆ ಒಡೆಯರಾಗಿದ್ದಾರೆ.
ನೂರಾರು ಆಟಗಾರರನ್ನು ಬದಲಿಸಿದರೂ ಆರ್‌ಸಿಬಿಗೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಏಕೆ? ಕೊನೆಗೂ ಬಯಲಾಯ್ತು ಸತ್ಯ..!
ಯೆಸ್, ಸದ್ಯ ಜಗತ್ತಿನ ಶ್ರೀಮಂತ ಕ್ರಿಕೆಟರ್‌ಗಳಲ್ಲಿ ಧೋನಿಯು ಒಬ್ರು. ಇತ್ತೀಚೆಗೆ ವಾಣಿಜ್ಯ ಸಂಸ್ಥೆಯೊಂದು ಧೋನಿಯ ಬ್ರ್ಯಾಂಡ್ ವ್ಯಾಲ್ಯೂನ ಅಂದಾಜಿಸಿದೆ. ಇದರ ಪ್ರಕಾರ ಧೋನಿಯ ಬ್ರ್ಯಾಂಡ್ ವ್ಯಾಲ್ಯೂ 766 ಕೋಟಿ ರೂಪಾಯಿ ಎನ್ನಲಾಗಿದೆ.
ಇಂಟರ್ನ್ಯಾಷನಲ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರೋ ಧೋನಿ, IPLನಲ್ಲಿ ಮಾತ್ರ ಆಡ್ತಿದ್ದಾರೆ. CSK ಧೋನಿಗೆ ಪ್ರತಿವರ್ಷ 12 ಕೋಟಿ ವೇತನ ನೀಡ್ತಿದೆ. ಅಲ್ಲದೇ, 28ಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್ಗಳಿಗೆ ಧೋನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಬ್ರಾಂಡ್ಗಳ ಒಂದು ದಿನ ಜಾಹೀರಾತು ಶೂಟಿಂಗ್ಗಾಗಿ ಧೋನಿ 4ರಿಂದ 6 ಕೋಟಿ ಸಂಭಾವನೆ ಪಡೆದುಕೊಳ್ತಾರೆ.
ಸೋಷಿಯಲ್ ಮೀಡಿಯಾ ಮೂಲಕವೂ ಧೋನಿ, ಕೋಟ್ಯಂತರ ರೂಪಾಯಿ ಜೇಬಿಗಿಳಿಸ್ತಾರೆ. ಇನ್ಸ್ಟ್ರಾಗ್ರಾಮ್ನಲ್ಲಿ 4 ಕೋಟಿಗು ಹೆಚ್ಚು ಮತ್ತು ಫೇಸ್ಬುಕ್ನಲ್ಲಿ 2.5 ಕೋಟಿಗೂ ಅಧಿಕ ಫಾಲೋವರ್ಸ್ನ ಧೋನಿ ಹೊಂದಿದ್ದಾರೆ. ಈ ಎರಡು ಅಕೌಂಟ್ಗಳ ಮೂಲಕ ಧೋನಿ ವಿವಿಧ ಬ್ರಾಂಡ್ಗಳನ್ನ ಪ್ರಚಾರ ಮಾಡ್ತಾರೆ. ಇದಕ್ಕಾಗಿ ಪ್ರತಿ ಕಮರ್ಷಿಯಲ್ ಪೋಸ್ಟ್‌ಗೆ 1 ರಿಂದ 2 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ.
ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಭಾರತ ತಂಡದ ಕ್ರಿಕೆಟ್ ಆಟಗಾರ್ತಿಯನ್ನು ಪ್ರವಾಹ ಭೀತಿಯಿಂದ ರಕ್ಷಿಸಿದ NDRF..!
ಇನ್ನು ಸ್ಪೋರ್ಟ್ಸ್ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಧೋನಿ ನೂರಾರು ಕೋಟಿ ಇನ್ವೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಧೋನಿ ಸ್ವಂತ ಸಿನಿಮಾ ಪ್ರೊಡಕ್ಷನ್ ಹೌಸ್ನ ಕೂಡ ಆರಂಭಿಸಿದ್ದಾರೆ. ಈಗಾಗ್ಲೇ ತಮಿಳಿನಲ್ಲಿ ಒಂದು ಸಿನಿಮಾ ನಿರ್ಮಿಸಿದ್ದಾರೆ.
ಧೋನಿಯ ಡೆಹ್ರಾಡೂನ್ ಮನೆ ಮೌಲ್ಯವೇ 17.8 ಕೋಟಿ..!
ಧೋನಿ ತಮ್ಮ ತವರು ರಾಂಚಿ ಮತ್ತು ಉತ್ತರಖಂಡ್‌ನ ಡೆಹ್ರಾಡೂನ್ನಲ್ಲಿ ಒಂದೊಂದು ಮನೆ ಹೊಂದಿದ್ದು, ಡೆಹ್ರಾಡೂನ್ ಮನೆಯ ಮೌಲ್ಯ 17.8 ಕೋಟಿಯಾದ್ರೆ, ರಾಂಚಿಯ ಫಾರ್ಮ್ಹೌಸ್ ಮನೆಯ ಮೌಲ್ಯ 6 ಕೋಟಿಯಾಗಿದೆ. ಆಡಿ, ಹಮ್ಮರ್, ಲ್ಯಾಂಡ್ ರೋವರ್, ಫೆರಾರಿ, ಮರ್ಸಡಿಸ್ ಬೆನ್ಜ್, ರೋಲ್ಸ್ ರಾಯ್ಸ್, ಸೇರಿದಂತೆ ಹಲವು ಐಷಾರಾಮಿ ಕಾರ್‌ಗಳಿಗೆ ಮಹಿ ಮಾಲೀಕರಾಗಿದ್ದಾರೆ. ಕಾರ್ ಅಲ್ಲದೇ, ವಿವಿಧ ಇಂಪೋರ್ಟೆಡ್ ಬೈಕ್‌ಗಳು ಧೋನಿ ಮನೆಯ ಗ್ಯಾರೇಜ್ನಲ್ಲಿವೆ. ಅದೇನೆ ಇರಲಿ, ನಿವೃತ್ತಿ ಹೇಳಿ ಮೂರು ವರ್ಷವಾಗಿದ್ರು ಧೋನಿ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್