ಬೆಂಗಳೂರು(ಮಾ.26): 1996ರ ಏಕದಿನ ವಿಶ್ವಕಪ್‌ಗೂ ಮೊದಲು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದ ಫ್ಲಡ್‌ಲೈಟ್‌ಗಳನ್ನು 25 ವರ್ಷಗಳ ಬಳಿಕ ಬದಲಾಯಿಸಲಾಗುತ್ತಿದೆ. 

ಮೇ ತಿಂಗಳಲ್ಲಿ ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸುವ ವೇಳೆಗೆ ಕ್ರೀಡಾಂಗಣದಲ್ಲಿ ನೂತನ ಎಲ್‌ಇಡಿ ಫ್ಲಡ್‌ಲೈಟ್‌ಗಳು ಸಿದ್ಧವಿರಲಿವೆ. ಅಂದಾಜು 3.5 ಕೋಟಿ ರು. ವೆಚ್ಚದಲ್ಲಿ ಫ್ಲಡ್‌ಲೈಟ್‌ ಅಳವಡಿಕೆ ಮಾಡಲಾಗುತ್ತಿದೆ. ಈಗಾಗಲೇ 2 ಸ್ತಂಭಗಳನ್ನು ನಿಲ್ಲಿಸುವ ಕಾರ್ಯ ಪೂರ್ಣಗೊಂಡಿದ್ದು, ಇನ್ನೆರೆಡು ಸ್ತಂಭಗಳನ್ನು ನಿಲ್ಲಿಸಬೇಕಿದೆ.

‘ಈ ಹಿಂದೆ ಇದ್ದ ಫ್ಲಡ್‌ಲೈಟ್‌ಗಳ ಗ್ಯಾರಂಟಿ 25 ವರ್ಷಗಳಾಗಿದ್ದವು. ಆ ಅವಧಿ ಮುಗಿದ ಕಾರಣ, ಹೊಸದಾಗಿ ಅಳವಡಿಸಲಾಗುತ್ತಿದೆ. ಎಲ್‌ಇಡಿ ಬಲ್ಬ್‌ಗಳನ್ನು ಬಳಕೆ ಮಾಡಿರುವ ಕಾರಣ, ವಿದ್ಯುತ್‌ ಬಳಕೆ ಪ್ರಮಾಣ ಕಡಿತಗೊಳ್ಳಲಿದೆ. ಜೊತೆಗೆ ಮೈದಾನದ ಮೇಲೆ ಶಾಖ ಕಡಿಮೆಯಾಗಲಿದೆ’ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ವರ್ತನೆ ಬಗ್ಗೆ ಬೆನ್‌ ಸ್ಟೋಕ್ಸ್‌ ಟೀಕೆ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಟ್ಟಮೊದಲ ಬಾರಿಗೆ ಫ್ಲೆಡ್‌ಲೈಟ್‌ ನಡಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಪಂದ್ಯವನ್ನಾಡಿದ್ದವು. 1996ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು.