ಕೋಲ್ಕತಾ(ನ.25): ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ನಾಯಕನಾಗಿ ಟೀಂ ಇಂಡಿಯಾಗೆ ಹೊಸ ದಿಕ್ಕು ನೀಡಿದ ಗಂಗೂಲಿ, ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಪಿಂಕ್ ಬಾಲ್ ಟೆಸ್ಟ್ ಆಯೋಜಿಸುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿರುವ ಸೌರವ್ ಗಂಗೂಲಿಯನ್ನು ಪುತ್ರಿ ಸನಾ ಗಂಗೂಲಿ ಟ್ರೋಲ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by SOURAV GANGULY (@souravganguly) on Nov 24, 2019 at 5:53am PST

ಇದನ್ನೂ ಓದಿ: ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಂಗೂಲಿ ಕೂಡ ಹಾಜರಿದ್ದರು. ಈ ವೇಳೆ ತೆಗೆದ ಫೋಟೋವನ್ನು ಗಂಗೂಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಗಂಭೀರವಾಗಿ ಕಾಣಿಸಿಕೊಂಡಿರುವ ಈ ಫೋಟೋಗೆ ಗಂಗೂಲಿ ಪುತ್ರಿ ಸನಾ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ನೋಟ ಹೇಳುತ್ತಿದೆ, ನಿಮಗಿಷ್ಟವಾಗದಿರುವುದೇನು? ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಇದು ದಾದಾ ಪಡೆ ಎಂದು ಗುಡುಗಿದ ವಿರಾಟ್..!

ಬರು ಬರುತ್ತಾ ನೀನು ಯಾರ ಮಾತನ್ನೂ ಕೇಳುತ್ತಿಲ್ಲ ಎಂದು ಪುತ್ರಿಯ ಪ್ರತಿಕ್ರಿಯೆಗೆ ಗಂಗೂಲಿ ಪ್ರತ್ಯುತ್ತರ ನೀಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಗಂಗೂಲಿ ಪುತ್ರಿ ಸನಾ ಗಂಗೂಲಿ, ಎಲ್ಲವೂ ನಿಮ್ಮಿಂದಲೇ ಕಲಿತದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಗಂಗೂಲಿಯ ಆಕ್ರಮಣಕಾರಿ, ಹಾಗೂ ತನಗೆ ಸರಿ ಅನಿಸಿದ್ದನ್ನು ಮಾಡುವ ಜಾಯಮಾನವನ್ನು ಟ್ರೋಲ್ ಮಾಡಿದ್ದಾರೆ.