ಮೈಸೂರು(ನ.22): ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮೈಸೂರು ವಲಯವು ನವೆಂಬರ್ 28 ರಂದು ಕ್ರಿಕೆಟ್‌ ಆರಂಭಿಸುತ್ತಿದೆ. ಕೋವಿಡ್‌ ಕಾರಣದಿಂದ ನಿಲ್ಲಿಸಿದ್ದ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯು ನವೆಂಬರ್ 28 ರಿಂದ ಆರಂಭವಾಗಲಿದೆ. ಕೆಎಸ್‌ಸಿಎ ವ್ಯವಸ್ಥಾಪನಾ ಮಂಡಳಿಯ ತೀರ್ಮಾನದಂತೆ ಪಂದ್ಯಾವಳಿ ಆಯೋಜಿಸಿದೆ. 

ಎಸ್‌ಡಿಎನ್‌ಆರ್‌ ಒಡೆಯರ್‌ ಮೈದಾನ, ಜೆಎಸ್‌ಎಸ್‌ ಎಸ್‌ಜೆಸಿಇ ಮತ್ತು ಮಂಡ್ಯದ ಪಿಇಟಿ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಎಂ. ಗೋಪಾಲಸ್ವಾಮಿ ಸ್ಮಾರಕ ಪಂದ್ಯಾವಳಿಯ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಾವಳಿಯು ಡಿಸೆಂಬರ್ 1 ಮತ್ತು 3 ರಂದು ನಡೆಯಲಿದೆ ಎಂದು ಸಂಚಾಲಕ ಎಸ್‌. ಸುಧಾಕರ್‌ ರೈ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ ತಂದೆಯ ನಿಧನಕ್ಕೆ ಕಂಬನಿ ಮಿಡಿದ ಸೌರವ್ ಗಂಗೂಲಿ

ಈ ಮೊದಲು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಎಸ್‌ಸಿಎ ನವೆಂಬರ್ 20ರಿಂದ ವೈ. ಎಸ್. ರಾಮಸ್ವಾಮಿ ಏಕದಿನ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಿದೆ. ಕೊರೋನಾ ಬಳಿಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ಅತಿದೊಡ್ಡ ಕ್ರಿಕೆಟ್ ಟೂರ್ನಿಯಿದು ಎನಿಸಿದ್ದು, ಬಿಸಿಸಿಐ ನೀಡಿರುವ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಕೆಎಸ್‌ಸಿಎ ಟೂರ್ನಿಯನ್ನು ಆಯೋಜಿಸಿದೆ.