4ನೇ ಟಿ20: ಸರಣಿ ಗೆದ್ದ ಭಾರತ ತಂಡದಲ್ಲಿ ಬದಲಾವಣೆ; ಇಲ್ಲಿದೆ ಸಂಭಾವ್ಯ XI
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್ ಓವರ್ ಪಂದ್ಯದ ಹ್ಯಾಂಗ್ ಓವರ್‌ನಿಂದ ಯಾರೂ ಹೊರಬಂದಿಲ್ಲ. ಆಗಲೆ 4ನೇ ಪಂದ್ಯಕ್ಕೆ ಉಭಯ ತಂಡಗಳು ಅಭ್ಯಾಸ ನಡೆಸುತ್ತಿದೆ. ಜ.31ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.
ವೆಲ್ಲಿಂಗ್ಟನ್(ಜ.30): ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಈಗಾಗಲೇ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ಕ್ಲೀನ್ ಸ್ವೀಪ್‌ನತ್ತ ಚಿತ್ತ ಹರಿಸಿದೆ. ಇನ್ನುಳಿದಿರುವ 2 ಪಂದ್ಯದಲ್ಲಿ ಅಬ್ಬರಿಸಲು ಕೊಹ್ಲಿ ಸೈನ್ಯ ಸಜ್ಜಾಗಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: INDvNZ: ಶಮಿ ವಿಕೆಟ್, ರೋಹಿತ್ ಸಿಕ್ಸರ್, ಹೇಗಿತ್ತು ಭಾರತದ ಸೂಪರ್ ಗೆಲುವು?
ಬೌಲಿಂಗ್‌ನಲ್ಲಿ ದುಬಾರಿಯಾದೂರೂ ಶಾರ್ದೂಲ್ ಠಾಕೂರ್ ಕಳೆದ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ್ದಾರೆ. ಅಂತಿಮ 2 ಪಂದ್ಯಕ್ಕೆ ಬೆಂಂಚ್ ಸ್ಟ್ರೆಂಥ್ ಪರೀಕ್ಷಿಸಲು ಶಾರ್ದೂಲ್ ಠಾಕೂರ್ ಬದಲು ನವದೀಪ್ ಸೈನಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಪಂದ್ಯ ಟೈ; ಹಿಂದಿದೆ ರೋಚಕ ಕಹಾನಿ!
ಇನ್ನುಳಿದಂತೆ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಮುಂದುವರಿಸುವ ಚಿಂತನೆಯಲ್ಲಿರುವ ಮ್ಯಾನೇಜ್ಮೆಂಟ್, ಸಂಜು ಸಾಮ್ಸನ್‌ಗೆ ಅವಕಾಶ ನೀಡುವ ಸಾಧ್ಯತೆಗಳಿಲ್ಲ.
ಭಾರತ ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ನವದೀಪ್ ಸೈನಿ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ