ಭಾರತ ಎದುರಿನ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ
ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಕಿವೀಸ್ ಬಲಿಷ್ಠ ತಂಡ ಪ್ರಕಟಿಸಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ವೆಲ್ಲಿಂಗ್ಟನ್(ಜ.31): ಭಾರತ ವಿರುದ್ಧ ಫೆ.5ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಗುರುವಾರ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿತು. ಕಿವೀಸ್ ಪಡೆ ಬಲಿಷ್ಠ ತಂಡವನ್ನೇ ಪ್ರಕಟಿಸದೆ.
ತಂಡದಲ್ಲಿ 6 ಅಡಿ 8 ಇಂಚು ಉದ್ದದ, ದೇಶದ ಅತಿ ಉದ್ದದ ಕ್ರಿಕೆಟಿಗ ಎನ್ನುವ ಖ್ಯಾತಿ ಹೊಂದಿರುವ ಕೈಲ್ ಜ್ಯಾಮಿಸನ್‌ಗೆ ಸ್ಥಾನ ಸಿಕ್ಕಿದೆ. ಪ್ರಮುಖ ವೇಗಿಗಳಾದ ಟ್ರೆಂಟ್ ಬೌಲ್ಟ್, ಲಾಕಿ ಫಗ್ರ್ಯೂಸನ್ ಹಾಗೂ ಮ್ಯಾಟ್ ಹೆನ್ರಿ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಸ್ಥಾನ ನೀಡಲಾಗಿಲ್ಲ. ಇಶ್ ಸೋಧಿ ಕೇವಲ ಮೊದಲ ಪಂದ್ಯವನ್ನಷ್ಟೇ ಆಡಲಿದ್ದಾರೆ.
ಇನ್ನುಳಿದಂತೆ ಆಲ್ರೌಂಡರ್ ಜೇಮ್ಸ್ ನೀಶಮ್, ಹೆನ್ರಿ ನಿಕೋಲಸ್, ಟಾಮ್ ಲಾಥಮ್, ಟಾಮ್ ಬ್ಲಂಡೆಲ್ ಏಕದಿನ ತಂಡ ಕೂಡಿಕೊಂಡಿದ್ದಾರೆ. ಟಿ20 ಸರಣಿ ಆಡುತ್ತಿರುವ ಅನುಭವಿ ಕ್ರಿಕೆಟಿಗರಾದ ಮಾರ್ಟಿನ್ ಗಪ್ಟಿಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟಿಮ್ ಸೌಥಿ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
4ನೇ ಟಿ20: ಸರಣಿ ಗೆದ್ದ ಭಾರತ ತಂಡದಲ್ಲಿ ಬದಲಾವಣೆ; ಇಲ್ಲಿದೆ ಸಂಭಾವ್ಯ XI
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಫೆಬ್ರವರಿ 5ರಂದು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿದೆ. ಇನ್ನು ಎರಡನೇ ಪಂದ್ಯ ಫೆ.08ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ. ಇನ್ನು ಮೂರನೇ ಹಾಗೂ ಅಂತಿಮ ಪಂದ್ಯ ಬೇ ಓವಲ್‌ನಲ್ಲಿ ಜರುಗಲಿದೆ.
ತಂಡ: ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಮಾರ್ಟಿನ್ ಗಪ್ಟಿಲ್, ಟಾಮ್ ಲೇಥಮ್, ರಾಸ್ ಟೇಲರ್, ಟಾಮ್ ಬ್ಲಂಡೆಲ್, ಕಾಲಿನ್ ಡಿ ಗ್ರಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಕೈಲ್ ಜ್ಯಾಮಿಸನ್, ಸ್ಕಾಟ್ ಕುಗ್ಗಿಲಿಯನ್, ಜೇಮ್ಸ್ ನೀಶಮ್, ಹ್ಯಾಮಿಶ್ ಬೆನ್ನೆಟ್.