Asianet Suvarna News Asianet Suvarna News

ನ್ಯೂಜಿಲೆಂಡ್‌ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗುಳಿದ ಮಾರಕ ವೇಗಿ ಟ್ರೆಂಟ್‌ ಬೌಲ್ಟ್‌..!

ನ್ಯೂಜಿಲೆಂಡ್ ಕೇಂದ್ರೀಯ ಗುತ್ತಿಗೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದ ಟ್ರೆಂಟ್‌ ಬೌಲ್ಟ್‌
ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಮಿಂಚುತ್ತಿರುವ ಎಡಗೈ ವೇಗಿ
ಕಿವೀಸ್‌ ಪರ 215 ಪಂದ್ಯಗಳನ್ನಾಡಿದ್ದು, ಒಟ್ಟು 548 ವಿಕೆಟ್‌ಗಳನ್ನು ಗಳಿಸಿರುವ ಬೌಲ್ಟ್‌ 

Left arm Pacer Trent Boult to be released from New Zealand Cricket contract kvn
Author
Bengaluru, First Published Aug 11, 2022, 11:07 AM IST

ವೆಲ್ಲಿಂಗ್ಟನ್‌(ಆ.11): ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ನ್ಯೂಜಿಲೆಂಡ್‌ನ ಪ್ರಮುಖ ವೇಗಿ ಟ್ರೆಂಟ್‌ ಬೌಲ್ಟ್‌ ರಾಷ್ಟ್ರೀಯ ತಂಡದ ಗುತ್ತಿಗೆಯಿಂದ ಬಿಡುಗಡೆ ಪಡೆದುಕೊಂಡಿದ್ದಾರೆ. 33 ವರ್ಷದ ಬೌಲ್ಟ್‌ ಇತ್ತೀಚೆಗಷ್ಟೇ ಸತತ ವಿದೇಶಿ ಟೂರ್ನಿಗಳ ಬಗ್ಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಜೊತೆ ಚರ್ಚಿಸಿ, ತಮ್ಮನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಮಂಡಳಿ ಒಪ್ಪಿಗೆ ನೀಡಿದ್ದು, ಬೌಲ್ಟ್‌ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದೆ. 

‘ಬೌಲ್ಟ್‌ ಇನ್ನೂ ನ್ಯೂಜಿಲೆಂಡ್‌ ತಂಡಕ್ಕೆ ಆಯ್ಕೆಯಾಗಲು ಅರ್ಹರಾಗಿರುತ್ತಾರೆ. ಆದರೂ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರಿಗೆ ಆದ್ಯತೆ ನೀಡಲಾಗುವುದು’ ಎಂದಿದೆ. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಾದಾರ್ಪಣೆ ಮಾಡಿದ್ದ ಬೌಲ್ಟ್‌ ಕಿವೀಸ್‌ ಪರ 215 ಪಂದ್ಯಗಳನ್ನಾಡಿದ್ದು, ಒಟ್ಟು 548 ವಿಕೆಟ್‌ಗಳನ್ನು ಪಡೆದಿದ್ದಾರೆ.

ಐಸಿಸಿ ಟಿ20 ರ‍್ಯಾಂಕಿಂಗ್‌‌: 2ನೇ ಸ್ಥಾನದಲ್ಲೇ ಉಳಿದ ಸೂರ್ಯ

ದುಬೈ: ಭಾರತದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಐಸಿಸಿ ಟಿ20 ರ‍್ಯಾಂಕಿಂಗ್‌‌ನ ನೂತನ ಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಕಳೆದ ವಾರ ಪ್ರಕಟಗೊಂಡಿದ್ದ ಪಟ್ಟಿಯಲ್ಲಿ ಅವರು ತಮ್ಮ ವೃತ್ತಿಬದುಕಿನ ಶ್ರೇಷ್ಠ 2ನೇ ಸ್ಥಾನಕ್ಕೇರಿದ್ದರು.

ಏಕದಿನ ರ‍್ಯಾಂಕಿಂಗ್‌‌: 2ನೇ ಸ್ಥಾನಕ್ಕೆ ಕುಸಿದ ಜಸ್ಪ್ರೀತ್‌ ಬುಮ್ರಾ..!

ಇನ್ನು ಶ್ರೇಯಸ್‌ ಅಯ್ಯರ್‌ 6 ಸ್ಥಾನ ಮೇಲೇರಿ 19ನೇ ಸ್ಥಾನ ಪಡೆದಿದ್ದಾರೆ. ಬುಧವಾರ ಪ್ರಕಟಗೊಂಡ ಪರಿಷ್ಕೃತ ಪಟ್ಟಿಯಲ್ಲಿ ಸೂರ್ಯ 805 ಅಂಕಗಳನ್ನು ಸಂಪಾದಿಸಿದ್ದಾರೆ. ಇಶಾನ್‌ ಕಿಶನ್‌ ಹಾಗೂ ರೋಹಿತ್‌ ಶರ್ಮಾ ಕ್ರಮವಾಗಿ 15, 16ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ಬಾಬರ್‌ ಆಜಂ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಬೌಲಿಂಗ್‌ ರ‍್ಯಾಂಕಿಂಗ್‌‌ನಲ್ಲಿ ಭುವನೇಶ್ವರ್‌ ಕುಮಾರ್‌ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ರವಿ ಬಿಷ್ಣೋಯಿ 50 ಸ್ಥಾನ ಮೇಲೇರಿ 44ನೇ ಸ್ಥಾನ ಪಡೆದರೆ, ಕುಲ್ದೀಪ್‌ ಯಾದವ್‌ 58 ಸ್ಥಾನ ಜಿಗಿದು 87ನೇ ಸ್ಥಾನಕ್ಕೆ ತಲುಪಿದ್ದಾರೆ.

3ನೇ ಏಕದಿನ: ಬಾಂಗ್ಲಾಕ್ಕೆ ಜಿಂಬಾಬ್ವೆ ವಿರುದ್ಧ ಗೆಲುವು

ಹರಾರೆ: ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ 105 ರನ್‌ ಗೆಲುವು ಸಾಧಿಸಿದ್ದು, ವೈಟ್‌ವಾಶ್‌ ಮುಖಭಂಗದಿಂದ ಪಾರಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಿಂಬಾಬ್ವೆ ಜಯಗಳಿಸಿತ್ತು. ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 9 ವಿಕೆಟ್‌ ಕಳೆದುಕೊಂಡು 256 ರನ್‌ ಕಲೆ ಹಾಕಿತು. ಅಫೀಪ್‌ ಹೊಸೈನ್‌ ಔಟಾಗದೆ 85, ಅನಾಮುಲ್‌ ಹಕ್‌ 76 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆತಿಥೇಯ ತಂಡ 32.2 ಓವರ್‌ಗಳಲ್ಲಿ 151 ರನ್‌ಗೆ ಆಲೌಟಾಯಿತು. ಮುಸ್ತಾಫಿಜುರ್‌ ರಹ್ಮಾನ್‌ 17 ರನ್‌ಗೆ 4 ವಿಕೆಟ್‌ ಕಿತ್ತರು.

Follow Us:
Download App:
  • android
  • ios