Asianet Suvarna News Asianet Suvarna News

ಕರ್ಮ ರಿಟರ್ನ್ಸ್‌..! ಗಂಗೂಲಿ ಬದುಕಿನಲ್ಲಿ ಆಟವಾಡಿದ್ದ ಕೋಚ್ ಗ್ರೆಗ್ ಚಾಪೆಲ್ ಪಾಡು ಕೇಳೋರೆ ಗತಿಯಿಲ್ಲ..!

ಆಧುನಿಕ ಕ್ರಿಕೆಟ್‌ನಲ್ಲಿ ಆಟಗಾರರು ಕೋಟ್ಯಾಂತರ ರುಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಆದರೆ ಈ ಹಿಂದಿನ ತಲೆಮಾರಿನ ಆಟಗಾರರ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತ ಎನ್ನುವಂತಿತ್ತು. ಈ ಹಿಂದಿನ ತಲೆಮಾರಿನ ಆಟಗಾರರು ಕೇವಲ ಕ್ರಿಕೆಟ್‌ ಮಂಡಳಿಯ ಕಾಂಟ್ರ್ಯಾಕ್ಟ್‌ ಅನ್ನೇ ಅವಲಂಬಿಸಿದ್ದರು.

Legendary cricketer and former India coach Greg Chappell struggling financially kvn
Author
First Published Oct 28, 2023, 3:52 PM IST

ಬೆಂಗಳೂರು: ಕ್ರಿಕೆಟ್‌ ಇದೀಗ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದು ಎನಿಸಿಕೊಂಡಿದೆ. ಅದರಲ್ಲೂ ಟಿ20 ಫ್ರಾಂಚೈಸಿ ಲೀಗ್‌ಗಳು ಬೆಳಕಿಗೆ ಬಂದ ಮೇಲಂತೂ ಕ್ರಿಕೆಟಿಗರು ಕೆಲವು ಕ್ರಿಕೆಟಿಗರು ಇದರಿಂದಲೇ ನೂರಾರು ಕೋಟಿಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಆಟಗಾರರು ಸಂಭಾವನೆಯ ಜತೆಗೆ ಎಂಡೋರ್ಸ್‌ಮೆಂಟ್ ಹಾಗೂ ಜಾಹಿರಾತುಗಳ ಮೂಲಕವೂ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸುತ್ತಾರೆ.

ಆಧುನಿಕ ಕ್ರಿಕೆಟ್‌ನಲ್ಲಿ ಆಟಗಾರರು ಕೋಟ್ಯಾಂತರ ರುಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಆದರೆ ಈ ಹಿಂದಿನ ತಲೆಮಾರಿನ ಆಟಗಾರರ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತ ಎನ್ನುವಂತಿತ್ತು. ಈ ಹಿಂದಿನ ತಲೆಮಾರಿನ ಆಟಗಾರರು ಕೇವಲ ಕ್ರಿಕೆಟ್‌ ಮಂಡಳಿಯ ಕಾಂಟ್ರ್ಯಾಕ್ಟ್‌ ಅನ್ನೇ ಅವಲಂಬಿಸಿದ್ದರು. ಇದೀಗ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಹಾಗೂ ಒಂದು ಕಾಲದಲ್ಲಿ ಸಚಿನ್‌ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರಂತಹ ದಿಗ್ಗಜ ಕ್ರಿಕೆಟಿಗರಿಗೆ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅವರಿಗೆ ದೇಣಿಗೆ ಸಂಗ್ರಹದ ಅಭಿಯಾನ ಕೂಡಾ ನಡೆಯುತ್ತಿದೆ.

ಪಾಕ್ ಕ್ರಿಕೆಟಿಗರಿಗೆ ಸಿಕ್ಕಿಲ್ಲ 5 ತಿಂಗಳ ಸ್ಯಾಲರಿ, 4 ಸೋಲಿನ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ!

ಹೌದು, ಭಾರತ ಕ್ರಿಕೆಟ್ ತಂಡವು ಕಂಡಂತಹ ಅತ್ಯಂತ ವಿವಾದಾತ್ಮಕ ಕೋಚ್ ಎನಿಸಿಕೊಂಡಿದ್ದ ಗ್ರೆಗ್ ಚಾಪೆಲ್, ಟೀಂ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿ ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಆಟ ಆಡಿದ್ದರು. 2005ರಿಂದ 2007ರ ಅವಧಿಯಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಚಾಪೆಲ್, ದಾದಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ರಾಹುಲ್‌ ದ್ರಾವಿಡ್‌ಗೆ ಟೀಂ ಇಂಡಿಯಾ ನಾಯಕತ್ವ ಪಟ್ಟ ಕಟ್ಟಿದ್ದರು. ಇದರ ಜತೆಗೆ ಫಾರ್ಮ್‌ ಸಮಸ್ಯೆಯ ನೆಪವೊಡ್ಡಿ ಸೌರವ್ ಗಂಗೂಲಿಯನ್ನು ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಿಂದಲೂ ಹೊರಬೀಳುವಂತೆ ಮಾಡಿದ್ದರು. ಹೀಗಿದ್ದೂ ಗಂಗೂಲಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು 2007ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗ್ರೂಪ್‌ ಹಂತದಲ್ಲೇ ಹೊರಬೀಳುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿತ್ತು.   

ಗ್ರೆಗ್ ಚಾಪೆಲ್‌, ಹಣಕಾಸಿನ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಸ್ನೇಹಿತರು ಆನ್‌ಲೈನ್ ಮೂಲಕ ಸಮುದಾಯದ ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಕೆಲವು ಮಾಧ್ಯಮಗಳ ವರದಿಯ ಪ್ರಕಾರ, 75 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಚಾಪೆಲ್, ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಚಾಪೆಲ್ ತಾವು ಸಾಮಾನ್ಯ ಜೀವನ ನಡೆಸುವುದಕ್ಕೆ ಅಡ್ಡಿಯಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ತಮ್ಮ ಅದ್ದೂರಿ ಕ್ರಿಕೆಟ್ ಬದುಕಿನಂತೆ ತನ್ನ ನಿವೃತ್ತಿ ನಂತರದ ಬದುಕು ಐಶಾರಾಮಿಯಾಗಿ ಕಳೆಯುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ದ್ರಾವಿಡ್ ಕೋಚ್ ಅವಧಿ ಶೀಘ್ರದಲ್ಲೇ ಅಂತ್ಯ, ಆಸ್ಟ್ರೇಲಿಯಾ ಸರಣಿಗೆ ವಿವಿಎಸ್ ಲಕ್ಷ್ಮಣ್‌ಗೆ ಜವಾಬ್ದಾರಿ!

'ನನ್ನ ಬದುಕು ಹತಾಶೆಯ ಹಂತ ತಲುಪಿದೆ ಎಂದು ನಾನು ಹೇಳುತ್ತಿಲ್ಲ. ಯಾಕೆಂದರೆ ನಾವು ಹಾಗಿಲ್ಲ. ಹಾಗಂತ ನಾವು ಐಶಾರಾಮಿ ಜೀವನವನ್ನು ಸಹ ನಡೆಸುತ್ತಿಲ್ಲ. ನಾವು ಕ್ರಿಕೆಟ್ ಆಡಿದ್ದರಿಂದ, ನಾವೆಲ್ಲರೂ ಐಷಾರಾಮಿ ಮಡಿಲಲ್ಲಿ ಬದುಕುತ್ತಿದ್ದೇವೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ನಾನು ಖಂಡಿತವಾಗಿಯೂ ಬಡವ ಎಂದು ಅಳುತ್ತಿಲ್ಲವಾದರೂ, ಇಂದಿನ ಆಟಗಾರರ ಪಡೆಯುವಂತಹ ಲಾಭವನ್ನು ನಾವು ಪಡೆದುಕೊಳ್ಳುತ್ತಿಲ್ಲ' ಎಂದು ಗ್ರೆಗ್ ಚಾಪೆಲ್ ಹೇಳಿದ್ದಾರೆ.

ಇನ್ನು ಸ್ನೇಹಿತರೆಲ್ಲಾ ಸೇರಿ ತಮಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಚಾಪೆಲ್, "ನಾವು ಐಶಾರಾಮಿ ಜೀವನ ನಡೆಸುತ್ತಿಲ್ಲ ಎನ್ನುವುದನ್ನು ಗಮನಿಸಿದ ಸ್ನೇಹಿತರು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಒಂದಂತೂ ಸತ್ಯ, ನಾನು & ನನ್ನ ಪತ್ನಿ ಜೂಡಿ ಸಾಮಾನ್ಯ ಜೀವನ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸೌರವ್ ಗಂಗೂಲಿ ಕ್ರಿಕೆಟ್ ಬದುಕಿನಲ್ಲಿ ಆಟವಾಡಿದ್ದಕ್ಕೆ ಚಾಪೆಲ್‌ಗೆ ಈ ಪರಿಸ್ಥಿತಿ ಎದುರಾಗಿದೆ ಎಂದು ದಾದಾ ಫ್ಯಾನ್ಸ್ ಹಿಡಿಶಾಪ ಹಾಕಲಾರಂಭಿಸಿದ್ದಾರೆ.

Follow Us:
Download App:
  • android
  • ios