ಮಹಾರಾಜ ಸೆಮೀಸ್‌ಗೆ ಅಖಾಡ ಸಿದ್ಧ: ಇಂದು ಬೆಂಗಳೂರು-ಗುಲ್ಬರ್ಗಾ, ನಾಳೆ ಮೈಸೂರು-ಹುಬ್ಬಳ್ಳಿ ಫೈಟ್..!
ಕೆಎಸ್‌ಸಿಎ ಮಹಾರಾಜ ಟ್ರೋಫಿ ನಿರ್ಣಾಯಕ ಘಟ್ಟ ತಲುಪಿದ್ದು, ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್ ವೇಳಾಪಟ್ಟಿ ಅಂತಿಮಗೊಂಡಿದೆ. ಶುಕ್ರವಾರ ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ಸೆಣಸಾಡಲಿವೆ. ಶನಿವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಮೈಸೂರು ವಾರಿಯರ್ಸ್ ಹಾಗೂ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿಯಾಗಲಿವೆ.
ಗುರುವಾರ ನಡೆಯಬೇಕಿದ್ದ ಮಂಗಳೂರು ಹಾಗೂ ಬೆಂಗಳೂರು ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡವು. ಇದರೊಂದಿಗೆ ಗುಂಪು ಹಂತದ 10 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 15 ಅಂಕ ಸಂಪಾದಿಸಿದ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡಿತು. ಗುಲ್ಬರ್ಗಾ 4ನೇ ಸ್ಥಾನ ಪಡೆದುಕೊಂಡಿತು.
ಶಿವಮೊಗ್ಗ ತಂಡದಲ್ಲೇ ಇದ್ದಾನೆ ಆರ್‌ಸಿಬಿಗೆ ಹೇಳಿ ಮಾಡಿಸಿದಂತ ಆಟಗಾರ..! ಕ್ರೀಸ್‌ಗಿಳಿದ್ರೆ ಸಿಕ್ಸರ್ ಸುರಿಮಳೆ
ಅತ್ತ, ಮೈಸೂರು ವಾರಿಯರ್ಸ್ ತಂಡ 10 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 3ನೇ ಸ್ಥಾನಿಯಾಯಿತು. ಗುರುವಾರದ ಕೊನೆ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಸೋಲನುಭವಿಸಿದ ಹುಬ್ಬಳ್ಳಿ 12 ಅಂಕಗಳೊಂದಿಗೆ 3ನೇ ಸ್ಥಾನ ಪಡೆದುಕೊಂಡಿತು. ಮೈಸೂರು ವಾರಿಯರ್ಸ್ ತಂಡ 14 ಅಂಕಗಳೊಂದಿಗೆ 2ನೇ ಸ್ಥಾನ ಪಡೆದು ಅಭಿಯಾನ ಕೊನೆಗೊಳಿಸಿತು.
ಶಿವಮೊಗ್ಗ ಹಾಗೂ ಮಂಗಳೂರು ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದವು. ಶಿವಮೊಗ್ಗ 10 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 6 ಅಂಕ ಗಳಿಸಿದ್ದರೆ, ಮಂಗಳೂರು ಕೇವಲ 1 ಜಯದೊಂದಿಗೆ 4 ಅಂಕ ಗಳಿಸಿತು.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲಿರುವ ಶಿಖರ್ ಧವನ್
ನವದೆಹಲಿ: ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಮುಂದಿನ ತಿಂಗಳು ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್(ಎಲ್‌ಎಲ್‌ಸಿ) ಟೂರ್ನಿಯಲ್ಲಿ ಆಡಲಿದ್ದಾರೆ. ಶನಿವಾರ 38 ವರ್ಷದ ಧವನ್ ಎಲ್ಲಾ ಮಾದರಿಯ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಒಟ್ಟು ಸಂಪತ್ತು ಎಷ್ಟು? ಅಮಿತ್ ಶಾ ಪುತ್ರನ ಎಜುಕೇಷನ್ ಏನು?
2022ರಲ್ಲಿ ನಿವೃತ್ತ ಕ್ರಿಕೆಟಿಗರಿಗಾಗಿ ಎಲ್‌ಎಲ್‌ಸಿ ಆರಂಭಗೊಂಡಿದ್ದು, ಈ ಬಾರಿ 3ನೇ ಆವೃತ್ತಿಯ ಲೀಗ್ ನಡೆಯಲಿದೆ. ಅವರು ಯಾವ ತಂಡದ ಪರ ಆಡಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. 2010ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಧವನ್, ದೇಶದ ಪರ 269 ಪಂದ್ಯಗಳನ್ನಾಡಿದ್ದಾರೆ.
ಲಖನೌ ತಂಡಕ್ಕೆ ಜಹೀರ್ ಖಾನ್ ನೂತನ ಮೆಂಟರ್
ಕೋಲ್ಕತಾ: ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಐಪಿಎಲ್‌ನ ಲಖನೌ ಸೂಪರ್ ಜೈಂಟ್ಸ್ ತಂಡದ ನೂತನ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ. ಭಾರತ ಪರ 300ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ 45 ವರ್ಷದ ಜಹೀರ್ ಐಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ ಹಾಗೂ ಡೆಲ್ಲಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.
2017ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅವರು, 2018ರಿಂದ 2022ರ ವರೆಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. 2 ವರ್ಷಗಳ ಬಳಿಕ ಮತ್ತೆ ಐಪಿಎಲ್‌ಗೆ ಮರಳಲಿದ್ದಾರೆ. ಲಖನೌಗೆ ಈ ಮೊದಲು ಗೌತಮ್ ಗಂಭೀರ್ ಮೆಂಟರ್ ಆಗಿದ್ದರು. ಬಳಿಕ ಕಳೆದ ವರ್ಷ ಅವರು ಕೆಕೆಆರ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದರು.